Sunday, July 13, 2025

ಸತ್ಯ | ನ್ಯಾಯ |ಧರ್ಮ

ಬಾಲಕಿ ಅತ್ಯಾಚಾರ ಮಾಡಿ ಕೊಂದವರು ಅಪ್ರಾಪ್ತ ಬಾಲಕರು: ಆಘಾತಕಾರಿ ಮಾಹಿತಿ ಬಯಲು

ಆಳಂದ (ಕಲಬುರಗಿ): ಶಾಲಾ ಬಾಲಕಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಪ್ರಕರಣದ ಆರೋಪಿಗಳೆಲ್ಲರೂ ಅಪ್ರಾಪ್ತ ಬಾಲಕರು ಎಂಬ ಆಘಾತಕಾರಿ ವಿದ್ಯಮಾನ ಬಯಲಿಗೆ ಬಂದಿದೆ.
ಮೂರು ಜನ ಅಪ್ರಾಪ್ತ ಬಾಲಕರು ತಾಲ್ಲೂಕಿನ ಕೊರಳ್ಳಿ ಗ್ರಾಮದ ಕಬ್ಬಿನಗದ್ದೆಯಲ್ಲಿ 9ನೇ ತರಗತಿ ಓದುತ್ತಿರುವ ವಿದ್ಯಾರ್ಥಿನಿ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ್ದರು. ಅತ್ಯಾಚಾರದ ಬಳಿಕ ಬಳಿಕ ಬಾಲಕಿಯ ಕುತ್ತಿಗೆಯನ್ನು ವೇಲ್‌ನಿಂದ ಸುತ್ತಿ, ಉಸಿರುಗಟ್ಟಿಸಿ ಕೊಲೆ ಮಾಡಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.
ಆಳಂದ ಪೊಲೀಸರು ಅತ್ಯಾಚಾರ ಎಸಗಿದ ಅಪ್ರಾಪ್ತ ಬಾಲಕರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ಮೊಬೈಲ್ ನಲ್ಲಿ ಅಶ್ಲೀಲ ದೃಶ್ಯಗಳನ್ನು ನೋಡಿ, ಅತ್ಯಾಚಾರವೆಸಗಿರುವುದಾಗಿ ವಿಚಾರಣೆ ಸಂದರ್ಭದಲ್ಲಿ ತಿಳಿಸಿದ್ದಾರೆ.

ಕೊರಳ್ಳಿ ಗ್ರಾಮದ ಕಬ್ಬಿನ ಗದ್ದೆಯಲ್ಲಿ ಬಾಲಕಿ ಶವ ಪತ್ತೆಯಾಗಿತ್ತು. ಬಾಲಕಿ ಮೂಲತಃ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನ ಕೋಗನೂರು ಗ್ರಾಮದವಳಾಗಿದ್ದು, ಆಳಂದ ತಾಲ್ಲೂಕಿನ ಕೊರಳ್ಳಿಯ ಸಂಬಂಧಿಕರ ಮನೆಯಲ್ಲಿದ್ದುಕೊಂಡು ಶಾಲೆಗೆ ಹೋಗುತ್ತಿದ್ದಳು.
ದೀಪಾವಳಿ ಹಬ್ಬಕ್ಕೆ ತಂದೆ ತಾಯಿಯ ಬಳಿ ತೆರಳಿದ್ದ ಬಾಲಕಿ ಹಬ್ಬ ಮುಗಿಸಿ ವಾಪಸ್ ನಿನ್ನೆ ಕೊರಳ್ಳಿಗೆ ಬಂದಿದ್ದಳು ಸಂಬಂಧಿಕರ ಮನೆಯಲ್ಲಿದ್ದ ಬಾಲಕಿ ನಿನ್ನೆ ಮಧ್ಯಾಹ್ನ ಬಹಿರ್ದೆಸಗೆ ಹೋಗಿದ್ದವಳು ಸಂಜೆಯಾದರೂ ಮನೆಗೆ ವಾಪಸ್ ಬಂದಿರಲಿಲ್ಲ. ಬಳಿಕ ಸಂಬಂಧಿಕರು ಬಹಿರ್ದೆಸೆಗೆ ತೆರಳಿದ್ದ ಸ್ಥಳಕ್ಕೆ ಹೋಗಿ ಹುಡುಕಾಡಿದರೂ ಬಾಲಕಿ ಪತ್ತೆಯಾಗಿರಲಿಲ್ಲ.
ಕಬ್ಬಿನ ಹೊಲದಲ್ಲಿ ಬಾಲಕಿ ಶವವಾಗಿ ಪತ್ತೆಯಾದ ನಂತರ, ಆಳಂದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅತ್ಯಾಚಾರ ಎಸಗಿ ಕೊಲೆ ಮಾಡಿದ ಆರೋಪಿಗಳಿಗಾಗಿ ಪೊಲೀಸರಿಂದ ಹುಡುಕಾಟ ನಡೆಸಿದ ಪೊಲೀಸರಿಗೆ ಅಪ್ತಾಪ್ತ ಬಾಲಕರು ಸಿಕ್ಕಿಬಿದ್ದಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page