Wednesday, June 19, 2024

ಸತ್ಯ | ನ್ಯಾಯ |ಧರ್ಮ

ಮೊದಲ ಟಿ 20 ‘ಟೆಸ್ಟ್’ ನಲ್ಲಿ ಭಾರತ ಪಾಸ್

ಸುಲಭದ ತುತ್ತಾದ ದಕ್ಷಿಣ ಆಫ್ರಿಕಾ

ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟಿ 20 ಪಂದ್ಯ ಭಾರತದ ಪಾಲಿಗೆ ಸುಲಭದ ಗೆಲುವು ತಂದುಕೊಟ್ಟಿದೆ. ತಿರುವನಂತಪುರದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಭಾರತ ಗೆಲುವು ಸಾಧಿಸಿದೆ.

ಟಾಸ್ ಗೆದ್ದು ದಕ್ಷಿಣ ಆಫ್ರಿಕಾ ತಂವನ್ನು ಬ್ಯಾಟಿಂಗಿಗೆ ಇಳಿಸಿದ ನಾಯಕ ರೋಹಿತ್ ಶರ್ಮಾ ಅವರಿಗೆ ಭಾರತದ ಬೋಲರ್ ಗಳು ಒಂದರ ಮೇಲೊಂದರಂತೆ ಸರ್ ಪ್ರೈಸ್ ಕೊಡುತ್ತಲೇ ಹೋದರು. ಆರಂಭದ ಓವರ್ ನಲ್ಲೇ ದೀಪಕ್ ಚಾಹರ್ ನಾಯಕ ಬವುಮಾ ಅವರನ್ನು ತಮ್ಮ ಅಮೋಘ ಇನ್ ಸ್ವಿಂಗ್ ಮೂಲಕ ಬೋಲ್ಡ್ ಮಾಡಿದರೆ, ನಂತರ ಅರ್ಶ್ ದೀಪ್ ಸಿಂಗ್ ದಕ್ಷಿಣ ಆಫ್ರಿಕಾದ ಬೆನ್ನೆಲುಬಾದ ಡಿಕಾಕ್ ಸೇರಿದಂತೆ ಮೂರು ವಿಕಟ್ ಗಳನ್ನು ಬಲಿ ತೆಗೆದುಕೊಂಡರು.

ಇವರಿಬ್ಬರ ಅಮೋಘ ಬೋಲಿಂಗ್ ನಿಂದಾಗಿ ದಕ್ಷಿಣ ಆಫ್ರಿಕಾ 15 ಬಾಲು ಗಳನ್ನು ಎದುರಿಸಿ, 2.3 ಓವರ್ ಗಳ ನಂತರ 9 ರನ್ ಗಳಿಸಿದ್ದಾಗ 5 ಪ್ರಮುಖ ವಿಕೆಟ್ ಗಳನ್ನು ಕಳೆದುಕೊಂಡಿತ್ತು. ಆಗಲೇ ಪಂದ್ಯದ ಹಣೆಬರಹ ಹೆಚ್ಚು ಕಮ್ಮಿ ನಿರ್ಧಾರ ಆಗಿತ್ತು. ಆದರೆ ಅಲ್ಲಿಂದ ಮುಂದೆ ಮಾರ್ಕ್ ರಮ್ ಮತ್ತು ಕೇಶವ್ ಮಹಾರಾಜ್ ಅವರ ಬ್ಯಾಟಿಂಗ್ ನೆರವಿನಿಂದ ದಕ್ಷಿಣ ಆಫ್ರಿಕಾ 106 ರನ್ ಗಳ ಮೊತ್ತ ಕಲೆ ಹಾಕಿತು. ಅಚ್ಚರಿ ಎಂದರೆ 42ಕ್ಕೆ ಆರು ವಿಕೆಟ್ ಕಳೆದುಕೊಂಡಿದ್ದ ದಕ್ಷಿಣ ಆಫ್ರಿಕಾ 20 ಓವರ್ ಗಳನ್ನು ಪೂರ್ತಿ ಆಡಿ ನಂತರ 2 ವಿಕೆಟ್ ಗಳನ್ನು ಮಾತ್ರ ಕಳೆದುಕೊಂಡಿತು.

ಅಂತಿಮವಾಗಿ ಭಾರತದ ಗೆಲುವಿಗೆ ಸಿಕ್ಕ ಗುರಿ 107 ರನ್ ಗಳು. ಅಲ್ಪ ಮೊತ್ತವನ್ನು ಬೆನ್ನತ್ತಿದ ಭಾರತದ ಆರಂಭ ಕೂಡಾ ಉತ್ತಮವಾಗಿರಲಿಲ್ಲ. ನಿಧಾನಗತಿಯ ಆರಂಭದಲ್ಲಿ ಭಾರತ ನಾಯಕ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ವಿಕೆಟ್ ಗಳನ್ನು ಬೇಗನೇ ಕಳೆದುಕೊಂಡಿತು. ಆಗ ಕೆ.ಎಲ್ ರಾಹುಲ್ ಮತ್ತು ಸೂರ್ಯಕುಮಾರ್ ಯಾದವ್ ತಂಡವನ್ನು ಮುನ್ನಡೆಸಿದರು.

ಮೊದಲ ಹತ್ತು ಓವರ್ ಗಳಲ್ಲಿ ಭಾರತ ಕೂಡಾ ಟೆಸ್ಟ್ ಮ್ಯಾಚ್ ಮಾದರಿಯಲ್ಲಿ ನಿಧಾನಗತಿಯ ಆಟ ಆಡಿತು. ಆದರೆ ಒಂದು ಕಡೆ ಕೆ.ಎಲ್ ರಾಹುಲ್ ಎಚ್ಚರಿಕೆಯ ಆಟ ಆಡಿದರೆ ಇನ್ನೊಂದು ಕಡೆ ಸೂರ್ಯಕುಮಾರ್ ಯಾದವ್ ತಮ್ಮ ಎಂದಿನ ಅಬ್ಬರದ ಆಟ ಆಡಿದರು. ಇದರ ಪರಿಣಾಮವಾಗಿ ಭಾರತ ತಂಡ 17 ನೇ ಓವರ್ ನಲ್ಲಿ ಗುರಿ ತಲುಪಿ ಗೆದ್ದು ಬೀಗಿತು.

ಜವಾಬ್ದಾರಿಯುತ ಆಟ ಆಡಿದ ರಾಹುಲ್ ಮತ್ತು ಸೂರ್ಯಕುಮಾರ್ ಯಾದವ್ ತಲಾ ಅರ್ಧ ಶತಕ ಗಳಿಸಿದರು. ಇದರ ಫಲವಾಗಿ ಭಾರತ 3 ಪಂದ್ಯಗಳ ಸರಣಿಯಲ್ಲಿ 1-0 ಇಂದ ಮುನ್ನಡೆ ಸಾಧಿಸಿದೆ.  ದಕ್ಷಿಣ ಆಫ್ರಿಕಾದ ಆರಂಭಿಕ ಬ್ಯಾಟ್ಸ್ ಮನ್ ಗಳನ್ನು ಪೆವಿಲಿಯನ್ ಗೆ ಕಳಿಸಿದ ಅರ್ಶ್ ದೀರ್ ಸಿಂಗ್ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಸರಣಿಯ ಮುಂದಿನ ಪಂದ್ಯ ಅಕ್ಟೋಬರ್ 2ರಂದು ಗೌಹಾಟಿಯಲ್ಲಿ ನಡೆಯಲಿದೆ.

🔸 ಪೀಪಲ್‌ ಗ್ರೂಪ್‌ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
https://chat.whatsapp.com/G94DLKaJrsBH07M7DvkqRo

ಇದನ್ನೂ ಓದಿ: ನದಿ ಹರಿಯಲಿ ಎದೆ ಬಯಲಲ್ಲಿ..

ಒಂದು ಭಾಷೆ ನಾಶವಾದರೆ ಒಂದು ಸಂಸ್ಕೃತಿ ನಾಶವಾದಂತೆ. ಹಾಗೆಯೇ ಒಂದು ನದಿ ಬತ್ತಿ ಹೋದರೆ ಕೂಡಾ ಒಂದು ಸಂಸ್ಕೃತಿ ನಾಶವಾಗುತ್ತದೆ. ಅಷ್ಟು ಮಾತ್ರವಲ್ಲ ಅದರೊಂದಿಗೆ ಲಕ್ಷಾಂತರ ಜನರ ಬದುಕೂ ನಾಶವಾಗುತ್ತದೆ ಎನ್ನುತ್ತಾರೆ ಕೃಷಿಕ, ರಂಗಕರ್ಮಿ ಪ್ರಸಾದ ರಕ್ಷಿದಿ.

ವಿಶ್ವ ನದಿ ದಿನ ವಿಶೇಷ
ಪ್ರಸಾದ್ ರಕ್ಷಿದಿ

https://peepalmedia.com/nadi-hariyali-ede-bayalali/

Related Articles

ಇತ್ತೀಚಿನ ಸುದ್ದಿಗಳು