Home ದೇಶ ಕೇಜ್ರಿವಾಲ್‌ ಮತ್ತು ಮೋದಿ ಒಂದೇ ನಾಣ್ಯದ ಎರಡು ಮುಖಗಳು, ಅವರಿಬ್ಬರೂ ಅಣ್ಣ ತಮ್ಮಂದಿರಿದ್ದಂತೆ

ಕೇಜ್ರಿವಾಲ್‌ ಮತ್ತು ಮೋದಿ ಒಂದೇ ನಾಣ್ಯದ ಎರಡು ಮುಖಗಳು, ಅವರಿಬ್ಬರೂ ಅಣ್ಣ ತಮ್ಮಂದಿರಿದ್ದಂತೆ

0

ಪ್ರಧಾನಿ ನರೇಂದ್ರ ಮೋದಿ ಹಾಗೂ ಎಎಪಿ ಸಂಚಾಲಕ ಅರವಿಂದ ಕೇಜ್ರಿವಾಲ್ ನಡುವೆ ಅಷ್ಟೇನೂ ವ್ಯತ್ಯಾಸವಿಲ್ಲ. ಅವರು ಒಂದೇ ಬಟ್ಟೆಯ ಎರಡು ತುಂಡುಗಳು ಎಂದು ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಟೀಕಿಸಿದ್ದಾರೆ.
ಮೋದಿ ಮತ್ತು ಕೇಜ್ರಿವಾಲ್‌ ಇಬ್ಬರೂ ಒಂದೇ ನಾಣ್ಯದ ಎರಡು ಮುಖಗಳು, ಇಬ್ಬರೂ ಆರ್‌ಎಸ್‌ಎಸ್‌ ಸಿದ್ಧಾಂತದಿಂದಲೇ ಪ್ರವರ್ಧಮಾನಕ್ಕೆ ಬಂದವರು. ಒಬ್ಬರು ಶಾಖೆಯಿಂದ ಬಂದರೆ ಇನ್ನೊಬ್ಬರು ಅದರ ಅಂಗ ಸಂಸ್ಥೆಯಿಂದ ಹೊರಹೊಮ್ಮಿದವರು ಎಂದು ಓವೈಸಿ ಹೇಳಿದ್ದಾರೆ.

ಓಕ್ಲಾ ವಿಧಾನಸಭೆ ಕ್ಷೇತ್ರದ ತಮ್ಮ ಪಕ್ಷದ ಅಭ್ಯರ್ಥಿ ಶಿಫ-ಉರ್-ರೆಹಮಾನ್ ಪರ ನಡೆಸಿದ ಪ್ರಚಾರದಲ್ಲಿ ಅವರು ಮೇಲಿನ ಹೇಳಿಕೆಯನ್ನು ನೀಡಿದರು.

ಶಹೀನ್‌ಬಾಗ್‌ ಪ್ರದೇಶದಲ್ಲಿ ಪಾದಯಾತ್ರೆ ನಡೆಸಿದ ಓವೈಸಿ, ಫೆ. 5ರಂದು ನಡೆಯುವ ಚುನಾವಣೆಯಲ್ಲಿ ‘ಗಾಳಿಪಟ’ ಗುರುತಿಗೆ ಮತ ಹಾಕಿ ಎಂದು ಮನವಿ ಮಾಡಿದರು.

ಎಐಎಂಐಎಂ ದೆಹಲಿಯಲ್ಲಿ ಒಟ್ಟು ಎರಡು ಕ್ಷೇತ್ರಗಳಿಂದ ಸ್ಪರ್ಧಿಸುತ್ತಿದೆ. ಮುಸ್ತಫಾಬಾದ್ ಕ್ಷೇತ್ರದಿಂದ ತಾಹಿರ್ ಹುಸೇನ್ ಹಾಗೂ ಓಕ್ಲಾ ಕ್ಷೇತ್ರದಿಂದ ಶಿಫ-ಉರ್-ರೆಹಮಾನ್ ಕಣದಲ್ಲಿದ್ದಾರೆ. 2020ರ ದೆಹಲಿ ಗಲಭೆ ಪ್ರಕರಣ ಸಂಬಂಧ ಉಭಯ ಅಭ್ಯರ್ಥಿಗಳೂ ಜೈಲಿನಲ್ಲಿದ್ದಾರೆ.

ಭಾಷಣದ ವೇಳೆ ನ್ಯಾಯಿಕ ವ್ಯವಸ್ಥೆಯಲ್ಲಿರುವ ತಾರತಮ್ಯದ ನೀತಿಯನ್ನೂ ಅವರು ಪ್ರಶ್ನೆ ಮಾಡಿದ್ದಾರೆ. ‘ಅಬಕಾರಿ ನೀತಿ ಹಗರಣದಲ್ಲಿ ಅರವಿಂದ ಕೇಜ್ರಿವಾಲ್ ಅವರಿಗೆ ಜಾಮೀನು ಸಿಕ್ಕಿದ್ದು ಹೇಗೆ? ತಾಹಿರ್ ಹುಸೇನ್ ಮತ್ತು ಶಿಫ-ಉರ್-ರೆಹಮಾನ್‌ಗೆ ಯಾಕೆ ಜಾಮೀನು ಸಿಕ್ಕಿಲ್ಲ? ಮನೀಶ್ ಸಿಸೋಡಿಯಾ, ಸಂಜಯ್ ಸಿಂಗ್ ಸೇರಿ ಇವರ ನಾಯಕರಿಗೆಲ್ಲಾ ಜಾಮೀನು ಸಿಕ್ಕಿದೆ. ಆದರೆ ಇವರಿಬ್ಬರು ಇನ್ನೂ ಜೈಲಿನಲ್ಲೇ ಇದ್ದಾರೆ. ಇವರು ಮಾಡಿದ ತಪ್ಪಾದರೂ ಏನು’ ಎಂದು ಅವರು ಪ್ರಶ್ನಿಸಿದ್ದಾರೆ.

You cannot copy content of this page

Exit mobile version