Sunday, July 27, 2025

ಸತ್ಯ | ನ್ಯಾಯ |ಧರ್ಮ

ಭಾರೀ ಮಳೆ – ಪ್ರಧಾನಿ ಮೋದಿ ಪುಣೆ ಭೇಟಿ ರದ್ದು

ಪುಣೆ: ಮಹಾರಾಷ್ಟ್ರದಲ್ಲಿ ಮಳೆ ಒಂದೇ ಸಮನೆ ಸುರಿಯುತ್ತಿದೆ. ಈ ಮಳೆ ಇದೇ ರೀತಿ ಶುಕ್ರವಾರದವರೆಗೆ ಮುಂದುವರೆಯುವ ಸಾಧ್ಯತೆ ಇದ್ದು, ಮುಂಬೈ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಜನಜೀವನ ಅಸ್ತವ್ಯಸ್ತವಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಇದೇ ಕಾರಣವಾಗಿ ಈಗ ಪ್ರಧಾನಿ ಮೋದಿಯವರ ಪುಣೆ ಭೇಟಿ ರದ್ದಾಗಿದೆ. ಹವಾಮಾನ ಇಲಾಖೆ ಈಗಾಗಲೇ ಮಹಾರಾಷ್ಟ್ರದ ಕೆಲವು ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಿದೆ. ಸರ್ಕಾರ ಶಿಕ್ಷಣ ಸಂಸ್ಥೆಗಳಿಗೆ ರಜೆ ನೀಡಿದೆ. ಪ್ರಧಾನಿ ಇಂದು ಪುಣೆ ತಲುಪಿ, ಅಲ್ಲಿ ರೂ. 22 ಸಾವಿರದ 900 ಕೋಟಿ ಮೊತ್ತದ ಯೋಜನೆಗಳನ್ನು ಆರಂಭಿಸಿ ಶಂಕುಸ್ಥಾಪನೆ ಮಾಡಬೇಕಿತ್ತು.

ಇದರೊಂದಿಗೆ ಪುಣೆ ನಿವಾಸಿಗಳಿಗೆ ಮೆಟ್ರೋ ಸೇವೆಯನ್ನು ಆರಂಭಿಸಬೇಕಿದೆ. ಪ್ರಧಾನ ಮಂತ್ರಿ ಮೋದಿ ಅವರು ಸ್ವರ್‌ಗೇಟ್ ‌ಪ್ರದೇಶವನ್ನು ಜಿಲ್ಲಾ ನ್ಯಾಯಾಲಯಕ್ಕೆ ಸಂಪರ್ಕಿಸುವ ಭೂಗತ ಮೆಟ್ರೋ ಸೇವೆಯನ್ನು ಪ್ರಾರಂಭಿಸಲು ಯೋಜಿಸಿದ್ದಾರೆ. ಇದಲ್ಲದೇ ಭಿಡೆ ವಾಡಾದಲ್ಲಿ ಇನ್ನಷ್ಟು ಮಹತ್ವದ ಯೋಜನೆಗಳು ಆರಂಭವಾಗಲಿದ್ದವು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page