Home ದೆಹಲಿ ಹೊಸ ಕಾರ್ಮಿಕ ಕಾನೂನು ಜಾರಿಯಿಂದ ‘ಹಿಂದಕ್ಕೆ ಸರಿದ’ ಮೋದಿ ಸರ್ಕಾರ: ಕಾರ್ಮಿಕ ಸಂಘಗಳ ಪ್ರತಿಭಟನೆ ಕರೆಗೆ...

ಹೊಸ ಕಾರ್ಮಿಕ ಕಾನೂನು ಜಾರಿಯಿಂದ ‘ಹಿಂದಕ್ಕೆ ಸರಿದ’ ಮೋದಿ ಸರ್ಕಾರ: ಕಾರ್ಮಿಕ ಸಂಘಗಳ ಪ್ರತಿಭಟನೆ ಕರೆಗೆ ಮಣಿದ ಕೇಂದ್ರ

0

ದೆಹಲಿ: ಶುಕ್ರವಾರದಿಂದ ಜಾರಿಗೆ ತಂದ ಹೊಸ ಕಾರ್ಮಿಕ ಸಂಹಿತೆಗಳು ಕುರಿತು ಮೋದಿ ಸರ್ಕಾರ ಕೊಂಚ ಮಟ್ಟಿಗೆ ಹಿಂದಕ್ಕೆ ಸರಿದಿದೆ. 10 ಟ್ರೇಡ್ ಯೂನಿಯನ್‌ಗಳು ದೇಶಾದ್ಯಂತ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದ ಕಾರಣ, ಕರಡು ನಿಯಮಗಳನ್ನು ರೀ-ನೋಟಿಫೈ ಮಾಡಲು ಕೇಂದ್ರ ಸರ್ಕಾರ ನಿರ್ಧರಿಸಿದೆ ಎಂದು ವಿಶ್ವಾಸಾರ್ಹ ಮಾಹಿತಿ ಲಭಿಸಿದೆ.

ಹೊಸ ಕಾರ್ಮಿಕ ನೀತಿಗಳ ಕುರಿತು ಟ್ರೇಡ್ ಯೂನಿಯನ್‌ಗಳು ದೇಶವ್ಯಾಪಿ ಪ್ರತಿಭಟನೆಗೆ ಕರೆ ನೀಡಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ತನ್ನ ಹೆಜ್ಜೆಯನ್ನು ಹಿಂದಕ್ಕಿಟ್ಟಿದೆ. ವೇತನಗಳು, ಕೈಗಾರಿಕಾ ಸಂಬಂಧಗಳು, ಸಾಮಾಜಿಕ ಭದ್ರತೆ, ವೃತ್ತಿಪರ ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ನೀತಿಗಳನ್ನು ಪರಿಚಯಿಸಿ ಕೇಂದ್ರ ಕಾರ್ಮಿಕ ಇಲಾಖೆಯು ಶುಕ್ರವಾರ ಅಧಿಸೂಚನೆ ಹೊರಡಿಸಿತ್ತು.

ಈ ಮಸೂದೆಗಳಿಗೆ ಸಂಸತ್ತು 2019 ಮತ್ತು 2020 ರಲ್ಲಿ ಅನುಮೋದನೆ ನೀಡಿತ್ತು. 29 ಕಾರ್ಮಿಕ ಕಾನೂನುಗಳ ಬದಲಾಗಿ ಇವುಗಳನ್ನು ತರಲಾಗಿದೆ. ಆದರೆ ಅಂತಿಮ ನಿಯಮಗಳನ್ನು ಆ ಸಮಯದಲ್ಲಿ ಪ್ರಕಟಿಸಿರಲಿಲ್ಲ. ವಿಶ್ವಾಸಾರ್ಹ ಮಾಹಿತಿ ಪ್ರಕಾರ, ಟ್ರೇಡ್ ಯೂನಿಯನ್‌ಗಳು ಇತ್ತೀಚಿನ ಅಧಿಸೂಚನೆಗಳ ವಿರುದ್ಧ ಪ್ರತಿಭಟನೆ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಕೇಂದ್ರದ ನ್ಯಾಯ ವ್ಯವಹಾರಗಳ ಇಲಾಖೆ ಸ್ಪಂದಿಸಿದೆ.

ಈ ನೀತಿಗಳಿಗೆ 2020 ರಲ್ಲಿ ಅಧಿಸೂಚನೆ ಬಿಡುಗಡೆಯಾದ ನಂತರ, ಈ ಮಧ್ಯಂತರ ಅವಧಿಯಲ್ಲಿ ಹಲವು ಬದಲಾವಣೆಗಳಾಗಿರುವುದರಿಂದ, ಅವುಗಳನ್ನು ಮತ್ತೆ ನೋಟಿಫೈ ಹೊರಡಿಸುವಂತೆ ಕಾರ್ಮಿಕ ಸಚಿವಾಲಯಕ್ಕೆ ತಿಳಿಸಿದೆ. ಹೊಸದಾಗಿ ಬರುವ ಸಲಹೆಗಳು, ಸೂಚನೆಗಳನ್ನು ಈ ಕೋಡ್‌ಗಳಲ್ಲಿ ಸೇರಿಸಲು ಸರ್ಕಾರ ಸಿದ್ಧವಿದೆ. ಸಲಹೆಗಳು ಮತ್ತು ಸೂಚನೆಗಳನ್ನು ನೀಡಲು 45 ದಿನಗಳ ಗಡುವನ್ನು ನೀಡಲಾಗುವುದು. ಅದರ ನಂತರ 45 ದಿನಗಳಲ್ಲಿ ಅಂತಿಮ ರೂಪ ನೀಡಿ, ಜಾರಿಗೆ ತರಲಾಗುವುದು.

ಇದಲ್ಲದೆ, ಕಳೆದ ಐದು ವರ್ಷಗಳಲ್ಲಿ ಅನೇಕ ರಾಜ್ಯ ಸರ್ಕಾರಗಳು ತಮ್ಮದೇ ಆದ ನಿಯಮಗಳನ್ನು ಪ್ರಕಟಿಸಿವೆ. ಆ ಕರಡು ನಿಯಮಗಳನ್ನು ರಿ ನೋಟಿಫೈ ಮಾಡುವ ನಿರ್ಧಾರವನ್ನು ಆಯಾ ರಾಜ್ಯ ಸರ್ಕಾರಗಳಿಗೇ ಬಿಡಲಾಗಿದೆ.

You cannot copy content of this page

Exit mobile version