Thursday, June 13, 2024

ಸತ್ಯ | ನ್ಯಾಯ |ಧರ್ಮ

ಮೋದಿ ಸರ್ಕಾರ ಒಂದು ವರ್ಷದೊಳಗೆ ಪತನ: ಎಎಪಿ ಸಂಸದ ಸಂಜಯ್ ಸಿಂಗ್ ಭವಿಷ್ಯ

ಪ್ರಯಾಗರಾಜ್‌: ʼ”ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಹೊಸ ಸರ್ಕಾರ ಒಂದು ವರ್ಷದೊಳಗೆ ಪತನವಾಗಲಿದೆ. ಹೆಚ್ಚು ದಿನ ಬಾಳುವುದಿಲ್ಲ” ಎಂದು ಎಎಪಿ ಸಂಸದ ಸಂಜಯಸಿಂಗ್‌ ಭವಿಷ್ಯ ನುಡಿದಿದ್ದಾರೆ.

ಭಾನುವಾರ ಪ್ರಯಾಗ್‌ರಾಜ್‌ನಲ್ಲಿರುವ ಸರ್ಕ್ಯೂಟ್ ಹೌಸ್‌ನಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, “ತನ್ನ ಮಿತ್ರ ಪಕ್ಷಗಳ ನಿರೀಕ್ಷೆಗಳನ್ನು ಈಡೇರಿಸುವಲ್ಲಿ ಮೋದಿ ಸರ್ಕಾರ ವಿಫಲವಾಗುವ ಸಾಧ್ಯತೆಯಿದೆ. ಈ ಸರ್ಕಾರದ ಆಯುಷ್ಯ ಆರು ತಿಂಗಳಿಂದ ಒಂದು ವರ್ಷ ಮಾತ್ರ” ಎಂದು ಸಿಂಗ್ ಹೇಳಿದರು.

ಪಿಎಂ ಮೋದಿಯವರಿಗೆ ಎನ್‌ಡಿಎ ಸರ್ಕಾರ ಮತದಾರರ ಮತ್ತು ಮಿತ್ರ ಪಕ್ಷಗಳ ನಿರೀಕ್ಷೆಗೆ ತಕ್ಕಂತೆ ಕೆಲಸ ಮಾಡು ಮತ್ತು ನಿರ್ಣಯ ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ. ಅವರು ರಾಜಕೀಯ ಪಕ್ಷಗಳನ್ನು ಒಡೆಯುವ ತಮ್ಮ ಧೋರಣೆಯನ್ನು ಮುಂದುವರಿಸುವವ ಬುದ್ಧಿ ಹೊಂದಿದ್ದು, ಇದು ಅವರಿಗೆ ತಿರುಗುಮಂತ್ರವಾಗಲಿದೆ” ಎಂದರು.

ಟಿಡಿಪಿ ಮತ್ತು ಜೆಡಿಯುಗೆ ನಾನು ಹೇಳಬಯಸುವುದಿಷ್ಟೆ. ನೀವೇ ಸ್ಪೀಕರ್ ಮಾಡಿ, ಇಲ್ಲದಿದ್ದರೆ ನಿಮ್ಮ ಪಕ್ಷದ ಎಷ್ಟು ಸಂಸದರು ಒಡೆದು ಅವರನ್ನು ಸೇರುತ್ತಾರೆ ಎಂಬುದಕ್ಕೆ ಯಾವುದೇ ಗ್ಯಾರಂಟಿ ಇಲ್ಲ ಎಂದು ಅವರು ವ್ಯಂಗ್ಯವಾಡಿದರು.

72 ಸದಸ್ಯರ ನೇತೃತ್ವದ ದಾಖಲೆಯ ಮೂರನೇ ಅವಧಿಗೆ ಮೋದಿ ಅವರು ಭಾನುವಾರ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ಮೋದಿ 2.0 ಸಂಪುಟದಲ್ಲಿ ರಾಜನಾಥ್ ಸಿಂಗ್, ಅಮಿತ್ ಶಾ, ನಿತಿನ್ ಗಡ್ಕರಿ, ನಿರ್ಮಲಾ ಸೀತಾರಾಮನ್ ಮತ್ತು ಎಸ್ ಜೈಶಂಕರ್ ಸೇರಿದಂತೆ ಬಿಜೆಪಿಯ ಹಿರಿಯ ನಾಯಕರು ಸಂಪುಟ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು.

Related Articles

ಇತ್ತೀಚಿನ ಸುದ್ದಿಗಳು