ಅಮೆರಿಕ ಅಧ್ಯಕ್ಷರಂತೆ ನಮ್ಮ ಪ್ರಧಾನಿ ಮೋದಿಗೂ ಮರೆವಿನ ಕಾಯಿಲೆ ಕಾಡುತ್ತಿದೆ: ರಾಹುಲ್ ಗಾಂಧಿ

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಜೋ ಬಿಡನ್ ಅವರಂತೆಯೇ ತಮ್ಮ ನೆನಪಿನ ಶಕ್ತಿಯನ್ನು ಕಳೆದುಕೊಂಡಿದ್ದಾರೆ ಎಂದು ಕಾಂಗ್ರೆಸ್ ನಾಯಕ ಹಾಗೂ ಲೋಕಸಭೆಯ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.

ಇತ್ತೀಚೆಗೆ ನಾವು ಏನು ಮಾತಾಡುತ್ತೇವೆಯೋ ಅದನ್ನೇ ಮೋದಿಯವರೂ ಮಾತನಾಡುತ್ತಿದ್ದಾರೆ. ಬಹುಶಃ ಅವರಿಗೆ ಇತ್ತೀಚೆಗೆ ನೆನಪಿನ ಶಕ್ತಿ ಕಡಿಮೆಯಾಗಿರಬಹುದು ಎಂದು ಅವರು ಹೇಳಿದರು.

ಇತ್ತೀಚೆಗಷ್ಟೇ ಪ್ರಧಾನಿ ಮೋದಿಯವರ ಭಾಷಣ ಕೇಳಿದೆ ಎಂದು ನನ್ನ ತಂಗಿ ಹೇಳಿದಳು. ಇತ್ತೀಚಿಗೆ ಅವರು ನಾವು ಮಾತನಾಡುತ್ತೇವೆಯೋ ಅದನ್ನೇ ಅವರೂ ಹೇಳುತ್ತಿದ್ದಾರೆ ಎಂದಳು. ಬಹುಶಃ ಅವನಿಗೆ ನೆನಪಿನ ಶಕ್ತಿ ಕಳೆದುಹೋಗಿದೆ. ಝೆಲೆನ್ಸ್ಕಿ ಬಂದ ಸಂದರ್ಭದಲ್ಲಿ ರಷ್ಯಾ ಅಧ್ಯಕ್ಷ ಪುಟಿನ್ ಬಂದರು ಎಂದು ಜೋ ಬಿಡನ್ ಹೇಳಿದ್ದರು. ಅವರಂತೆಯೇ ನಮ್ಮ ಪ್ರಧಾನಿಯೂ ನೆನಪಿನ ಶಕ್ತಿ ಕಳೆದುಕೊಂಡಿದ್ದಾರೆ’’ ಎಂದು ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯ ಪ್ರಚಾರ ಸಭೆಯಲ್ಲಿ ರಾಹುಲ್ ಗಾಂಧಿ ಹೇಳಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು