Thursday, August 15, 2024

ಸತ್ಯ | ನ್ಯಾಯ |ಧರ್ಮ

ಪ್ಯಾರಿಸ್ ಒಲಿಂಪಿಕ್ಸ್‌ನ ಪದಕ ವಿಜೇತರನ್ನು ಭೇಟಿ ಮಾಡಿದ ಮೋದಿ, ಪ್ರಧಾನಿಗೆ ವಿಶೇಷ ಉಡುಗೊರೆ ನೀಡಿದ ಹಾಕಿ ತಂಡ

ಪ್ರಧಾನಿ ನರೇಂದ್ರ ಮೋದಿ ಪ್ಯಾರಿಸ್ ಒಲಿಂಪಿಕ್ಸ್‌ನ ಪದಕ ವಿಜೇತರನ್ನು ಭೇಟಿ ಮಾಡಿದರು. ಸ್ವಾತಂತ್ರ್ಯ ದಿನಾಚರಣೆಯ ನಂತರ ಮೋದಿ ಅವರು ತಮ್ಮ ನಿವಾಸದಲ್ಲಿ ಕ್ರೀಡಾಪಟುಗಳನ್ನು ಭೇಟಿ ಮಾಡಿದರು.

ಈ ಸಂದರ್ಭದಲ್ಲಿ ಅವರನ್ನು ಅಭಿನಂದಿಸಿ ಗೌರವಿಸಲಾಯಿತು.

ಗುರುವಾರ 78ನೇ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ದೆಹಲಿಯ ಕೆಂಪು ಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರಧ್ವಜಾರೋಹಣ ಮಾಡಿದರು. ಶೂಟರ್ ಮನು ಭಾಕರ್, ಸರಜ್ಜೋತ್ ಸಿಂಗ್ ಮತ್ತು ಪುರುಷರ ಹಾಕಿ ತಂಡ ಸೇರಿದಂತೆ ಒಲಿಂಪಿಕ್ ಪದಕ ವಿಜೇತರು ಸಮಾರಂಭದಲ್ಲಿ ಭಾಗವಹಿಸಿದ್ದರು. ಕಾರ್ಯಕ್ರಮದ ನಂತರ ಎಲ್ಲರೂ ನೇರವಾಗಿ ಪ್ರಧಾನಿಯವರ ಅಧಿಕೃತ ನಿವಾಸಕ್ಕೆ ತೆರಳಿದರು. ಅಲ್ಲಿ ಮೋದಿಯವರನ್ನು ಭೇಟಿ ಮಾಡಿದರು.

ಈ ಸಭೆಯ ಸಂದರ್ಭದಲ್ಲಿ ಭಾರತೀಯ ಪುರುಷರ ಹಾಕಿ ತಂಡವು ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಶೇಷ ಉಡುಗೊರೆಯನ್ನು ನೀಡಿತು. ಎಲ್ಲಾ ಆಟಗಾರರ ಸಹಿಯಿರುವ ಜೆರ್ಸಿಯನ್ನು ನೀಡಲಾಯಿತು.

ಇತ್ತೀಚೆಗೆ ಮುಕ್ತಾಯವಾದ ಪ್ಯಾರಿಸ್ ಒಲಿಂಪಿಕ್ಸ್ 2024ರಲ್ಲಿ ಭಾರತ ಒಟ್ಟು ಆರು ಪದಕಗಳನ್ನು ಗೆದ್ದಿದೆ. ಭಾರತ ತಂಡ ಒಂದು ಬೆಳ್ಳಿ ಮತ್ತು ಐದು ಕಂಚಿನ ಪದಕಗಳನ್ನು ಗೆದ್ದುಕೊಂಡಿದೆ. ಪದಕ ಪಟ್ಟಿಯಲ್ಲಿ ನಮ್ಮ ದೇಶ 71ನೇ ಸ್ಥಾನದಲ್ಲಿದೆ.

ವಿನೇಶ ಫೋಗಟ್‌ ತಮ್ಮ ಪದಕದ ಕುರಿತಾಗಿ ಸಲ್ಲಿಸಿದ್ದ ಮೇಲ್ಮನವಿಯನ್ನು ಕ್ರೀಡಾ ನ್ಯಾಯಾಲಯ ತಳ್ಳಿ ಹಾಕುವ ಮೂಲಕ ಭಾರತೀಯರ ಇನ್ನೊಂದು ಪದಕದ ಕನಸಿಗೆ ತಣ್ಣೀರು ಎರಚಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page