Friday, June 14, 2024

ಸತ್ಯ | ನ್ಯಾಯ |ಧರ್ಮ

ಮೋದಿ ಪರಿವಾರ Vs ಸಂಘ ಪರಿವಾರ; ಗೆಲ್ಲುವುದು ಯಾರು?

‘ಹಿಂದಿನ ಬಿಜೆಪಿಗೂ ಇಂದಿನ ಬಿಜೆಪಿಗೂ ಬಹಳ ವ್ಯತ್ಯಾಸವಿದೆ. ಆಗ ನಮ್ಮ ಸಾಮರ್ಥ್ಯ ಕಡಿಮೆಯಿತ್ತು. ಆಗ ನಾವು ಬಹಳ ಸಣ್ಣವರಿದ್ದೆವು ಹೀಗಾಗಿ RSS ಬೆರಳು ಹಿಡಿದು ಹೆಜ್ಜೆ ಹಾಕಿದ್ದೆವು. ಈಗ ನಾವೂ ಬೆಳೆದಿದ್ದೇವೆ. ಸಮರ್ಥರಾಗಿದ್ದೇವೆ. RSS ಒಂದು ಸಾಂಸ್ಕೃತಿಕ ಸಂಸ್ಥೆ. ನಮ್ಮದು ರಾಜಕೀಯ ಸಂಘಟನೆ. ಎರಡೂ ತಮ್ಮದೇ ಆದ ಜವಾಬ್ದಾರಿಗಳನ್ನು ಹೊಂದಿವೆ! ಬಿಜೆಪಿ ಈಗ ತಾನೇ ನಡೆಯಬಲ್ಲದುʼ ಐದನೇ ಹಂತದ ಮತದಾನಕ್ಕೆ ಒಂದು ದಿನ ಮೊದಲು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಹೇಳಿದ ಮಾತುಗಳಿವು.

ನರೇಂದ್ರ ಮೋದಿಯವರು ಪ್ರಧಾನಿಯಾದ ನಂತರ ಬಿಜೆಪಿ ಮತ್ತು ಆರೆಸ್ಸೆಸ್ ನಡುವಿನ ಸಂಬಂಧದಲ್ಲಿನ ಬದಲಾವಣೆಗೆ ಈ ಹೇಳಿಕೆಗಳು ಪುರಾವೆಯಂತೆ ಕಾಣುತ್ತಿವೆ.

ತಮ್ಮನ್ನು ತಾವು ಸರ್ವಶಕ್ತರು ಎಂದು ಪ್ರಚಾರ ಮಾಡುತ್ತಿರುವ ಮೋದಿ ಮತ್ತು ಅವರ ಇಬ್ಬರು ಆಪ್ತರು (ಅಮಿತ್ ಷಾ ಮತ್ತು ನಡ್ಡಾ) ಸಂಘ ಪರಿವಾರದ ಪ್ರಭಾವವನ್ನು ಕಡಿಮೆ ಮಾಡಲು ಯೋಜನೆ ರೂಪಿಸುತ್ತಿದ್ದಾರೆ ಎಂಬ ಅಭಿಪ್ರಾಯ ಕೆಲ ಸಮಯದಿಂದ ಸಂಘ ಪರಿವಾರದಲ್ಲಿದೆ. ಈ ಹಿನ್ನೆಲೆಯಲ್ಲಿ ನಡ್ಡಾ ಅವರ ಇತ್ತೀಚಿನ ಹೇಳಿಕೆಗಳು RSS ವಲಯದಲ್ಲಿ ಚರ್ಚೆಗೆ ಗ್ರಾಸವಾಗಿವೆ.

ಇನ್ನು ಮುಂದೆ ಬಿಜೆಪಿಯನ್ನು ನಾವೇ ನಡೆಸುತ್ತೇವೆ ಎನ್ನುವ ನಡ್ಡಾ ಮಾತುಗಳಿಗೆ ‘ಸಂಘ ಪರಿವಾರ’ದಲ್ಲಿ ತೀವ್ರ ವಿರೋಧ ವ್ಯಕ್ತವಾಗಿದೆ ಎಂದು ವರದಿಯಾಗಿದೆ. ಇದು ಐದನೇ ಸುತ್ತಿನ ಮತದಾನ ಪ್ರಕ್ರಿಯೆ ಮೇಲೂ ಪರಿಣಾಮ ಬೀರಿದೆ ಎಂಬ ವರದಿಗಳಿವೆ. ಉತ್ತರ ಪ್ರದೇಶದಲ್ಲಿ ಬಿಜೆಪಿ ಹಿಡಿತದಲ್ಲಿರುವ ಹಲವು ಕ್ಷೇತ್ರಗಳಲ್ಲಿ ಮತದಾನ ಸ್ಥಗಿತಗೊಂಡಿದ್ದು, ಅತಿ ಕಡಿಮೆ ಮತದಾನವಾಗಿದೆ. ಉಳಿದ ಎರಡು ಹಂತದ ಮತದಾನದಲ್ಲೂ ಇದೇ ಟ್ರೆಂಡ್ ಮುಂದುವರಿಯುವ ನಿರೀಕ್ಷೆಯಿದೆ.

‘ದಿ ವೈರ್’ ಇತ್ತೀಚೆಗೆ ಪ್ರಕಟಿಸಿದ ಲೇಖನದಲ್ಲಿ ಆರ್‌ಎಸ್‌ಎಸ್-ಬಿಜೆಪಿ ನಡುವೆ ಹೆಚ್ಚುತ್ತಿರುವ ಅಂತರ ಮತ್ತು ಅದಕ್ಕೆ ಕಾರಣವಾದ ಪರಿಣಾಮಗಳನ್ನು ಉದಾಹರಣೆ ಸಹಿತ ವಿವರಿಸಲಾಗಿದೆ.

ಸಂಘ ಪರಿವಾರ ವರ್ಸಸ್ ಮೋದಿ ಪರಿವಾರ

ಕೆಲ ದಿನಗಳಿಂದ ಸಂಘಪರಿವಾರ ಮತ್ತು ಮೋದಿ ಪರಿವಾರದ (ಮೋದಿ, ಅಮಿತ್ ಶಾ, ನಡ್ಡಾ ಮುಂತಾದವರು) ನಡುವೆ ಅಧಿಕಾರದ ಪೈಪೋಟಿ ಆರಂಭವಾಗಿದೆ ಎಂದು ವರದಿಯಾಗಿದೆ. ಬಿಜೆಪಿ ತನ್ನ ಕಣ್ಣ ಇಷಾರೆಯಂತೆಯೇ ನಡೆಯಬೇಕು ಎಂಬ ಸಂಘಪರಿವಾರದ ಆದೇಶವನ್ನು ಮೋದಿ ಪರಿವಾರ ಕಡೆಗಣಿಸುತ್ತಿದೆ ಎನ್ನಲಾಗುತ್ತಿದೆ.

ಹಿಂದುತ್ವದ ಅಜೆಂಡಾವಾಗಿ ಜನರನ್ನು ವಿಭಜಿಸಿ ಮತಾಂಧತೆಯನ್ನು ಪ್ರಚೋದಿಸಿ ಅಧಿಕಾರಕ್ಕೆ ಬರಲು ಆರೆಸ್ಸೆಸ್ ದಶಕಗಳಿಂದ ಪ್ರಯತ್ನಿಸುತ್ತಿದೆ ಎಂದು ತಿಳಿದಿದೆ. ಆದರೆ, ಬಿಜೆಪಿ ಸತತ ಎರಡು ಅವಧಿಗೆ ಅಧಿಕಾರಕ್ಕೆ ಬರಲು ಮೋದಿ ಮೇನಿಯಾ ಕಾರಣ ಎಂದು ಅವರ ಪರಿವಾರದವರು ಪ್ರಚಾರ ಮಾಡುತ್ತಿದ್ದಾರೆ.

ಸಂಘ ಪರಿವಾರದಲ್ಲಿ ಇದಕ್ಕೆ ಆಕ್ಷೇಪ ವ್ಯಕ್ತವಾಗುತ್ತಿರುವಾಗಲೇ ಇತ್ತೀಚಿನ ಚುನಾವಣೆಯಲ್ಲಿ ಗ್ಯಾರಂಟಿ ಹೆಸರಿನಲ್ಲಿ ಮೋದಿ ಪ್ರಚಾರ ನಡೆಸುತ್ತಿರುವುದು ಅವರನ್ನು ಮತ್ತಷ್ಟು ಕೆರಳಿಸುತ್ತಿದೆ. ಸಂಘ ಪರಿವಾರ ವ್ಯಕ್ತಪಡಿಸಿದ ಆಕ್ಷೇಪಗಳಿಗೆ ಮೋದಿ ಪರಿವಾರ ತಲೆ ಕೆಡಿಸಿಕೊಂಡಿಲ್ಲ ಮತ್ತು ಚುನಾವಣಾ ಪ್ರಚಾರದ ರೀತಿಗೆ ಸಂಬಂಧಿಸಿದಂತೆ ಸಂಘ ಪರಿವಾರ ನೀಡಿದ ಸಲಹೆಗಳನ್ನು ಗಣನೆಗೆ ತೆಗೆದುಕೊಂಡಿಲ್ಲ ಎಂದು ವರದಿಯಾಗಿದೆ.

ಅಡ್ವಾಣಿಯಿಂದ ಆರಂಭ!

ಮೋದಿ ಅಧಿಕಾರ ಸ್ವೀಕರಿಸಿದ ನಂತರ ಒಬ್ಬೊಬ್ಬರನ್ನಾಗಿ ಹಿರಿಯ ನಾಯಕರರನ್ನು ಬದಿಗೊತ್ತಿರುವುದು ಗೊತ್ತೇ ಇದೆ. ಅಡ್ವಾಣಿಯವರಿಂದ ಆರಂಭವಾದ ಈ ಸರಮಾಲೆ ಈಗಲೂ ಮುಂದುವರಿದಿದೆ. ಚುನಾವಣೆಯ ಸಂದರ್ಭದಲ್ಲಿ ಅಡ್ವಾಣಿ ಅವರಿಗೆ ಭಾರತ ರತ್ನ ಪ್ರಶಸ್ತಿ ನೀಡಿದ್ದರೂ, ಬಹಿರಂಗವಾಗಿ ಅಗೌರವ ತೋರಿದ ರೀತಿ ಅಂತಿಮ ವಾರಗಳಲ್ಲಿ ಚರ್ಚೆಯ ವಿಷಯವಾಯಿತು. ಉಮಾಭಾರತಿಯಂತಹ ನಾಯಕರನ್ನು ದೂರ ಇಟ್ಟ ರೀತಿ ಕೂಡ ಅವರ ಸಿಟ್ಟಿಗೆ ಕಾರಣ ಎನ್ನಲಾಗುತ್ತಿದೆ. ಇತ್ತೀಚಿನ ಚುನಾವಣೆಯಲ್ಲೂ ಬಿಜೆಪಿ ಎಂದರೆ ಮೋದಿ, ಮೋದಿ ಎಂದರೆ ಬಿಜೆಪಿ ಎಂಬುದು ಎದ್ದು ಕಾಣುವ ಸತ್ಯ. ಮೋದಿ ಇಲ್ಲದ ಸ್ಥಳಗಳಲ್ಲಿ ಅಮಿತ್ ಶಾ ಮತ್ತು ನಡ್ಡಾ ಕಾಣಿಸಿಕೊಂಡರು. ಉತ್ತರ ಪ್ರದೇಶ ಮುಖ್ಯಮಂತ್ರಿ ಆದಿತ್ಯನಾಥ್ ಜತೆಗೆ ಬಿಜೆಪಿಗೆ ಸೇರಿದ ಇತರೆ ರಾಜ್ಯಗಳ ಸಿಎಂಗಳಿಗೂ ಆದ್ಯತೆ ಸಿಕ್ಕಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾಗಿದೆ.

ರಾಮಮಂದಿರದಲ್ಲೂ ಅಪಸ್ವರ

ಚುನಾವಣೆಗೂ ಮುನ್ನವೇ ಅಯೋಧ್ಯೆ ರಾಮಮಂದಿರವನ್ನು ಅದ್ಧೂರಿಯಾಗಿ ಉದ್ಘಾಟನೆ ಮಾಡಿರುವುದು ಸಂಘ ಪರಿವಾರ ಹಾಗೂ ಮೋದಿ ಪರಿವಾರದ ನಡುವಿನ ಭಿನ್ನಾಭಿಪ್ರಾಯವನ್ನು ಮತ್ತಷ್ಟು ಹೆಚ್ಚಿಸಿದೆ ಎನ್ನಲಾಗಿದೆ. ಅಡ್ವಾಣಿಯಂತಹವರನ್ನು ಕಾರ್ಯಕ್ರಮದಿಂದ ದೂರವಿಟ್ಟಿದ್ದ ಸಂಘದ ನಾಯಕರಿಗೆ ಮೋದಿ ಪರಿವಾರ ಸೂಕ್ತ ಪ್ರಾಮುಖ್ಯತೆ ನೀಡಲಿಲ್ಲ ಎಂಬುದು ಆರ್‌ಎಸ್‌ಎಸ್‌ನ ಭಾವನೆ. ಆ ಕಾರ್ಯಕ್ರಮವೆಲ್ಲ ಮೋದಿಮಯ ಆಗಿದ್ದಿದ್ದು ಬಹಿರಂಗ ಸತ್ಯ.

Related Articles

ಇತ್ತೀಚಿನ ಸುದ್ದಿಗಳು