Monday, June 17, 2024

ಸತ್ಯ | ನ್ಯಾಯ |ಧರ್ಮ

ಮೋದಿ ಪುಸ್ತಕವನ್ನು ಭಗವದ್ಗೀತೆಗೆ ಹೋಲಿಸಿದ ಕೇಂದ್ರ ಸಚಿವ

‘ಮೋದಿ ವಿಚಾರದ ಈ ಪುಸ್ತಕ ಮುಂದಿನ ಪೀಳಿಗೆಗೆ ಭಗವದ್ಗೀತೆಯಂತೆ ದಾರಿದೀಪವಾಗಲಿದೆ..’ ಹೀಗೊಂದು ವಿವಾದಾತ್ಮಕ ಹೇಳಿಕೆ ಕೊಟ್ಟಿದ್ದು ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್.

ರಾಜಸ್ಥಾನದ ಜುಂಜುನುದಲ್ಲಿ ಮಾತನಾಡಿದ ಕೇಂದ್ರ ಸಚಿವ ಗಜೇಂದ್ರ ಸಿಂಗ್ ಶೇಖಾವತ್, ‘Modi@20 Dreams meet Delivery’ ಭಗವದ್ಗೀತೆಯ ಉಪದೇಶದಷ್ಟೇ ಪವಿತ್ರ ಮತ್ತು ಮಹತ್ವದ್ದಾಗಿದೆ” ಎಂಬ ಹೀಗೊಂದು ಹೇಳಿಕೆ ಎಲ್ಲೆಡೆ ಚರ್ಚೆಗೆ ಗ್ರಾಸವಾಗಿದೆ.

ಹಿಂದೂ ಧರ್ಮದಲ್ಲಿ ಪವಿತ್ರ ಗ್ರಂಥ ಎಂದು ಹೇಳಲಾಗುವ ಭಗವದ್ಗೀತೆಗೆ ತಮ್ಮ ಗುಲಾಮಗಿರಿ ಪ್ರದರ್ಶಿಸಲು ಯಾವ ಯಾವುದೋ ಪುಸ್ತಕವನ್ನು ಹೋಲಿಕೆ ಮಾಡುವುದು ಧರ್ಮದ್ರೋಹದ ಕೆಲಸ ಎಂದು ರಾಜಸ್ತಾನದ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಗೋವಿಂದ್ ಸಿಂಗ್ ದೋತಾಸ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ‌. ಅಧಿಕಾರದ ದುರಾಸೆಗೆ ಪವಿತ್ರ ಧಾರ್ಮಿಕ ಗ್ರಂಥವನ್ನು ಈ ರೀತಿಯಲ್ಲಿ ಯಾವ್ಯಾವುದೋ ಪುಸ್ತಕಕ್ಕೆ ಹೋಲಿಸಿ ಧರ್ಮದ ಪಾವಿತ್ರ್ಯತೆಯನ್ನು ಕಲುಷಿತಗೊಳಿಸದಿರಿ ಎಂದು ಗೋವಿಂದ್ ಸಿಂಗ್ ದೋತಾಸ್ರ ಹೇಳಿದ್ದಾರೆ.

ಈ ಪುಸ್ತಕದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ, ವಿದೇಶಾಂಗ ಸಚಿವ ಎಸ್ ಜೈಶಂಕರ್, ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಇನ್ಫೋಸಿಸ್ ಸಹ-ಸಂಸ್ಥಾಪಕ ನಂದನ್ ನಿಲೇಕಣಿ ಸೇರಿದಂತೆ ಪ್ರಮುಖ ಗಣ್ಯರು ಬರೆದ 21 ಲೇಖನಗಳ ಸಂಕಲನವಾಗಿದೆ. ಬಿಜೆಪಿ ಪಕ್ಷದ ಕಡೆಯಿಂದ ಈ ಪುಸ್ತಕವನ್ನು ಎಲ್ಲೆಡೆ ಪ್ರಚಾರಪಡಿಸಿ ಹಂಚಲಾಗುತ್ತಿದೆ.

Related Articles

ಇತ್ತೀಚಿನ ಸುದ್ದಿಗಳು