Wednesday, August 6, 2025

ಸತ್ಯ | ನ್ಯಾಯ |ಧರ್ಮ

ಮೋದಿ, ಯೋಗಿ, ಶಾ ಪ್ರಚಾರ ನಡೆಸಿದ್ದ ಕ್ಷೇತ್ರಗಳಲ್ಲಿ ಬಿಜೆಪಿ ಸ್ಥಿತಿ ಅಧೋಗತಿ!

ಕರ್ನಾಟಕ ರಾಜ್ಯ ವಿಧಾನಸಭಾ ಚುನಾವಣೆ ಫಲಿತಾಂಶ ಹೊರಬಿದ್ದಿದ್ದು, ಕಾಂಗ್ರೆಸ್ ಗೆ ಸ್ಪಷ್ಟ ಬಹುಮತ ಸಿಕ್ಕಿದೆ. ಇತ್ತ ರಾಜ್ಯಾದ್ಯಂತ ಕಾಂಗ್ರೆಸ್​ ಕಾರ್ಯಕರ್ತರ ಸಂಭ್ರಮ ಮನೆ ಮಾಡಿದರೆ, ಅತ್ತ ಬಿಜೆಪಿಗೆ ಭಾರೀ ಹಿನ್ನಡೆಯಾಗಿ ಮುಜುಗರಕ್ಕೆ ಒಳಗಾಗಿದೆ.

ಖುದ್ದು ಪ್ರಧಾನಿ ಮೋದಿ, ಯುಪಿ ಸಿಎಂ ಯೋಗಿ, ಗೃಹ ಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ. ನಡ್ಡಾ ರಾಜ್ಯದೆಲ್ಲೆಡೆ ಪ್ರವಾಸ ನಡೆಸಿದರೂ ಪ್ರಯೋಜನವಿಲ್ಲದಂತಾಗಿದೆ. ಪ್ರಚಾರ ನಡೆಸಿದ 67 ಕ್ಷೇತ್ರಗಳ ಪೈಕಿ ಎಷ್ಟು ಗೆದಿದ್ದಾರೆ? ಎಷ್ಟು ಸೋತಿದ್ದಾರೆ ನೋಡೊಣ ಬನ್ನಿ.

ಮೋದಿ ಪ್ರಚಾರ ನಡೆಸಿದ್ದ ಕ್ಷೇತ್ರಗಳಲ್ಲೇನಾಗಿದೆ?

ಕುಡಚಿ- ಪಿ. ರಾಜೀವ್-ಸೋಲು

ಕೋಲಾರ- ವರ್ತೂರು ಪ್ರಕಾಶ್- ಸೋಲು

ಚನ್ನಪಟ್ಟಣ- ಸಿ.ಪಿ. ಯೋಗೇಶ್ವರ್-ಸೋಲು

ಚಿತ್ರದುರ್ಗ- ಜಿ.ಎಚ್. ತಿಪ್ಪಾರೆಡ್ಡಿ- ಸೋಲು

ವಿಜಯನಗರ- ಸಿದ್ಧಾರ್ಥ್ ಸಿಂಗ್-ಸೋಲು

ಸಿಂಧನೂರು- ಕೆ. ಕರಿಯಪ್ಪ- ಸೋಲು

ಕಾರವಾರ- ರೂಪಾಲಿ ನಾಯ್ಕ್-ಸೋಲು

ಕಿತ್ತೂರು- ಮಹಾಂತೇಶ್ ದೊಡ್ಡಗೌಡರ್- ಸೋಲು

ನಂಜನಗೂಡು- ಬಿ. ಹರ್ಷವರ್ಧನ್-ಸೋಲು

ಬಾದಾಮಿ- ಶಾಂತಾಗೌಡ ಪಾಟೀಲ್-ಸೋಲು

ಹಾವೇರಿ- ಗವಿಸಿದ್ದಪ್ಪ ದ್ಯಾಮಣ್ಣವರ್ಲ-ಸೋಲು

ಶಿವಮೊಗ್ಗ ಗ್ರಾಮಾಂತರ- ಅಶೋಕ್ ನಾಯ್ಕ್- ಸೋಲು

ಚಿಕ್ಕೋಡಿ- ರಮೇಶ್ ಕತ್ತಿ- ಸೋಲು

ಹುಮ್ನಾಬಾದ್- ಸಿದ್ದು ಪಾಟೀಲ್- ಗೆಲುವು

ವಿಜಯಪುರ- ಬಸನಗೌಡ ಪಾಟೀಲ್ ಯತ್ನಾಳ್- ಗೆಲುವು

ಯಲಹಂಕ- ಎಸ್.ಆರ್. ವಿಶ್ವನಾಥ್- ಗೆಲುವು

ಬೇಲೂರು- ಹುಲ್ಲಹಳ್ಳಿ ಸುರೇಶ್- ಗೆಲುವು

ಮೂಡಬಿದ್ರಿ- ಸುನಿಲ್ ಕುಮಾರ್- ಗೆಲುವು

ತುಮಕೂರು ಗ್ರಾಮಾಂತರ- ಬಿ. ಸುರೇಶ್ ಗೌಡ- ಗೆಲುವು

ಬೆಂಗಳೂರು ದಕ್ಷಿಣ- ಎಂ. ಕೃಷ್ಣಪ್ಪ- ಗೆಲುವು

ಅಮಿತ್ ಶಾ ಪ್ರಚಾರ ನಡೆಸಿದ್ದ ಕ್ಷೇತ್ರಗಳಿವು

ಬಳ್ಳಾರಿ- ಸೋಲು
ಬೀದರ್ ನಗರ- ಸೋಲು
ಮಸ್ಕಿ- ಸೋಲು
ಧಾರವಾಡ ನಗರ- ಸೋಲು
ದೇವರ ಹಿಪ್ಪರಗಿ- ಸೋಲು
ಅಫಜಲ್ಪುರ- ಸೋಲು
ಯಾದಗಿರಿ- ಸೋಲು
ವಿರಾಜಪೇಟೆ- ಸೋಲು
ಕುಂದಾಪುರ- ಸೋಲು
ನಂಜನಗೂಡು- ಸೋಲು
ಹಗರಿಬೊಮ್ಮನಹಳ್ಳಿ- ಸೋಲು
ದಾವಣಗೆರೆ- ಸೋಲು
ರಾಣೇಬೆನ್ನೂರು- ಸೋಲು
ಬ್ಯಾಡಗಿ- ಸೋಲು
ಹಳಿಯಾಳ- ಸೋಲು
ಚನ್ನಗಿರಿ- ಸೋಲು
ಚಿಕ್ಕಮಗಳೂರು- ಸೋಲು
ಮಾಗಡಿ- ಸೋಲು
ಶಿಡ್ಲಘಟ್ಟ- ಸೋಲು
ಮಾಲೂರು- ಸೋಲು
ವರುಣಾ- ಸೋಲು
ಕಡೂರು- ಗೆಲುವು
ಗುಬ್ಬಿ- ಸೋಲು
ನಾಗಮಂಗಲ-ಗೆಲುವು
ಚಿಕ್ಕೋಡಿ- ಸೋಲು
ಸೌದತ್ತಿ ಯಲ್ಲಮ್ಮ- ಗೆಲುವು
ರಾಮದುರ್ಗ- ಗೆಲುವು
ಶಿರಹಟ್ಟಿ- ಗೆಲುವು
ಬಂಟ್ವಾಳ- ಗೆಲುವು
ತೇರದಾಳ- ಗೆಲುವು
ಮಂಗಳೂರು ನಗರ- ಗೆಲುವು
ಶಿವಮೊಗ್ಗ- ಗೆಲುವು
ದೊಡ್ಡಬಳ್ಳಾಪುರ-ಗೆಲುವು

ಯೋಗಿ ಪ್ರಚಾರ ನಡೆಸಿದ್ದ ಕ್ಷೇತ್ರಗಳಲ್ಲೇನಾಗಿದೆ?

ಇಂಡಿ- ಸೋಲು
ಬಸವನಬಾಗೇವಾಡಿ- ಸೋಲು
ಪುತ್ತೂರು ವಿಧಾನಸಭಾ
ಪುತ್ತೂರು- ಸೋಲು
ಭಟ್ಕಳ- ಸೋಲು
ಗಂಗಾವತಿ- ಸೋಲು
ಜೇವರ್ಗಿ- ಸೋಲು
ಶಹಪೂರ- ಸೋಲು
ಕಾರ್ಕಳ- ಗೆಲುವು
ಬೈಂದೂರು- ಗೆಲುವು
ಶೃಂಗೇರಿ- ಗೆಲುವು

Related Articles

ಇತ್ತೀಚಿನ ಸುದ್ದಿಗಳು

You cannot copy content of this page