Thursday, September 11, 2025

ಸತ್ಯ | ನ್ಯಾಯ |ಧರ್ಮ

“ಮೋದಿ, ಶಾ ಮಾರಾಟಗಾರರು.. ಅಂಬಾನಿ, ಅದಾನಿ ಖರೀದಿದಾರರು” : ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ

ದಶಕಗಳ ಹಿಂದೆ ಕಾಂಗ್ರೆಸ್ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಸ್ಥಾಪಿಸಲಾದ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು, ಕಾರ್ಖಾನೆಗಳನ್ನು ಅಂಬಾನಿ ಮತ್ತು ಅದಾನಿಗೆ ಮಾರಾಟ ಮಾಡಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬುಧವಾರ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ವಿರುದ್ಧ ಆರೋಪಿಸಿದ್ದಾರೆ.

1989 ರಿಂದ ಈಚೆಗೆ ಗಾಂಧಿ ಕುಟುಂಬದ ಯಾವುದೇ ಸದಸ್ಯರು ಪ್ರಧಾನಿ, ಮುಖ್ಯಮಂತ್ರಿ ಅಥವಾ ಯಾವುದೇ ಮಂತ್ರಿಯಾಗಿಲ್ಲದಿದ್ದರೂ ಮೋದಿ, ಶಾ ಗಾಧಿ ಕುಟುಂಬವನ್ನು ದೂರಿ ತಮ್ಮ ಕೆಲಸ ಮಾಡಿಕೊಳ್ಳುತ್ತಿದ್ದಾರೆ. ಇವರು ಗಾಂಧಿ ಕುಟುಂಬವನ್ನು ದೂರುವ ಬದಲು ಲೂಟಿ ಮಾಡಿದ ಹಣವನ್ನು ಮರಳಿ ಪಡೆಯಲಿ ಎಂದು ಮೋದಿ ಮತ್ತು ಅಮಿತ್ ಶಾ ಗೆ ಸವಾಲು ಹಾಕಿದರು. “ಗಾಂಧಿ ಕುಟುಂಬ ದೇಶವನ್ನು ಲೂಟಿ ಮಾಡಿದೆ ಎಂದು ಮೋದಿ ಹೇಳುತ್ತಾರೆ. ನೀವು ಪ್ರಧಾನಿಯಾಗಿ 10 ವರ್ಷ ಕಳೆದರೂ ಲೂಟಿ ಮಾಡಿದ ಹಣವನ್ನು ಯಾಕೆ ಹಿಂಪಡೆದಿಲ್ಲ, ಅದನ್ನು ಹಿಂಪಡೆಯಿರಿ” ಎಂದು ಸವಾಲು ಹಾಕಿದರು.

“ಮೋದಿ ಅವರು ದೊಡ್ಡ ದೊಡ್ಡ ಕೆಲಸಗಳನ್ನು ಮಾಡಿದ್ದಾರೆ ಎಂದು ಹೇಳುತ್ತಾರೆ, ಹಾಗಾದರೆ ನೀವು ಏನು ಮಾಡಿದ್ದೀರಿ ಹೇಳಿ. ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರು ಸ್ಥಾಪಿಸಿದ ದೊಡ್ಡ ದೊಡ್ಡ ಸರಾಕಾರಿ ಸಂಸ್ಥೆಗಳು, ಸರ್ಕಾರಿ ಸ್ವಾಮ್ಯದ ಕಾರ್ಖಾನೆಗಳನ್ನು ಮಾರಾಟ ಮಾಡಿ ತಿನ್ನುತ್ತಿದ್ದೀರಿ ಎಂದು ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಈ ದೇಶದಲ್ಲಿ ಏನಾಗುತ್ತಿದೆ ಎಂದರೆ ಮಾರಾಟಗಾರರು ಮತ್ತು ಇಬ್ಬರು ಖರೀದಿದಾರರ ನಡುವೆ ವ್ಯಾಪಾರ ವಹಾವಾಟು ನಡೆಯುತ್ತಿದೆ. ಮಾರಾಟಗಾರರು ಮೋದಿ ಮತ್ತು ಶಾ ಮತ್ತು ಖರೀದಿದಾರರು ಅಂಬಾನಿ ಮತ್ತು ಅದಾನಿ.” ಎಂದು ಆರೋಪಿಸಿದ್ದಾರೆ.

“ಮೋದಿ ಮತ್ತು ಅಮಿತ್ ಶಾ ಅಂಬಾನಿ ಅದಾನಿಗಾಗಿ ಬದುಕುತ್ತಿದ್ದಾರೆಯೇ ಹೊರತು, ದೇಶದ ಜನರಿಗಾಗಿ ಅಲ್ಲ. ಹೀಗಾಗಿ ಮೋದಿ ಮತ್ತು ಶಾ ಅಧಿಕಾರದಲ್ಲಿದ್ದಷ್ಟು ದಿನವೂ ಅಂಬಾನಿ ಅದಾನಿಗೆ ಬರಪೂರ ಲಾಭವಿದೆ” ಎಂದು ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page