Sunday, June 29, 2025

ಸತ್ಯ | ನ್ಯಾಯ |ಧರ್ಮ

ಚುನಾವಣಾ ಪ್ರಚಾರ ಹಿನ್ನೆಲೆ: ಬ್ರಿಕ್ಸ್ ಪ್ಲಸ್ ಸಮ್ಮೇಳನಕ್ಕೆ ಪ್ರಧಾನಿ ಮೋದಿ ಗೈರು

ಹೊಸದೆಹಲಿ: ಮಂಗಳವಾರ ನಡೆಯಲಿರುವ ಬ್ರಿಕ್ಸ್ ಪ್ಲಸ್ ವರ್ಚುವಲ್ ಸಮ್ಮೇಳನಕ್ಕೆ ಪ್ರಧಾನಿ ನರೇಂದ್ರ ಮೋದಿ ಗೈರು ಹಾಜರಾಗಿದ್ದಾರೆ. ಸಮ್ಮೇಳನದಲ್ಲಿ ಇಸ್ರೇಲ್-ಹಮಾಸ್ ಯುದ್ಧದ ಕುರಿತು ಚರ್ಚೆ ನಡೆಯಲಿದೆ.

ಪ್ರಧಾನಿ ಪರವಾಗಿ ವಿದೇಶಾಂಗ ಸಚಿವ ಜೈಶಂಕರ್ ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ. ಇದನ್ನು ಅಧಿಕಾರಿಗಳು ಖಚಿತಪಡಿಸಿದ್ದಾರೆ. ಪ್ರಧಾನಿ ಮೋದಿ ಅವರು ರಾಜಸ್ಥಾನ ವಿಧಾನಸಭಾ ಚುನಾವಣಾ ಪ್ರಚಾರ ಮತ್ತು ಇತರ ಕೆಲಸಗಳಲ್ಲಿ ನಿರತರಾಗಿದ್ದರಿಂದ ಕಾರ್ಯಕ್ರಮದಲ್ಲಿ ಭಾಗವಹಿಸಲು ನಿರಾಕರಿಸಿದರು.

ರಷ್ಯಾ, ಚೀನಾ, ದಕ್ಷಿಣ ಆಫ್ರಿಕಾ ಮತ್ತು ಬ್ರೆಜಿಲ್ ರಾಷ್ಟ್ರಗಳ ಮುಖ್ಯಸ್ಥರು ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದಾರೆ. ಮತ್ತೊಂದೆಡೆ, ಭಾರತ ಮೊದಲಿನಿಂದಲೂ ಇಸ್ರೇಲ್-ಹಮಾಸ್ ಯುದ್ಧದ ವಿಷಯದಲ್ಲಿ ಬೇರೆಯಾಗಿ ನಡೆದುಕೊಳ್ಳುತ್ತಿದೆ. ಬ್ರಿಕ್ಸ್ ಪ್ಲಸ್ ಗುಂಪಿನಲ್ಲಿರುವ ದೇಶಗಳಿಗೆ ಹೋಲಿಸಿದರೆ ಭಾರತವು ಈ ವಿವಾದಕ್ಕೆ ವಿಭಿನ್ನವಾಗಿ ಪ್ರತಿಕ್ರಿಯಿಸುತ್ತಿದೆ. ಇಲ್ಲಿಯವರೆಗೆ ಭಾರತ ಇಸ್ರೇಲ್‌ಗೆ ಬಾಂಬ್ ದಾಳಿ ನಿಲ್ಲಿಸುವಂತೆ ಕೇಳಿಲ್ಲ. ಹಮಾಸ್‌ನ ದಾಳಿಗಳನ್ನು ಉಲ್ಲೇಖಿಸಿಲ್ಲವೆನ್ನುವ ಕಾರಣಕ್ಕೆ ವಿಶ್ವಸಂಸ್ಥೆಯಲ್ಲಿನ ನಿರ್ಣಯದ ಮೇಲೆ ಮತದಾನಕ್ಕೆ ಗೈರುಹಾಜರಾಗಿತ್ತು. ಬ್ರಿಕ್ಸ್ ರಾಷ್ಟ್ರಗಳಾದ ರಷ್ಯಾ, ಚೀನಾ ಮತ್ತು ದಕ್ಷಿಣ ಆಫ್ರಿಕಾ ಇಸ್ರೇಲ್ ವಿರುದ್ಧ ಬಹಿರಂಗವಾಗಿ ಆರೋಪ ಮಾಡಿವೆ.

ಮತ್ತೊಂದೆಡೆ ಇಸ್ರೇಲ್ ಬಾಂಬ್ ದಾಳಿಯನ್ನು ತಡೆಯಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ನಿರ್ಣಯ ಅಂಗೀಕರಿಸಬೇಕೆಂಬ ಬೇಡಿಕೆಗಳಿರುವಾಗಲೇ ಬ್ರಿಕ್ಸ್ ಸಭೆ ನಡೆಯುತ್ತಿರುವುದು ಗಮನಾರ್ಹ. ಈ ನಿರ್ಣಯಕ್ಕಾಗಿ P5 ದೇಶಗಳ ಮೇಲೆ ಒತ್ತಡ ಹೇರಲು ಸಭೆ ನಡೆಯಲಿದೆ. ಗಾಜಾದಲ್ಲಿ ಮಾನವೀಯ ನೆರವಿಗಾಗಿ ಯುದ್ಧದಲ್ಲಿ ಅಲ್ಪ ವಿರಾಮ ಸಾಧಿಸುವ ಅಂತಾರಾಷ್ಟ್ರೀಯ ಸಮುದಾಯದ ಪ್ರಯತ್ನಗಳನ್ನು ಭಾರತ ಮಂಗಳವಾರ ಸ್ವಾಗತಿಸಿದೆ. ಅಂತರಾಷ್ಟ್ರೀಯ ಕಾನೂನುಗಳಿಗೆ ಬದ್ಧವಾಗಿ ಶಾಂತಿಯುತ ಪರಿಸ್ಥಿತಿಗಳನ್ನು ಸೃಷ್ಟಿಸುವ ಕೆಲಸ ಮಾಡಲು ಅದು ಕರೆ ನೀಡಿದೆ. ಜೊತೆಗೆ ಒತ್ತೆಯಾಳುಗಳನ್ನು ಬೇಷರತ್ತಾಗಿ ಬಿಡುಗಡೆ ಮಾಡುವಂತೆಯೂ ಒತ್ತಾಯಿಸಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page