Monday, July 28, 2025

ಸತ್ಯ | ನ್ಯಾಯ |ಧರ್ಮ

ಇಷ್ಟೆಲ್ಲ ಮಾತನಾಡೋ ಮೋದಿ, ಪೆನ್ ಡ್ರೈವ್ ಪ್ರಕರಣದ ಬಗ್ಗೆ ಮೌನವೇಕೆ? : ಪ್ರಿಯಾಂಕಾ ಗಾಂಧಿ

ಚುನಾವಣಾ ಸಂದರ್ಭದಲ್ಲಿ ಎದುರು ಪಕ್ಷಗಳ ವಿರುದ್ಧ  ಪುಂಖಾನುಪುಂಖವಾಗಿ ಮಾತನಾಡುವ ನರೇಂದ್ರ ಮೋದಿಗೆ ದೇಶವೇ ಬೆಚ್ಚಿ ಬೀಳುವಂತೆ ಮಾಡಿದ ಪೆನ್ ಡ್ರೈವ್ ಪ್ರಕರಣದ ಬಗ್ಗೆ ಕಿಂಚಿತ್ ಖಂಡನೆ ಇಲ್ಲದೇ ಇರುವುದರ ಅರ್ಥವೇನು ಎಂದು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ನರೇಂದ್ರ ಮೋದಿಯವರನ್ನು ಪ್ರಶ್ನಿಸಿದ್ದಾರೆ.

ತಮ್ಮ X ಖಾತೆಯಲ್ಲಿ ಬರೆದಿರುವ ಪ್ರಿಯಾಂಕಾ ಗಾಂಧಿಯವರು ಪ್ರಜ್ವಲ್ ರೇವಣ್ಣ ಕುರಿತಾಗಿ ನರೇಂದ್ರ ಮೋದಿ ಮೌನದ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನೂರಾರು ಮಹಿಳೆಯರ ಜೀವನವನ್ನು ಹಾಳು ಮಾಡಿದ ನಾಯಕನ ಬಗ್ಗೆ ಏಕೆ ಮೌನವಾಗಿದ್ದೀರಿ ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ಪ್ರಶ್ನೆ ಮಾಡಿದ್ದಾರೆ.

ಟ್ವಿಟ್ ನಲ್ಲಿ ಏನಿದೆ : ಪ್ರಧಾನಿ ಅವರು ಭುಜದ ಮೇಲೆ ಕೈಯಿಟ್ಟು ಫೋಟೋ ತೆಗೆಸಿಕೊಳ್ಳುವ ನಾಯಕ ಹಾಗೂ ಚುನಾವಣೆಗೂ 10 ದಿನಗಳ ಹಿಂದೆ ಸ್ವತಃ ಪ್ರಧಾನಿಯೇ ಆ ನಾಯಕನ ಪರ ಪ್ರಚಾರಕ್ಕೆ ತೆರಳಿದ್ದರು. ಅಲ್ಲದೇ ಪ್ರಧಾನಿಯವರು ನಾಯಕನನ್ನು ವೇದಿಕೆಯಲ್ಲಿ ಹಾಡಿ ಹೊಗಳಿದ್ದರು. ಆದರೆ ಇಂದು ಆ ಕರ್ನಾಟಕದ ನಾಯಕ ದೇಶದಿಂದಲೇ ತಲೆಮರೆಸಿಕೊಂಡಿದ್ದಾನೆ. ಆತನ ವಿರುದ್ಧದ ಆರೋಪಗಳನ್ನು ಕೇಳಿದಾಗ ನಿಜಕ್ಕೂ ಮೈ ನಡುಗುತ್ತದೆ. ಆತ ನೂರಾರು ಮಹಿಳೆಯರ ಜೀವನವನ್ನೇ ಹಾಳು ಮಾಡಿದ್ದಾನೆ. ಇಷ್ಟಲ್ಲಾ ಆದರೂ ಮೋದಿಜಿ, ನೀವು ಇನ್ನೂ ಸುಮ್ಮನಿರುತ್ತೀರಾ? ಎಂದು ಪ್ರಶ್ನೆ ಮಾಡಿದ್ದಾರೆ.

ಸಧ್ಯ ಈ ಬಗ್ಗೆ ಶಿವಮೊಗ್ಗದಲ್ಲಿ ಜೆಡಿಎಸ್ ನಾಯಕ ಕುಮಾರಸ್ವಾಮಿ ಮೌನ ಮುರಿದಿದ್ದು, ಉಪ್ಪು ತಿಂದವನು ನೀರು ಕುಡಿಯಲೇಬೇಕು ಎಂದು ಪ್ರತಿಕ್ರಿಯಿಸಿದ್ದಾರೆ. ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಅನಗತ್ಯವಾಗಿ ನಮ್ಮ ಕುಟುಂಬವನ್ನು ಎಳೆದು ತರಲಾಗುತ್ತಿದೆ. ಇದು ನಮ್ಮ ಕುಟುಂಬಕ್ಕೆ ಸಂಬಂಧಿಸಿರುವ ವಿಚಾರ ಅಲ್ಲ. ಇದು ಅವರವರ ವಯಕ್ತಿಕ.. ಇದಕ್ಕೂ ಪಕ್ಷ ಮತ್ತು ಕುಟುಂಬಕ್ಕೆ ತಳುಕು ಹಾಕುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page