Monday, January 12, 2026

ಸತ್ಯ | ನ್ಯಾಯ |ಧರ್ಮ

ಇನ್ನೊಮ್ಮೆ ಗೆದ್ದರೆ ಮೋದಿ ತನಗೆ ತಾನೇ ದೇವಸ್ಥಾನ ಕಟ್ಟಿಕೊಳ್ಳುತ್ತಾರೆ: ಶಿವರಾಜ್ ತಂಗಡಗಿ ವ್ಯಂಗ್ಯ

ಕೊಪ್ಪಳ : ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ನರೇಂದ್ರ ಮೋದಿಯವರು ಮತ್ತೊಮ್ಮೆ ಪ್ರಧಾನಿ ಆದರೆ ತಮ್ಮ ದೇವಸ್ಥಾನವನ್ನು ತಾವೇ ಕಟ್ಟಿಕೊಳ್ಳುತ್ತಾರೆ ಎಂದು ಕೊಪ್ಪಳದ ಕಾರಟಗಿಯಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ್ ತಂಗಡಗಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದರು.

ಕೊಪ್ಪಳ ಜಿಲ್ಲೆಯ ಕಾರಟಗಿಯಲ್ಲಿ ಮಾತನಾಡಿದ ಅವರು, ಮೋದಿ ಮತ್ತೊಮ್ಮೆ ಗೆದ್ದರೆ ತಮ್ಮ ದೇವಸ್ಥಾನ ತಾವೇ ಕಟ್ಟಿಕೊಳ್ಳುತ್ತಾರೆ ಎಂದು ವ್ಯಂಗ್ಯವಾಡಿದರು.


ರಾಮನ ದೇಗುಲ ಆಯ್ತು ಇನ್ನು ನನ್ನದೊಂದು ದೇಗುಲ ಎಂದು ಕಟ್ಟಿಕೊಳ್ಳುತ್ತಾರೆ. ಯಾಕೆಂದರೆ ಇತ್ತೀಚೆಗೆ ಮೋದಿ ಹೇಳಿಕೆಗಳು ಹಾಗೆಯೇ ಇವೆ. ದೇವರೇ ನನ್ನನ್ನು ಇಲ್ಲಿಗೆ ಕಳುಹಿಸಿದ್ದಾನೆ ಅಂತ ನರೇಂದ್ರ ಮೋದಿ ಹೇಳುತ್ತಾರೆ ಎಂದು ಅವರು ಹೇಳಿದರು.

ಜನ ಮತ್ತೊಮ್ಮೆ ಅವಕಾಶ ಕೊಟ್ಟರೆ ಮೋದಿಯದೇ ದೇಗುಲ ಕಟ್ಟುವ ಪರಿಸ್ಥಿತಿ ನಿರ್ಮಾಣವಾಗಲಿದೆ. ಪ್ರತಿ ಊರಲ್ಲಿ ಮೋದಿ ದೇವಸ್ಥಾನ ಕಟ್ಟಿ ಅನ್ನೋ ಸ್ಥಿತಿ ಬರುತ್ತದೆ. ಪುರಿ ಜಗನ್ನಾಥ ಮೋದಿ ಭಕ್ತ ಅಂತಾರೆ. ಎಲ್ಲಿಗೆ ಬಂದಿದೆ ಸ್ಥಿತಿ ನೋಡಿ.

ಮೋದಿ ಸಬ್ ಕಾ ಸಾಥ್ ಅಂತಾರೆ ವೇದಿಕೆಯಲ್ಲಿ ಹಿಂದುತ್ವ ಅಂತಾರೆ ಈ ರೀತಿಯ ಮಾತನ್ನು ಹಿಂದಿನ ಯಾವ ಪ್ರಧಾನಮಂತ್ರಿಯು ಮಾತಾಡಿಲ್ಲ. ಇದು ನರೇಂದ್ರ ಮೋದಿಯವರ ಅಹಂಕಾರದ ಕೊನೆಯ ಹಂತ ಎಂದು ಕೊಪ್ಪಳದ ಕಾರಟಗಿಯಲ್ಲಿ ಸಚಿವ ಶಿವರಾಜ್ ತಂಗಡಿ ವಾಗ್ದಾಳಿ ನಡೆಸಿದರು

Related Articles

ಇತ್ತೀಚಿನ ಸುದ್ದಿಗಳು

You cannot copy content of this page