Thursday, July 4, 2024

ಸತ್ಯ | ನ್ಯಾಯ |ಧರ್ಮ

ಮೋದೀಜಿ, ಭಾಹ್ಯಾಕಾಶಕ್ಕೆ ಆಮೇಲೆ ಹೋಗುವಿರಂತೆ. ಮೊದಲು ಮುಣಿಪುರಕ್ಕೆ ಹೋಗಿ: ಜೈರಾಮ್‌ ರಮೇಶ್‌

ನವದೆಹಲಿ: ಭಾರತದ ಮೊದಲ ಮಾನವಸಹಿತ ಬಾಹ್ಯಾಕಾಶ ಮಿಷನ್‌ಗೆ ಪ್ರಧಾನಿ ನರೇಂದ್ರ ಮೋದಿ ಅಭ್ಯರ್ಥಿಯಾಗಬಹುದು ಎಂದು ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್ ಹೇಳಿದ್ದಾರೆ. ಆದರೆ, ಮೋದಿಯವರು ಬಾಹ್ಯಾಕಾಶಕ್ಕೆ ಹೋಗುವ ಮೊದಲು ಮಣಿಪುರಕ್ಕೆ ಹೋಗಬೇಕು ಎಂದು ಕಾಂಗ್ರೆಸ್ ಮುಖಂಡ ಜೈರಾಮ್ ರಮೇಶ್ ಗುರುವಾರ ವ್ಯಂಗ್ಯವಾಡಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು, “ಮೋದಿಯವರು ಜೀವವಿಲ್ಲದ ಬಾಹ್ಯಾಕಾಶಕ್ಕೆ ಹೋಗುವ ಮೊದಲು, ಇಲ್ಲಿ ಮಣಿಪುರದಲ್ಲಿ ಎಷ್ಟೊಂದು ಸಹಮನುಷ್ಯರು ಕಷ್ಟದಲ್ಲಿರುವಾಗ ಮೊದಲು ಇಲ್ಲಿಗೆ ಭೇಟಿ ನೀಡಲಿʼ ಎಂದು ಬರೆದಿದ್ದಾರೆ.

2025 ರಲ್ಲಿ ಉಡಾವಣೆಯಾಗಲಿರುವ ಭಾರತದ ಮೊದಲ ಮಾನವಸಹಿತ ಬಾಹ್ಯಾಕಾಶ ಮಿಷನ್ ‘ಗಗನ್ಯಾನ್’ಗೆ ಪ್ರಧಾನಿ ಮೋದಿ ಅಭ್ಯರ್ಥಿಯಾಗಬಹುದು ಎಂದು ಇಸ್ರೋ ಮುಖ್ಯಸ್ಥ ಎಸ್ ಸೋಮನಾಥ್ ಹೇಳಿದ್ದಾರೆಂದು ಮಾಧ್ಯಮವೊಂದು ವರದಿ ಪ್ರಕಟಿಸಿದೆ. “ ದೇಶದ ಮುಖ್ಯಸ್ಥರನ್ನು ಬಾಹ್ಯಾಕಾಶಕ್ಕೆ ಕಳುಹಿಸುವ ಸಾಮರ್ಥ್ಯ ನಮ್ಮಲ್ಲಿರುವುದು ನಮಗೆಲ್ಲರಿಗೂ ತುಂಬಾ ಹೆಮ್ಮೆಯಾಗುತ್ತದೆ” ಎಂದು ಸೋಮನಾಥ್ ಹೇಳಿರುವುದಾಗಿ ವರದಿ ಪ್ರಕಟಿಸಿತ್ತು.

ಆದ ಈಶಾನ್ಯ ರಾಜ್ಯವಾದ ಮಣಿಪುರದಲ್ಲಿ ಮೇ 2023 ರಲ್ಲಿ ಪ್ರಾರಂಭವಾದ ಜನಾಂಗೀಯ ಹಿಂಸಾಚಾರದ ಬಗ್ಗೆ ಇಂಡಿಯಾ ಬಣದ ವಿರೋಧ ಪಕ್ಷದ ಸಂಸದರಿಂದ ಕೇಂದ್ರ ಸರ್ಕಾರವು ಬಿಸಿಯನ್ನು ಎದುರಿಸುತ್ತಲೇ ಇದೆ.

ಬುಧವಾರ ರಾಜ್ಯಸಭೆಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಮಣಿಪುರದಲ್ಲಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಕೇಂದ್ರ ಸರ್ಕಾರ ಪ್ರಯತ್ನಿಸುತ್ತಿದೆ ಎಂದು ದೃಢಪಡಿಸಿದರು.

“ಮಣಿಪುರದಲ್ಲಿ ಪರಿಸ್ಥಿತಿಯನ್ನು ತಿಳಿಗೊಳಿಸಲು ಸರ್ಕಾರ ನಿರಂತರವಾಗಿ ಪ್ರಯತ್ನಗಳನ್ನು ಮಾಡುತ್ತಿದೆ. 11,000 ಕ್ಕೂ ಹೆಚ್ಚು ಎಫ್‌ಐಆರ್‌ಗಳನ್ನು ದಾಖಲಿಸಲಾಗಿದೆ ಮತ್ತು 500 ಕ್ಕೂ ಹೆಚ್ಚು ಜನರನ್ನು ಬಂಧಿಸಲಾಗಿದೆ. ಮಣಿಪುರದಲ್ಲಿ ಹಿಂಸಾಚಾರದ ಘಟನೆಗಳು ನಿರಂತರವಾಗಿ ಕಡಿಮೆಯಾಗುತ್ತಿವೆ” ಎಂದು ಪ್ರಧಾನಿ ಮೋದಿ ಹೇಳಿಕೆ ನೀಡಿದ್ದಾರೆ.

ಈಶಾನ್ಯ ರಾಜ್ಯವು ಕಳೆದ ವರ್ಷ ಮೇ 3 ರಿಂದ ಜನಾಂಗೀಯ ಹಿಂಸಾಚಾರಕ್ಕೆ ಸಾಕ್ಷಿಯಾಗಿದೆ, ಮೈತೆಯಿ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಬೇಡಿಕೆಯನ್ನು ವಿರೋಧಿಸಿ ಆಲ್ ಟ್ರೈಬಲ್ಸ್ ಸ್ಟೂಡೆಂಟ್ಸ್ ಯೂನಿಯನ್ (ಎಟಿಎಸ್‌ಯು) ಆಯೋಜಿಸಿದ್ದ ಜಾಥಾದಲ್ಲಿ ಸಾಕಷ್ಟು ಘರ್ಷಣೆಗಳು ನಡೆದದ್ದನ್ನು ಇಲ್ಲಿ ಸ್ಮರಿಸಬಹುದು.

Related Articles

ಇತ್ತೀಚಿನ ಸುದ್ದಿಗಳು