Thursday, July 31, 2025

ಸತ್ಯ | ನ್ಯಾಯ |ಧರ್ಮ

ಮೋದಿ ಆಪ್ತ ಡೊನಾಲ್ಡ್ ಟ್ರಂಪ್‌ನಿಂದ ಭಾರತಕ್ಕೆ ತೆರಿಗೆ ಬರೆ ; ಶೇ 25 ರಷ್ಟು ಸುಂಕ ಹೆಚ್ಚಳ

ನರೇಂದ್ರ ಮೋದಿ ನಮ್ಮ ಸ್ನೇಹಿತರೇ ಆದರೂ, ನಾವು ಅವರೊಂದಿಗೆ (ಭಾರತದೊಂದಿಗೆ) ಬಹಳ ಕಡಿಮೆ ವ್ಯವಹಾರ ಮಾಡಿದ್ದೇವೆ ಎಂಬುದನ್ನು ನೆನಪಿಡಿ. ಭಾರತ ತೈಲ ವ್ಯಾಪಾರದಲ್ಲಿ ರಷ್ಯಾ ಜೊತೆ ಕೈ ಜೋಡಿಸಿದ ಹಿನ್ನೆಲೆಯಲ್ಲಿ ಈ ಸುಂಕ ಹೆಚ್ಚಳ ಅನಿವಾರ್ಯ ಎಂದು ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಬರುವ ಆಗಸ್ಟ್ 1 ರಿಂದಲೇ ಭಾರತ ಅಮೇರಿಕಾ ಜೊತೆಗಿನ ವ್ಯವಹಾರದಲ್ಲಿ ಶೇ.25 ರಷ್ಟು ತೆರಿಗೆ ಪಾವತಿಸಲಿದೆ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.

ಭಾರತದ ಸುಂಕ ಬಹಳ ಹೆಚ್ಚು. ವಿಶ್ವದಲ್ಲೇ ಅತ್ಯಧಿಕವಾಗಿವೆ ಮತ್ತು ಅವರು ಯಾವುದೇ ದೇಶಕ್ಕಿಂತ ಅತ್ಯಂತ ಕಠಿಣ ಮತ್ತು ಅಸಹ್ಯಕರವಾದ ವಿತ್ತೀಯವಲ್ಲದ ವ್ಯಾಪಾರ ಅಡೆತಡೆಗಳನ್ನು ಹೊಂದಿದ್ದಾರೆ. ಅಲ್ಲದೆ, ಅವರು ಯಾವಾಗಲೂ ತಮ್ಮ ಮಿಲಿಟರಿ ಉಪಕರಣಗಳ ಬಹುಪಾಲನ್ನು ರಷ್ಯಾದಿಂದ ಖರೀದಿಸಿದ್ದಾರೆ ಮತ್ತು ರಷ್ಯಾ ಉಕ್ರೇನ್‌ನಲ್ಲಿ ಹತ್ಯೆಯನ್ನು ನಿಲ್ಲಿಸಬೇಕೆಂದು ಎಲ್ಲರೂ ಬಯಸುವ ಸಮಯದಲ್ಲಿ ಚೀನಾದೊಂದಿಗೆ ರಷ್ಯಾದ ಅತಿದೊಡ್ಡ ಇಂಧನ ಖರೀದಿದಾರರಾಗಿದ್ದಾರೆ ಎಂದು ಸುಂಕ ಹೆಚ್ಚಳದ ಮೂಲ ಕಾರಣವನ್ನು ಬಿಚ್ಚಿಟ್ಟಿದ್ದಾರೆ.

ಸುಂಕ ಹೆಚ್ಚಳದ ಬಗ್ಗೆ ಈ ಹಿಂದೆಯೇ ಸುಳಿವು ಬಿಟ್ಟಿದ್ದ ಡೊನಾಲ್ಡ್ ಟ್ರಂಪ್ ಜವಳಿ ಉತ್ಪನ್ನಗಳಲ್ಲಿ ಭಾರತದ ಜತೆ ಪೈಪೋಟಿಯಲ್ಲಿರುವ ಬಾಂಗ್ಲಾದೇಶಕ್ಕೆ ಹೋಲಿಸಿದರೆ ಭಾರತದ ಸ್ಥಿತಿ ಉತ್ತಮವಾಗಿರುತ್ತದೆ. ಆದರೆ ವಿಯೇಟ್ನಾಂ (20%), ಇಂಡೋನೇಷ್ಯಾ (19%) ದೇಶಗಳು ಭಾರತಕ್ಕಿಂತ ಕಡಿಮೆ ಸುಂಕ ಎದುರಿಸುತ್ತಿವೆ. ಯುರೋಪಿಯನ್ ಒಕ್ಕೂಟ ಮತ್ತು ಜಪಾನ್ (15%) ಮೇಲೆ ವಿಧಿಸಿದ ಸುಂಕ ಕೂಡಾ ಭಾರತಕ್ಕಿಂತ ಕಡಿಮೆಯಾಗಿದೆ.

ಭಾರತವು ಆಗಸ್ಟ್ 1 ರಿಂದ 25% ಸುಂಕ ಹಾಗೂ ಅದರೊಂದಿಗೆ ಪೆನಾಲ್ಟಿಯನ್ನೂ ಹೊಂದಿರಲಿದೆ. ಈ ವಿಷಯದ ಬಗ್ಗೆ ನೀವು ಗಮನ ನೀಡಿದ್ದಕ್ಕೆ ಧನ್ಯವಾದಗಳು ಎಂದು ಟ್ರಂಪ್ ತಮ್ಮ ಜಾಲತಾಣಗಳಲ್ಲಿ ಬರೆದಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page