Saturday, August 31, 2024

ಸತ್ಯ | ನ್ಯಾಯ |ಧರ್ಮ

AMMA ಸಮಿತಿಗೆ ರಾಜೀನಾಮೆ ಬಳಿಕ ‘ಮೆಗಾಸ್ಟಾರ್’ ಮೋಹನ್ ಲಾಲ್ ಮೊದಲ ಪ್ರತಿಕ್ರಿಯೆ

“ಹೇಮಾ ಸಮಿತಿ ವರದಿಯನ್ನು ನಾವು ಸ್ವಾಗತಿಸುತ್ತೇವೆ. ಸರ್ಕಾರವು ಆ ವರದಿಯನ್ನು ಬಿಡುಗಡೆ ಮಾಡಿರುವುದು ಸರಿಯಾದ ನಿರ್ಧಾರ. ಅಮ್ಮಾ (ಮಲಯಾಳಂ ಚಲನಚಿತ್ರ ಮಂಡಳಿ) ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಲು ಸಾಧ್ಯವಿಲ್ಲ. ಇದು ತುಂಬಾ ಶ್ರಮದಾಯಕ ಉದ್ಯಮವಾಗಿದೆ. ಅನೇಕ ಜನರು ಇದರಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಇದಕ್ಕೆ ಕಾರಣರಾದವರನ್ನು ಶಿಕ್ಷಿಸಲಾಗುವುದು, ತನಿಖೆ ನಡೆಯುತ್ತಿದೆ” ಎಂದು “ಅಮ್ಮಾ” ಮಾಜಿ ಅಧ್ಯಕ್ಷ ಮೋಹನ್ ಲಾಲ್ ತಮ್ಮ ರಾಜೀನಾಮೆ ಬಳಿಕ ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

ಮಲಯಾಳಂ ಚಲನಚಿತ್ರೋದ್ಯಮದಲ್ಲಿ ಲೈಂಗಿಕ ಕಿರುಕುಳದ ಆರೋಪಗಳನ್ನು ವಿವರಿಸುವ ನ್ಯಾಯಮೂರ್ತಿ ಹೇಮಾ ಸಮಿತಿಯ ವರದಿಯನ್ನು ಬಿಡುಗಡೆ ಮಾಡಿದ್ದಕ್ಕಾಗಿ ನಟ ಮೋಹನ್‌ಲಾಲ್ ಇಂದು ಸರ್ಕಾರದ ನಿರ್ಧಾರವನ್ನು ಶ್ಲಾಘಿಸಿದ್ದಾರೆ. ಹಿರಿಯ ನಟ ಸಿದ್ದಿಕ್ ಮತ್ತು ಚಲನಚಿತ್ರ ನಿರ್ಮಾಪಕ ರಂಜಿತ್ ಬಾಲಕೃಷ್ಣನ್ ಸೇರಿದಂತೆ ಮಾಲಿವುಡ್‌ನ ಕೆಲವು ದೊಡ್ಡ ಹೆಸರುಗಳ ವಿರುದ್ಧ ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಆರೋಪಗಳ ಸುರಿಮಳೆ ಹಿನ್ನೆಲೆಯಲ್ಲಿ ಮೋಹನ್ ಲಾಲ್ ಪ್ರತಿಕ್ರಿಯೆ ಮಹತ್ವ ಪಡೆದುಕೊಂಡಿದೆ.

ಆದರೆ ಮೋಹನ್ ಲಾಲ್ ಅವರ ನಿರ್ಧಾರವನ್ನು ಕಟುವಾಗಿ ಟೀಕಿಸಿರುವ ಬಹುಭಾಷಾ ನಟಿ ಪಾರ್ವತಿ ಚಿತ್ರೋಧ್ಯಮದ ಮೇಲೆ ಬಂದಿರುವ ಗಂಭೀರ ಆರೋಪಕ್ಕೆ ಮಂಡಳಿಯ ಅಧ್ಯಕ್ಷರಾಗಿ ಅದನ್ನು ನೇರವಾಗಿ ಎದುರಿಸುವದ ಬಿಟ್ಟು ಪದತ್ಯಾಗ ಮಾಡಿರುವುದು ಮೋಹನ್ ಲಾಲ್ ಅವರ ಪಲಾಯನವಾದ. ಇದು ಹೇಡಿತನವನ್ನು ಸೂಚಿಸುತ್ತದೆ ಎಂದು ಹೇಳಿದ್ದಾರೆ.

‘ಮೆಗಾಸ್ಟಾರ್’ ಮೋಹನ್ ಲಾಲ್ ಒಬ್ಬ ಹೇಡಿ: ನಾಯಕ ನಟಿ ಪಾರ್ವತಿ ಕಿಡಿ : ಇದನ್ನೂ ಓದಿ

ಈ ನಡುವೆ ನ್ಯಾಯಮೂರ್ತಿ ಹೇಮಾ ಸಮಿತಿಯ 235 ಪುಟಗಳ ವರದಿ, ಸಾಕ್ಷಿಗಳು ಮತ್ತು ಆರೋಪಿಗಳ ಹೆಸರುಗಳನ್ನು ತಿದ್ದುಪಡಿ ಮಾಡಿದ ನಂತರ ಪ್ರಕಟಿಸಲಾಗಿದೆ, ಮಲಯಾಳಂ ಚಲನಚಿತ್ರೋದ್ಯಮವನ್ನು 10-15 ಪುರುಷ ನಿರ್ಮಾಪಕರು, ನಿರ್ದೇಶಕರು ಮತ್ತು ನಟರು ನಿಯಂತ್ರಿಸುತ್ತಾರೆ ಎಂದು ಆರೋಪಿಸಲಾಗಿದೆ.

ಇದಕ್ಕೆ ಪ್ರತಿಕ್ರಿಯಿಸಿದ ಮೋಹನ್ ಲಾಲ್ “ಮಲಯಾಳಂ ಚಿತ್ರರಂಗದ ಯಾವುದೇ ಶಕ್ತಿ ಗುಂಪಿನ ಭಾಗವಾಗಿಲ್ಲ ಮತ್ತು ಅಂತಹ ಯಾವುದೇ ಗುಂಪಿನ ಅಸ್ತಿತ್ವದ ಬಗ್ಗೆ ನನಗೆ ತಿಳಿದಿಲ್ಲ. ಚಿತ್ರರಂಗವು ಸಾವಿರಾರು ಜನರು ಕೆಲಸ ಮಾಡುವ ದೊಡ್ಡ ಉದ್ಯಮವಾಗಿದೆ ಮತ್ತು ನಟರ ಸಂಘ AMMA (ಮಲಯಾಳಂ ಚಲನಚಿತ್ರ ಕಲಾವಿದರ ಸಂಘ) ಅಲ್ಲಿ ಉದ್ಭವಿಸಿದ ಸಮಸ್ಯೆಗಳನ್ನು ಪರಿಹರಿಸಲು ಹಿಂದೆ ಬಿದ್ದದ್ದು ನಿಜ” ಎಂದು ಒಪ್ಪಿಕೊಂಡಿದ್ದಾರೆ.

ಅಸೋಸಿಯೇಷನ್‌ನ ಕೆಲವು ಸದಸ್ಯರ ವಿರುದ್ಧ ಲೈಂಗಿಕ ದುರ್ವರ್ತನೆ ಮತ್ತು ಹಲ್ಲೆಗಳ ಆರೋಪಗಳನ್ನು ಉಲ್ಲೇಖಿಸುವಾಗ “ತಪ್ಪು ಮಾಡಿದವರಿಗೆ ಅವರ ವಿರುದ್ಧ ಪುರಾವೆಗಳಿದ್ದರೆ ಅವರನ್ನು ಶಿಕ್ಷಿಸಬೇಕು” ಎಂದು ಹೇಳಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page