Monday, August 19, 2024

ಸತ್ಯ | ನ್ಯಾಯ |ಧರ್ಮ

ಮೋಹನ್ ಲಾಲ್ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ದಾಖಲು‌

ಆರೋಗ್ಯದಲ್ಲಿ ದಿಢೀರ್ ಏರುಪೇರು ಆದ ಹಿನ್ನೆಲೆಯಲ್ಲಿ ಮಲಯಾಳಂ ಹಿರಿಯ ನಟ ಮೋಹನ್ ಲಾಲ್ ಕೊಚ್ಚಿಯ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕಳೆದೆರಡು ದಿನಗಳಿಂದ ಸಣ್ಣ ಮಟ್ಟದ ಜ್ವರ ಇದ್ದು ಮನೆಯಲ್ಲೇ ಚಿಕಿತ್ಸೆ ಪಡೆಯುತ್ತಿದ್ದ ಪರಿಣಾಮ ಮತ್ತೆ ಆರೋಗ್ಯದಲ್ಲಿ ದಿಢೀರ್ ಏರುಪೇರು ಕಂಡುಬಂದ ನಂತರ ಈ ಬೆಳವಣಿಗೆ ನಡೆದಿದೆ.

ತೀವ್ರ ಜ್ವರ, ಉಸಿರಾಟದ ತೊಂದರೆ ಮತ್ತು ಸ್ನಾಯು ನೋವು ಸೇರಿದಂತೆ ರೋಗಲಕ್ಷಣಗಳು ಕಂಡುಬಂದಿದೆ. ಅಧಿಕೃತ ವೈದ್ಯಕೀಯ ಹೇಳಿಕೆಯ ಪ್ರಕಾರ, ನಟನಿಗೆ ವೈರಲ್ ಉಸಿರಾಟದ ಸೋಂಕು ಇದೆ ಎಂದು ಶಂಕಿಸಲಾಗಿದೆ.

‘ಎಲ್ 2: ಎಂಪುರಾನ್’ ಚಿತ್ರೀಕರಣ ಮತ್ತು ತಮ್ಮ ಚೊಚ್ಚಲ ನಿರ್ದೇಶನದ ‘ಬರೋಜ್’ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಮುಗಿಸಿದ ನಂತರ, ಮೋಹನ್ ಲಾಲ್ ಗುಜರಾತ್ ನಿಂದ ಕೊಚ್ಚಿಗೆ ಮರಳಿದರು. ಅಲ್ಲಿಯೇ ಅವರ ಸ್ಥಿತಿ ಹದಗೆಟ್ಟಿತ್ತು. ಅದೃಷ್ಟವಶಾತ್, ಇತ್ತೀಚಿನ ವೈದ್ಯಕೀಯ ವರದಿಗಳು ಅವರು ಈಗ ವೀಕ್ಷಣೆಯಲ್ಲಿ ಸಮಾಧಾನಕರವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ವೈರಲ್ ಉಸಿರಾಟದ ಸೋಂಕಿನಿಂದ ಆರೋಗ್ಯ ಹದಗೆಟ್ಟ ಕಾರಣ ಐದು ದಿನಗಳವರೆಗೆ ಸಾರ್ವಜನಿಕ ಸಂಪರ್ಕದಿಂದ ದೂರವಿರಲು ಮತ್ತು ಸೂಚಿಸಿದ ಔಷಧಿ ನಿಯಮವನ್ನು ಅನುಸರಿಸಲು ವೈದ್ಯರು ಸೂಚಿಸಿದ್ದಾರೆ ಎಂದು ಆಸ್ಪತ್ರೆಯ ಅಧಿಕೃತ ಮೂಲಗಳು ತಿಳಿಸಿವೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page