Wednesday, July 30, 2025

ಸತ್ಯ | ನ್ಯಾಯ |ಧರ್ಮ

ಮಂಗಳೂರು: ತೆನೆ ಹೊತ್ತ ಬಾವಾ! ಡಿಕೆಶಿ ವಿರುದ್ಧ ಟಿಕೆಟ್‌ ಮಾರಿದ ಆರೋಪ!!

ಮಂಗಳೂರು: ಮಂಗಳೂರು ಉತ್ತರದಲ್ಲಿ ಕಾಂಗ್ರೆಸ್‌ ಟಿಕೆಟ್‌ ಸರ್ಕಸ್‌ ಮುಗಿಸಿ ಸುಧಾರಿಸಿಕೊಳ್ಳುವ ಮೊದಲೇ ಅಲ್ಲಿನ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಯಾಗಿದ್ದ ಮೊಯಿದ್ದೀನ್‌ ಬಾವಾ ಬಂಡಾಯ ಸಾರಿ ಜೆಡಿಎಸ್‌ ಟಿಕೆಟ್‌ ಮೂಲಕ ಸ್ಪರ್ಧಿಸುವುದಾಗಿ ಸಾರಿದ್ದಾರೆ.

ಅಲ್ಲದೆ ಇನಾಯತ್‌ ಅಲಿಯವರೊಂದಿಗೆ ಡಿ ಕೆ ಶಿವಕುಮಾರ್‌ ಅವರಿಗೆ ವ್ಯಾವಹಾರಿಕ ಸಂಬಂಧವಿದ್ದು ಅದೇ ಕಾರಣಕ್ಕಾಗಿ ಕಾಂಗ್ರೆಸ್‌ ಟಿಕೆಟ್ಟನ್ನು ಅವರು ಮಾರಿಕೊಂಡಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಮೀಕ್ಷೆಯಲ್ಲಿ 77% ಜನರ ಬೆಂಬಲ ವ್ಯಕ್ತವಾಗಿದ್ದರೂ ನನಗೆ ಟಿಕೆಟ್‌ ನೀಡದೆ ಇನಾಯತ್‌ ಅಲಿಯವರಿಗೆ ಟಿಕೆಟ್‌ ನೀಡಿರುವುದು ನನಗೆ ಬೇಸರ ತಂದಿದೆ. ನನಗೆ ದೇವೇಗೌಡರ ಬೆಂಬಲವಿದ್ದು ಜೆಡಿಎಸ್‌ ಟಿಕೆಟ್ಟಿನಿಂದಲೇ ನಿಲ್ಲುತ್ತೇನೆ ಎಂದು ಅವರು ತಿಳಿಸಿದರು.

ಇದರೊಂದಿಗೆ ಈ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಖಚಿತವಾಗಿದ್ದು ಮತ ಮುಸ್ಲಿಂ ಬಾಹುಳ್ಯದ ಈ ಕ್ಷೇತ್ರದಲ್ಲಿ ಮತ ವಿಭಜನೆಯಾಗುವ ಸಾಧ್ಯತೆ ನಿಚ್ಚಳವಾಗಿದೆ. ಈಗಾಗಲೇ ಸಾಕಷ್ಟು ಯುವಕರು ಮುಸ್ಲಿಂ ಮೂಲಭೂತವಾದಿ ಪಕ್ಷಗಳ ಹಿಂದೆ ತಿರುಗುತ್ತಿದ್ದು ಬಾವಾ ನಿರ್ಗಮನದೊಂದಿಗೆ ಕಾಂಗ್ರೆಸ್ಸಿಗೆ ಇನ್ನಷ್ಟು ಸಂಕಷ್ಟ ಎದುರಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page