Sunday, June 16, 2024

ಸತ್ಯ | ನ್ಯಾಯ |ಧರ್ಮ

ಮೋಂಬತ್ತಿಯ ಬೆಳಕಿನಲ್ಲಿ ಆತ್ಮಸಾಕ್ಷಿಯನ್ನು ಶೋಧಿಸಿಕೊಳ್ಳುವ ಮೌನ ಮೆರವಣಿಗೆ

ಮಹಿಳೆಯರ ಮೇಲಿನ ಅತ್ಯಾಚಾರ ಪ್ರಕರಣಗಳು ದೇಶಾದ್ಯಂತ ಹೆಚ್ಚುತ್ತಿವೆ. ದಲಿತ ಮಹಿಳೆಯರ ಮೇಲಿನ ಪ್ರತಿವರ್ಷ ವರದಿಯಾಗುವ ಅತ್ಯಾಚಾರ ಪ್ರಕರಣಗಳು ಹಿಂದಿಗಿಂತ ಈಗ ಹೆಚ್ಚಿವೆ ಎಂದು ಅಂಕಿಸಂಖ್ಯೆಗಳು ತಿಳಿಸುತ್ತವೆ.

ಅಸ್ಪ್ರಶ್ಯತೆ, ಜಾತಿ ನಿಂದನೆಯ ಪ್ರಕರಣಗಳೂ ಹೆಚ್ಚುತ್ತಿವೆ. ನಿತ್ಯವೂ ಇಂತಹ ನೂರಾರು ಘಟನೆಗಳು ನಡೆಯುತ್ತವೆ. ಜಾತಿ- ಮತಗಳ ನಡುವೆ ಅಪನಂಬಿಕೆ ಉಂಟಾಗುವಂತಹ ದ್ವೇಷದ ವಾತಾವರಣವು ಉಂಟಾಗಿದೆ. ಸಹಬಾಳ್ವೆಯ ಭಾರತವನ್ನು ಕಟ್ಟುವ ನಿಟ್ಟಿನಲ್ಲಿ ದಲಿತ ಸಂಘರ್ಷ ಸಮಿತಿ, ಕುಂದಾಪುರ ತಾಲೂಕು, ಸಮುದಾಯ ಕುಂದಾಪುರ, ಕ್ಯಾಥೋಲಿಕ್ ಸಭಾ, ಆದಿವಾಸಿ ಸಂಘಟನೆ, ಡಿ.ವೈ.ಎಫ್.ಐ ಸದಸ್ಯರು ನೂರಾರು ಸಂಖ್ಯೆಯಲ್ಲಿ ಮೆರವಣಿಗೆ ನಡೆಸಿದರು.

ಆರಂಭದಲ್ಲಿ ಪುರಸಭಾ ಸದಸ್ಯ ಪ್ರಭಾಕರ ವಿ ಮೋಂಬತ್ತಿ ಬೆಳಗಿದರು.ಸಮುದಾಯದ ಸಂಗಾತಿಗಳು ಸೌಹಾರ್ದದ ಹಾಡುಗಳನ್ನು ಹಾಡಿದರು. ಶಾಸ್ತ್ರಿ ಸರ್ಕಲ್ ನಿಂದ ಪಾರಿಜಾತ ಸರ್ಕಲ್ ಮೆರವಣಿಗೆಯನ್ನು ಮಾಡಿದರು.ಡಿ.ಎಸ್.ಎಸ್. ನ ರಾಜು ಬೆಟ್ಟಿನ್ಮನೆ, ನ್ಯಾಯವಾದಿ ಮಂಜುನಾಥ ಗಿಳಿಯಾರ್, ಕ್ಯಾಥೋಲಿಕ್ ಸಭಾದ ಶಾಂತಿ ಕ್ವಾರ್ಡ್ರಸ್ ಮುಂತಾದವರು ಮಾತನಾಡಿದರು.

Related Articles

ಇತ್ತೀಚಿನ ಸುದ್ದಿಗಳು