ಅರಸೀಕೆರೆ : ನಗರದ ಕಾರೆಹಳ್ಳಿ ನಿವಾಸಿಯಾದ ಮೋನಿಕಾ ಅವರು ರಸ್ತೆ ಅಪಘಾತದಲ್ಲಿ ಮೆದುಳು ಸಾವು ಸಂಭವಿಸಿ ನಿಧನರಾಗಿದ್ದರು. ಸಾವಿನಲ್ಲೂ ಸಾರ್ಥಕತೆ ಮೆರೆದ ಅವರು, ಅಂಗಾಂಗ ದಾನದ ಮೂಲಕ ಐದುಕ್ಕೂ ಹೆಚ್ಚು ಜನರಿಗೆ ಮರುಜೀವ ನೀಡಿದರು.
ಇಂದು ಅರಸೀಕೆರೆ ಪ್ರವಾಸಿ ಮಂದಿರದಿಂದ ಬಿಹೆಚ್ ರಸ್ತೆಯ ಮೂಲಕ ಮೆರವಣಿಗೆಯಲ್ಲಿ ಮೋನಿಕಾ ಅವರ ಪಾರ್ಥಿವ ಶರೀರವನ್ನು ಸ್ವಗ್ರಾಮ ಕಾರೆಹಳ್ಳಿಗೆ ಸಾವಿರಾರು ಜನರ ಸಮ್ಮುಖದಲ್ಲಿ ಕೊಂಡೊಯ್ಯಲಾಯಿತು. ಈ ವೇಳೆ ಅರಸೀಕೆರೆ ದಂಡಾಧಿಕಾರಿ ಸಂತೋಷ್ ಕುಮಾರ್ ಹಾಗೂ ಇತರ ಅಧಿಕಾರಿಗಳು, ಸಮಾಜದ ಮುಖಂಡರು ಮತ್ತು ಗ್ರಾಮಸ್ಥರು ಉಪಸ್ಥಿತರಿದ್ದರು. ಮೋನಿಕಾ ಅವರ ಆತ್ಮಕ್ಕೆ ಶಾಂತಿ ದೊರಕಲಿ ಎಂದು ಸಾವಿರಾರು ನಾಗರಿಕರು ಭಾವಪೂರ್ಣವಾಗಿ ಪ್ರಾರ್ಥಿಸಿದರು.
