Tuesday, September 3, 2024

ಸತ್ಯ | ನ್ಯಾಯ |ಧರ್ಮ

ಪ್ರಾಣ ಲೆಕ್ಕಿಸದೆ ಮಗನಿಗಾಗಿ ತೋಳದೊಡನೆ ಹೋರಾಡಿದ ತಾಯಿ

ಉತ್ತರ ಪ್ರದೇಶದಲ್ಲಿ ತಾಯಿಯೊಬ್ಬರು ತನ್ನ ಪ್ರಾಣವನ್ನೇ ಪಣಕ್ಕಿಟ್ಟು ತೋಳದೊಂದಿಗೆ ಹೋರಾಡಿ ಮಗನನ್ನು ರಕ್ಷಿಸಿದ್ದಾರೆ. ಭಾನುವಾರ ಭರೂಚ್‌ನ ಹಾರ್ಡಿ ಪ್ರದೇಶದಲ್ಲಿ ಐದು ವರ್ಷದ ಬಾಲಕ ಪರಾಸ್ ತನ್ನ ಕುಟುಂಬ ಸದಸ್ಯರೊಂದಿಗೆ ಮಲಗಿದ್ದಾಗ ತೋಳವೊಂದು ಆತನ ಮೇಲೆ ದಾಳಿ ಮಾಡಿ ಅಪಹರಿಸಿದೆ.

ಇದನ್ನು ಗಮನಿಸಿದ ಆತನ ತಾಯಿಗೆ ಬೇರೆ ಯೋಚನೆ ಮಾಡದೆ ತಕ್ಷಣ ಹಾಸಿಗೆಯಿಂದ ಹಾರಿ ಅತ್ಯಂತ ಚಾಕಚಕ್ಯತೆಯಿಂದ ತೋಳದ ಕುತ್ತಿಗೆಯನ್ನು ಬಿಗಿಯಾಗಿ ಒತ್ತಿಹಿಡಿದರು.

ಉಸಿರುಗಟ್ಟಿದ ತೋಳವು ಮಗುವನ್ನು ಬಿಟ್ಟಿತು. ಬಳಿಕ ಜೋರಾಗಿ ಕಿರುಚಿಕೊಂಡ ಆಕೆ ಕುಟುಂಬಸ್ಥರ ಸಹಾಯ ಕೇಳಿದ್ದಾರೆ. ಅವರೆಲ್ಲರೂ ಬಂದಾಗ ತೋಳ ಓಡಿಹೋಯಿತು.

ಭರೂಚ್ ಸೇರಿದಂತೆ ಇತರ ಕೆಲವು ಜಿಲ್ಲೆಗಳಲ್ಲಿ ತೋಳಗಳು ಸುಮಾರು 50 ದಿನಗಳಿಂದ ಜನರನ್ನು ಭಯಭೀತಗೊಳಿಸುತ್ತಿವೆ. ಸೋಮವಾರ ಮತ್ತೊಬ್ಬ ಬಾಲಕಿಯನ್ನು ತೋಳಗಳು ಕೊಂದು ಹಾಕಿದ್ದವು.

ತೋಳಗಳನ್ನು ಹಿಡಿಯಲು, ಅರಣ್ಯ ಅಧಿಕಾರಿಗಳು ಮಕ್ಕಳ ಮೂತ್ರ ಸಿಂಪಡಿಸಿದ ಬಣ್ಣಬಣ್ಣದ ಟೆಡ್ಡಿಬೇರ್‌ಗಳನ್ನು ನದಿ ಜಲಾನಯನ ಪ್ರದೇಶಗಳಲ್ಲಿ ಇರಿಸುತ್ತಿದ್ದಾರೆ. ವಲಯ ಅರಣ್ಯಾಧಿಕಾರಿ ಅಜಿತ್ ಪ್ರತಾಪ್ ಸಿಂಗ್ ಮಾತನಾಡಿ, ತೋಳಗಳು ರಾತ್ರಿ ವೇಳೆ ಜನರ ಮೇಲೆ ದಾಳಿ ಮಾಡಿ ಬೆಳಗ್ಗೆ ತಂಗುವ ಸ್ಥಳಗಳಿಗೆ ಮರಳುತ್ತವೆ ಎಂದು ಹೇಳಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page