ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಈಸಕ್ಕಿ ಆಸೆಯನ್ನೂ ಮೀರಿದ ಆಯ್ದಕ್ಕಿ ಲಕ್ಕಮ್ಮಗಾಜಾ ಸ್ಮಶಾನದ ಮೇಲೆ ಮತ್ತೆ ಅರಳುತ್ತಾ ನೆತನ್ಯಾಹು ಕುರ್ಚಿ?ಅರುಣಾಚಲದಲ್ಲಿ ಚೀನಾ ಸೈನಿಕರೊಂದಿಗೆ ಮುಖಾಮುಖಿ: ಕೇಂದ್ರದ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್‌ನ ಜೈರಾಮ್ ರಮೇಶ್ಕಡತಗಳ ವಿಲೇವಾರಿ ಪ್ರಕ್ರಿಯೆ ಬದಲಾವಣೆ: ಚುನಾವಣಾ ಆಯುಕ್ತರಿಂದ ಕ್ಯಾಬಿನೆಟ್‌ ಕಾರ್ಯದರ್ಶಿಗೆ ಆಕ್ಷೇಪಣಾ ಪತ್ರಮೋದಿ–ಅದಾನಿ ಕುರಿತ ಸಾಕ್ಷ್ಯಚಿತ್ರ ಹಂಚಿಕೊಂಡ ರಾಜ್‌ ಠಾಕ್ರೆ; ತೆಗೆದುಹಾಕುವಂತೆ ಸೂಚನೆಗಳ ನಡುವೆ ಮುಂದುವರೆದ ಚರ್ಚೆಮಂಡ್ಯದಲ್ಲಿ ARAI ಪರೀಕ್ಷಾ ಕೇಂದ್ರಗಳಿಗೆ ಭೂಮಿ ಹಂಚಿಕೆ ವಿಳಂಬ: ರಾಜ್ಯ ಸರ್ಕಾರಕ್ಕೆ ಎಚ್‌.ಡಿ. ಕುಮಾರಸ್ವಾಮಿ ಪತ್ರರಾಷ್ಟ್ರೀಯತೆಯ ಪಾಠ ನನಗೆ ಬೇಕಿಲ್ಲ; ನಮ್ಮ ಗುರಿ ಆಡಳಿತ, ಸಾಮಾಜಿಕ ಜಾಲತಾಣದ ಪ್ರಚಾರವಲ್ಲ: ಕೆ. ಅಣ್ಣಾಮಲೈಕೇವಲ ಮದುವೆಗಾಗಿ ಧರ್ಮಾಂತರವಾಗುವುದನ್ನು ಒಪ್ಪಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌ಇನ್ನು ನೋಂದಾಯಿತ ಸಿಮ್‌ ಇದ್ದರೆ ಮಾತ್ರ ವಾಟ್ಸ್‌ಆ್ಯಪ್‌ ಬಳಕೆ ಸಾಧ್ಯ: ಜನವರಿ 1, 2027ರಿಂದ ಹೊಸ ನಿಯಮ ಜಾರಿಈ-ಮುದ್ರ ಡಿಜಿಟಲ್‌ ಪ್ರಮಾಣಪತ್ರಗಳಲ್ಲಿ ಭದ್ರತಾ ಲೋಪ: ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಆತಂಕಹಾಸನ ಕಾಳಸಂತೆಗೆ ಪಡಿತರ ಅಕ್ಕಿ ಮಾರಾಟ ಯತ್ನ – ಕ್ವಿಂಟಲ್‌ ಗಟ್ಟಲೆ ಅಕ್ಕಿ, ರಾಗಿ ವಶಸದ್ಯದಲ್ಲೆ ಕಬ್ಬು ಬೆಳೆಗಾರರ ಸಭೆ ಕರೆದಿದ್ದೇನೆ – ಸಿಎಂ ಡಿ.ಕೆ ಶಿವಕುಮಾರ್ರಾಜ್ಯದಲ್ಲಿ ಐದು ದಿನಗಳಲ್ಲಿ ಮಳೆ ಸಾಧ್ಯತೆ – ಹವಾಮಾನ ಇಲಾಖೆ ಮುನ್ಸೂಚನೆಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಲು ವ್ಯವಸ್ಥಿತ ಸಂಚು ರೂಪಿಸಿ ಯಶಸ್ವಿಗೊಂಡಿದ್ದಾರೆ – ಸಿಎಂ ಯಡಿಯೂರಪ್ಪಚುನಾವಣಾ ಆಯುಕ್ತರಿಗೆ ರಕ್ಷಣೆ ನೀಡುವ ಕಾನೂನು ರದ್ದುಗೊಳಿಸಿ – ಮಲ್ಲಿಕಾರ್ಜುನ ಖರ್ಗೆ ಆಗ್ರಹದಸರಾ ವೇಳೆ ಪೊಲೀಸರ ಲಾಠಿ ಏಟಿಗೆ 4 ವರ್ಷದ ಬಾಲಕ ಗಂಭೀರ – ICUನಲ್ಲಿ ಅಂತಿಮ ಹೋರಾಟಸೌದಿ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ – 8 ಮಂದಿಗೆ ಗಾಯ, ಇಬ್ಬರ ಅಂತ್ಯನಂದಿಧ್ವಜ ಪೂಜೆಗೆ ಸಚಿವರಿಗೆ ಅವಕಾಶ ನಿರಾಕರಿಸಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌300 ವರ್ಷಗಳಷ್ಟು ಹಳೆಯ ಐತಿಹಾಸಿಕ ರೇಸ್‌ಕೋರ್ಸ್ ಮಸೀದಿಯ ವಿದ್ಯುತ್ ಹಾಗೂ ನೀರು ಸಂಪರ್ಕ ಕಡಿತ: ತುರ್ತು ರಕ್ಷಣೆ ಕೋರಿದ ದೆಹಲಿ ವಕ್ಫ್ ಮಂಡಳಿತಿಹಾರ್ ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಸೌರವ್ ದಾಸ್ ಹಾಗೂ ಅಶೋತ್ ರಾಂಕಾಗೆ ದೆಹಲಿ ಅಪರಾಧ ವಿಭಾಗದಿಂದ ಸಮನ್ಸ್

ʼಆದಿಪುರುಷ್ʼ ಸಿನಿಮಾ ಟೀಸರ್‌ ರಿಲೀಸ್: ಚಿತ್ರತಂಡಕ್ಕೆ ಕಾನೂನಿನ ಸಂಕಷ್ಟ

PPeepal Media

Peepal Media ಸಿನಿಮಾ

• 1 ನಿಮಿಷದ ಓದು

ʼಆದಿಪುರುಷ್ʼ ಸಿನಿಮಾ ಟೀಸರ್‌ ರಿಲೀಸ್: ಚಿತ್ರತಂಡಕ್ಕೆ ಕಾನೂನಿನ ಸಂಕಷ್ಟ

ಚೆನ್ನೈ: ಬಾಲಿವುಡ್‌ ನಟ ಪ್ರಭಾಸ್‌ ನಟನೆಯ ʼಆದಿಪುರುಷ್ʼ ಸಿನಿಮಾ ಟೀಸರ್‌ನಿಂದ ಸುದ್ದಿಯಾಗಿದ್ದು, ಚಿತ್ರದಲ್ಲಿ ರಾಮಾಯಣದ ಪಾತ್ರಗಳಿಗೆ ಅವಮಾನ ಮಾಡಿರುವ ಆರೋಪದ ಅಡಿ ನ್ಯಾಯಾಲಯವು ಅಕ್ಟೋಬರ್‌ 27ರಂದು ವಿಚಾರಣೆ ನಡೆಸುವುದಾಗಿ ಆದೇಶ ನೀಡಿದೆ.

ಬಾಲಿವುಡ್‌ ನಟ ಪ್ರಭಾಸ್‌ ನಟನೆಯ ʼಆದಿಪುರುಷ್ʼ ಸಿನಿಮಾ ಟೀಸರ್‌ ಅಕ್ಟೋಬರ್‌ 2 ರಂದು ಅಯೋಧ್ಯೆಯಲ್ಲಿ ಅದ್ದೂರಿಯಾಗಿ ಬಿಡುಗಡೆಯಾಗಿತ್ತು. ಚಿತ್ರವು ʼರಾಮಾಯಣʼ ಆಧಾರಿತವಾಗಿ ಚಿತ್ರೀಕರಣಗೊಂಡಿದ್ದರಿಂದ ಸಿನಿಮಾತಂಡದವರು ಪ್ರೇಕ್ಷಕರನ್ನು ತಮ್ಮೆಡೆಗೆ ಸೆಳೆಯುವ ಭಾರೀ ನಿರೀಕ್ಷೆಯಲ್ಲಿದ್ದರು. ಆದರೆ ಟೀಸರ್‌ ಬಿಡುಗಡೆಯಾದ ನಂತರ ನಾನಾ ಕಾರಣಗಳಿಂದ ಆದಿಪುರುಷ್ ಸುದ್ದಿಯಾಗುತ್ತಿದೆ. ಟೀಸರ್‌ ನೋಡಿದ ಅಭಿಮಾನಿಗಳು ಬೇಸರವಾಗಿದ್ದಾರೆ. ಚಿತ್ರದಲ್ಲಿ ಬಳಕೆಯಾಗಿರುವ ಗ್ರಾಫಿಕ್ಸ್‌, ಪಾತ್ರಗಳ ಆಯ್ಕೆ , ಪಾತ್ರಗಳ ಬೆಳವಣಿಗೆ ಸರಿಯಿಲ್ಲ ಎಂದು ಪ್ರೇಕ್ಷಕರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. ಇದಲ್ಲದೇ ಸಿನಿಮಾ ಬಿಡುಗಡೆ ಬಗ್ಗೆ ಅತೀ ನಿರೀಕ್ಷೆಯಿದ್ದ ಚಿತ್ರತಂಡಕ್ಕೆ ಕಾನೂನಿನ ಸಂಕಷ್ಟವೂ ಎದುರಾಗಿದೆ.

ರಾಮಾಯಣ ಆಧಾರಿತ ʼಆದಿಪುರುಷ್‌ʼ ಚಿತ್ರದಲ್ಲಿ ರಾಮ, ಸೀತೆ , ಆಂಜನೇಯ , ರಾವಣ ಸೇರಿದಂತೆ ಕೆಲವು ಪಾತ್ರಗಳನ್ನು ಕೆಟ್ಟದಾಗಿ ಬಿಂಬಿಸಿದ್ದಾರೆ ಎಂಬ ಆರೋಪಕ್ಕೆ ಚಿತ್ರತಂಡ ಸಿಲುಕಿದೆ. ಧಾರ್ಮಿಕ ಸಂಕೇತವಾಗಿರುವ ಚಿತ್ರಗಳನ್ನು ಜನರ ಮುಂದೆ ಪ್ರದರ್ಶಿಸುವಾಗ ಬಹಳ ಎಚ್ಚರಿಕೆಯಿಂದ ಇರಬೇಕಾಗುತ್ತದೆ.ಇದೀಗ ಆದಿಪುರುಷ್‌ ಚಿತ್ರಕ್ಕೆ ಅದೇ ಕಾರಣದಿಂದ ಸಂಕಷ್ಟ ಎದುರಾಗಿದೆ. ಈ ಆರೋಪವು ಕೇವಲ ಆರೋಪವಾಗಿರದೆ ಈ ವಿರುದ್ದ ಉತ್ತರ ಪ್ರದೇಶದ ವ್ಯಕ್ತಿಯೊಬ್ಬರು ದೂರು ನೀಡಿದ್ದಾರೆ.

ಆದಿಪುರುಷ್‌ ಸಿನಿಮಾದಲ್ಲಿ ರಾಮ, ಸೀತೆ , ಆಂಜನೇಯ ಸೇರಿದಂತೆ ಕೆಲ ಪಾತ್ರಗಳನ್ನು ನೈಜವಾಗಿ ತೋರಿಸಿಲ್ಲದ ಕಾರಣ ರಾಮಾಯಣದ ಆ ಪಾತ್ರಗಳಿಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಹಿನ್ನಲೆಯಲ್ಲಿ ನಟ ಪ್ರಭಾಸ್‌, ಸೈಫ್‌ ಅಲಿಖಾನ್‌ ಹಾಗೂ ನಿರ್ದೇಶಕ ಓಂ ರಾವತ್‌ ಸೇರಿದಂತೆ ತಂಡದ ಐದು ಜನರ ವಿರುದ್ದ ಪ್ರಕರಣ ದಾಖಲಿಸಲಾಗಿದೆ.

ಪಾತ್ರಗಳನ್ನು ಈ ರೀತಿ ಬಿಂಬಿಸಲು ಕಾರಣವೇನು ಎಂದು ನ್ಯಾಯಾಲಯದ ಮುಂದೆ ಹೇಳಿ ಎಲ್ಲವನ್ನೂ ಸ್ಪಷ್ಟನೇ ಮಾಡಿಕೊಂಡೇ ಚಿತ್ರವನ್ನು ಬಿಡುಗಡೆ ಮಾಡಬೇಕು ಎಂದು ಹೇಳಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ ನ್ಯಾಯಾಲಯವು ಅಕ್ಟೋಬರ್‌ 27ರಂದು ವಿಚಾರಣೆ ನಡೆಸುವುದಾಗಿ ದಿನಾಂಕ ಮಾಡಿದೆ.

ಇದನ್ನೂ ನೋಡಿ : ತಂತಿ ಮೇಲಣ ಹೆಜ್ಜೆ

ಇದೊಂದು ಕಥೆಯಲ್ಲದ ಕಥೆ! ಚಿವುಟಿದಷ್ಟೂ ಚಿಗುರುವ ಹೆಣ್ಣಿನ ಆತ್ಮಬಲದ ಸೂಕ್ಷ್ಮತೆಯ ಅನಾವರಣದ ಕಥನ. ದೇಹವೊಂದು ವಿಕಸನಗೊಂಡಂತೆಲ್ಲ ಆ ದೇಹದ ಜತೆ ಹೆಣೆದುಕೊಂಡ ಸವಾಲುಗಳನ್ನು ಎದುರಿಸುತ್ತಾ ಪ್ರತೀ ದಿನ ಸತ್ತು ಹುಟ್ಟುತ್ತಾ ನಾಳೆಗಳ ಭರವಸೆಯಲ್ಲಿಯೇ ಹಣ್ಣಾದ ಒಂಟಿ ಹೆಣ್ಣೊಬ್ಬಳ ಬದುಕಿನ ದಿಟ್ಟ ಪಯಣದ ಕಥನ. ಈ ಕಥನವನ್ನು “ತಂತಿ ಮೇಲಣ ಹೆಜ್ಜೆ” ಅಂಕಣದಲ್ಲಿ ಪಡಿ ಮೂಡಿಸಲಿದ್ದಾರೆ ರಂಗಭೂಮಿ ಹಾಗೂ ನೃತ್ಯ ಕಲಾವಿದೆ ವಿದುಷಿ ವಾಣಿ ಸತೀಶ್‌

PPeepal Media

Peepal Media

Peepal Media · ಸಿನಿಮಾ ವಿಭಾಗ

ಸಂಬಂಧಿತ ಸುದ್ದಿಗಳು