ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಈಸಕ್ಕಿ ಆಸೆಯನ್ನೂ ಮೀರಿದ ಆಯ್ದಕ್ಕಿ ಲಕ್ಕಮ್ಮಗಾಜಾ ಸ್ಮಶಾನದ ಮೇಲೆ ಮತ್ತೆ ಅರಳುತ್ತಾ ನೆತನ್ಯಾಹು ಕುರ್ಚಿ?ಅರುಣಾಚಲದಲ್ಲಿ ಚೀನಾ ಸೈನಿಕರೊಂದಿಗೆ ಮುಖಾಮುಖಿ: ಕೇಂದ್ರದ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್‌ನ ಜೈರಾಮ್ ರಮೇಶ್ಕಡತಗಳ ವಿಲೇವಾರಿ ಪ್ರಕ್ರಿಯೆ ಬದಲಾವಣೆ: ಚುನಾವಣಾ ಆಯುಕ್ತರಿಂದ ಕ್ಯಾಬಿನೆಟ್‌ ಕಾರ್ಯದರ್ಶಿಗೆ ಆಕ್ಷೇಪಣಾ ಪತ್ರಮೋದಿ–ಅದಾನಿ ಕುರಿತ ಸಾಕ್ಷ್ಯಚಿತ್ರ ಹಂಚಿಕೊಂಡ ರಾಜ್‌ ಠಾಕ್ರೆ; ತೆಗೆದುಹಾಕುವಂತೆ ಸೂಚನೆಗಳ ನಡುವೆ ಮುಂದುವರೆದ ಚರ್ಚೆಮಂಡ್ಯದಲ್ಲಿ ARAI ಪರೀಕ್ಷಾ ಕೇಂದ್ರಗಳಿಗೆ ಭೂಮಿ ಹಂಚಿಕೆ ವಿಳಂಬ: ರಾಜ್ಯ ಸರ್ಕಾರಕ್ಕೆ ಎಚ್‌.ಡಿ. ಕುಮಾರಸ್ವಾಮಿ ಪತ್ರರಾಷ್ಟ್ರೀಯತೆಯ ಪಾಠ ನನಗೆ ಬೇಕಿಲ್ಲ; ನಮ್ಮ ಗುರಿ ಆಡಳಿತ, ಸಾಮಾಜಿಕ ಜಾಲತಾಣದ ಪ್ರಚಾರವಲ್ಲ: ಕೆ. ಅಣ್ಣಾಮಲೈಕೇವಲ ಮದುವೆಗಾಗಿ ಧರ್ಮಾಂತರವಾಗುವುದನ್ನು ಒಪ್ಪಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌ಇನ್ನು ನೋಂದಾಯಿತ ಸಿಮ್‌ ಇದ್ದರೆ ಮಾತ್ರ ವಾಟ್ಸ್‌ಆ್ಯಪ್‌ ಬಳಕೆ ಸಾಧ್ಯ: ಜನವರಿ 1, 2027ರಿಂದ ಹೊಸ ನಿಯಮ ಜಾರಿಈ-ಮುದ್ರ ಡಿಜಿಟಲ್‌ ಪ್ರಮಾಣಪತ್ರಗಳಲ್ಲಿ ಭದ್ರತಾ ಲೋಪ: ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಆತಂಕಹಾಸನ ಕಾಳಸಂತೆಗೆ ಪಡಿತರ ಅಕ್ಕಿ ಮಾರಾಟ ಯತ್ನ – ಕ್ವಿಂಟಲ್‌ ಗಟ್ಟಲೆ ಅಕ್ಕಿ, ರಾಗಿ ವಶಸದ್ಯದಲ್ಲೆ ಕಬ್ಬು ಬೆಳೆಗಾರರ ಸಭೆ ಕರೆದಿದ್ದೇನೆ – ಸಿಎಂ ಡಿ.ಕೆ ಶಿವಕುಮಾರ್ರಾಜ್ಯದಲ್ಲಿ ಐದು ದಿನಗಳಲ್ಲಿ ಮಳೆ ಸಾಧ್ಯತೆ – ಹವಾಮಾನ ಇಲಾಖೆ ಮುನ್ಸೂಚನೆಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಲು ವ್ಯವಸ್ಥಿತ ಸಂಚು ರೂಪಿಸಿ ಯಶಸ್ವಿಗೊಂಡಿದ್ದಾರೆ – ಸಿಎಂ ಯಡಿಯೂರಪ್ಪಚುನಾವಣಾ ಆಯುಕ್ತರಿಗೆ ರಕ್ಷಣೆ ನೀಡುವ ಕಾನೂನು ರದ್ದುಗೊಳಿಸಿ – ಮಲ್ಲಿಕಾರ್ಜುನ ಖರ್ಗೆ ಆಗ್ರಹದಸರಾ ವೇಳೆ ಪೊಲೀಸರ ಲಾಠಿ ಏಟಿಗೆ 4 ವರ್ಷದ ಬಾಲಕ ಗಂಭೀರ – ICUನಲ್ಲಿ ಅಂತಿಮ ಹೋರಾಟಸೌದಿ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ – 8 ಮಂದಿಗೆ ಗಾಯ, ಇಬ್ಬರ ಅಂತ್ಯನಂದಿಧ್ವಜ ಪೂಜೆಗೆ ಸಚಿವರಿಗೆ ಅವಕಾಶ ನಿರಾಕರಿಸಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌300 ವರ್ಷಗಳಷ್ಟು ಹಳೆಯ ಐತಿಹಾಸಿಕ ರೇಸ್‌ಕೋರ್ಸ್ ಮಸೀದಿಯ ವಿದ್ಯುತ್ ಹಾಗೂ ನೀರು ಸಂಪರ್ಕ ಕಡಿತ: ತುರ್ತು ರಕ್ಷಣೆ ಕೋರಿದ ದೆಹಲಿ ವಕ್ಫ್ ಮಂಡಳಿತಿಹಾರ್ ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಸೌರವ್ ದಾಸ್ ಹಾಗೂ ಅಶೋತ್ ರಾಂಕಾಗೆ ದೆಹಲಿ ಅಪರಾಧ ವಿಭಾಗದಿಂದ ಸಮನ್ಸ್

ಎದೆಗೆ ನಾಟುವ “TALE OF TWO KIDS”

PPeepal Media

Peepal Media ಸಿನಿಮಾ

• 1 ನಿಮಿಷದ ಓದು

ಎದೆಗೆ ನಾಟುವ “TALE OF TWO KIDS”

ಕೆಲವು ಕಿರುಚಿತ್ರಗಳು ಮನಸ್ಸಿಗೆ ನಾಟುವುದರ ಜೊತೆಗೆ ನಿರ್ದೇಶಕನಲ್ಲಿನ ಕಲೆಯ ಬಗ್ಗೆ ಒಂದು ಕ್ಷಣ ಯೋಚಿಸುವಂತೆ ಮಾಡಿಬಿಡುತ್ತವೆ. ಅಂತಹದ್ದೇ ಒಂದು ಕಿರುಚಿತ್ರ “TALE OF TWO KIDS”. ಸಂಭಾಷಣೆಯೇ ಇಲ್ಲದೆ ಕಥೆಯ ವಸ್ತುವನ್ನು ಹೇಗೆ ಜನರಿಗೆ ತಲುಪಿಸಬಹುದು ಎಂಬುದನ್ನು ನಿರ್ದೇಶಕ ಶಶಾಂಕ್‌ ಬಿ.ಪಿ ಬಹಳ ಸ್ಪಷ್ಟವಾಗಿ ಮನಮುಟ್ಟುವಂತೆ ಈ ಕಿರುಚಿತ್ರದಲ್ಲಿ ಮಾಡಿ ತೋರಿಸಿದ್ದಾರೆ.

ಈ ಕಿರುಚಿತ್ರ ನೋಡಿದ ನಂತರ “ಹುಡುಗನೊಬ್ಬ ನಮ್ಮೆದೆಗಳನ್ನು ಒಂದು ಕ್ಷಣ ಅಲುಗಾಡಿಸಬಿಟ್ಟ” ಎಂದೆನಿಸುತ್ತದೆ. ಇನ್ನು ಈ ಕಿರು ಚಿತ್ರದ ಬಗ್ಗೆ ಹೇಳುವುದಾರೆ, ಶೀರ್ಷಿಕೆಯೇ ಹೇಳುವಂತೆ ಇಬ್ಬರು ಪುಟ್ಟ ಮಕ್ಕಳ ಕಥೆ. ಆರಂಭದಲ್ಲೇ ಹಳ್ಳಿಯ ವಾತಾವರಣ ಹೇಗಿದೆ ಎಂಬುದನ್ನ ಅಷ್ಟೇ ತೋರಿಸದೆ ಅಲ್ಲಿನ ಪರಿಸರ ಹಾಗು ಗುಡಿಸಲು ಮನೆಗಳನ್ನು ತೋರಿಸವುದರೋಂದಿಗೆ ಅಲ್ಲಿನ ಪರಿಸ್ಥಿತಿಯನ್ನು ಅರ್ಥಮಾಡಿಸುವ ಪ್ರಯತ್ನ ಯಶಸ್ವಿಯ ಆಗಿದೆ ಎಂದೇ ಹೇಳಬೇಕು.

ಪುಟ್ಟ ಮಕ್ಕಳಲ್ಲಿನ ಆಸೆ, ಆ ಆಸೆಯನ್ನು ತೀರಿಸುವಲ್ಲಿ ತಾಯಿಯ ಪಾತ್ರ, ಒಂದು ಸೀರೆಯ ಕನಸು ಹೊತ್ತಿರುವ ತಾಯಿಯ ತ್ಯಾಗ, ಸಣ್ಣ ಸಣ್ಣ ಆಸೆಯು ತೀರಿದಾಗ ಮಕ್ಕಳಲ್ಲಿ ಮೂರುವ ನಗು, ತಮ್ಮ ಆಸೆಗಳನ್ನು ತೀರಿಸುತ್ತಿರುವುದು ದೇವರೆಂದು ನಂಬುವ ಮಕ್ಕಳಲ್ಲಿನ ಮುಗ್ದತೆ ಇದೆಲ್ಲವೂ ಒಂದು ಕ್ಷಣ ನಿಮ್ಮನ್ನು ಹಿಡಿದಿಡುತ್ತವೆ.

ಸತ್ಯದ ಅರಿವಾದಾಗ ಪುಟ್ಟ ಮಗುವಿನಲ್ಲಿ ಆದ ಬದಲಾವಣೆ ಅವನ ಮುಖದಲ್ಲಿ ಮೂಡುವ ನಗು ನಿಮ್ಮನ್ನು ಮೂಕನನ್ನಾಗಿಸುತ್ತದೆ. ಮುದ ನೀಡಬಲ್ಲ ಹಿನ್ನೆಲೆ ಸಂಗೀತ, ಛಾಯಾಗ್ರಹಣ, ಪಾತ್ರಗಳ ನಟನೆ ಎಲ್ಲದಕ್ಕೂ ಸಲಾಂ.

ಭರವಸೆ ಮೂಡಿಸಬಲ್ಲ ಮತ್ತೊಬ್ಬ ನಿರ್ದೇಶಕ ಕನ್ನಡದ ನೆಲಕ್ಕೆ ಸಿಕ್ಕಿರುವುದು ಖುಷಿಯ ಸಂಗತಿ. ಮನಮುಟ್ಟುವಂತಹ ಚಿತ್ರಗಳು ಮತ್ತಷ್ಟು ಮೂಡಿಬರಲಿ ಎಂಬುದು ನಮ್ಮ ಹಾರೈಕೆ.

PPeepal Media

Peepal Media

Peepal Media · ಸಿನಿಮಾ ವಿಭಾಗ

ಸಂಬಂಧಿತ ಸುದ್ದಿಗಳು