ಮುಖ್ಯ ವಿಷಯಕ್ಕೆ ತೆರಳಿ
Peepal Media
ತಾಜಾ ಸುದ್ದಿ
ಈಸಕ್ಕಿ ಆಸೆಯನ್ನೂ ಮೀರಿದ ಆಯ್ದಕ್ಕಿ ಲಕ್ಕಮ್ಮಗಾಜಾ ಸ್ಮಶಾನದ ಮೇಲೆ ಮತ್ತೆ ಅರಳುತ್ತಾ ನೆತನ್ಯಾಹು ಕುರ್ಚಿ?ಅರುಣಾಚಲದಲ್ಲಿ ಚೀನಾ ಸೈನಿಕರೊಂದಿಗೆ ಮುಖಾಮುಖಿ: ಕೇಂದ್ರದ ಮೌನವನ್ನು ಪ್ರಶ್ನಿಸಿದ ಕಾಂಗ್ರೆಸ್‌ನ ಜೈರಾಮ್ ರಮೇಶ್ಕಡತಗಳ ವಿಲೇವಾರಿ ಪ್ರಕ್ರಿಯೆ ಬದಲಾವಣೆ: ಚುನಾವಣಾ ಆಯುಕ್ತರಿಂದ ಕ್ಯಾಬಿನೆಟ್‌ ಕಾರ್ಯದರ್ಶಿಗೆ ಆಕ್ಷೇಪಣಾ ಪತ್ರಮೋದಿ–ಅದಾನಿ ಕುರಿತ ಸಾಕ್ಷ್ಯಚಿತ್ರ ಹಂಚಿಕೊಂಡ ರಾಜ್‌ ಠಾಕ್ರೆ; ತೆಗೆದುಹಾಕುವಂತೆ ಸೂಚನೆಗಳ ನಡುವೆ ಮುಂದುವರೆದ ಚರ್ಚೆಮಂಡ್ಯದಲ್ಲಿ ARAI ಪರೀಕ್ಷಾ ಕೇಂದ್ರಗಳಿಗೆ ಭೂಮಿ ಹಂಚಿಕೆ ವಿಳಂಬ: ರಾಜ್ಯ ಸರ್ಕಾರಕ್ಕೆ ಎಚ್‌.ಡಿ. ಕುಮಾರಸ್ವಾಮಿ ಪತ್ರರಾಷ್ಟ್ರೀಯತೆಯ ಪಾಠ ನನಗೆ ಬೇಕಿಲ್ಲ; ನಮ್ಮ ಗುರಿ ಆಡಳಿತ, ಸಾಮಾಜಿಕ ಜಾಲತಾಣದ ಪ್ರಚಾರವಲ್ಲ: ಕೆ. ಅಣ್ಣಾಮಲೈಕೇವಲ ಮದುವೆಗಾಗಿ ಧರ್ಮಾಂತರವಾಗುವುದನ್ನು ಒಪ್ಪಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್‌ಇನ್ನು ನೋಂದಾಯಿತ ಸಿಮ್‌ ಇದ್ದರೆ ಮಾತ್ರ ವಾಟ್ಸ್‌ಆ್ಯಪ್‌ ಬಳಕೆ ಸಾಧ್ಯ: ಜನವರಿ 1, 2027ರಿಂದ ಹೊಸ ನಿಯಮ ಜಾರಿಈ-ಮುದ್ರ ಡಿಜಿಟಲ್‌ ಪ್ರಮಾಣಪತ್ರಗಳಲ್ಲಿ ಭದ್ರತಾ ಲೋಪ: ಜಾಗತಿಕ ತಂತ್ರಜ್ಞಾನ ವಲಯದಲ್ಲಿ ಆತಂಕಹಾಸನ ಕಾಳಸಂತೆಗೆ ಪಡಿತರ ಅಕ್ಕಿ ಮಾರಾಟ ಯತ್ನ – ಕ್ವಿಂಟಲ್‌ ಗಟ್ಟಲೆ ಅಕ್ಕಿ, ರಾಗಿ ವಶಸದ್ಯದಲ್ಲೆ ಕಬ್ಬು ಬೆಳೆಗಾರರ ಸಭೆ ಕರೆದಿದ್ದೇನೆ – ಸಿಎಂ ಡಿ.ಕೆ ಶಿವಕುಮಾರ್ರಾಜ್ಯದಲ್ಲಿ ಐದು ದಿನಗಳಲ್ಲಿ ಮಳೆ ಸಾಧ್ಯತೆ – ಹವಾಮಾನ ಇಲಾಖೆ ಮುನ್ಸೂಚನೆಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಇಳಿಸಲು ವ್ಯವಸ್ಥಿತ ಸಂಚು ರೂಪಿಸಿ ಯಶಸ್ವಿಗೊಂಡಿದ್ದಾರೆ – ಸಿಎಂ ಯಡಿಯೂರಪ್ಪಚುನಾವಣಾ ಆಯುಕ್ತರಿಗೆ ರಕ್ಷಣೆ ನೀಡುವ ಕಾನೂನು ರದ್ದುಗೊಳಿಸಿ – ಮಲ್ಲಿಕಾರ್ಜುನ ಖರ್ಗೆ ಆಗ್ರಹದಸರಾ ವೇಳೆ ಪೊಲೀಸರ ಲಾಠಿ ಏಟಿಗೆ 4 ವರ್ಷದ ಬಾಲಕ ಗಂಭೀರ – ICUನಲ್ಲಿ ಅಂತಿಮ ಹೋರಾಟಸೌದಿ ವಿಮಾನ ನಿಲ್ದಾಣದ ಮೇಲೆ ಭೀಕರ ದಾಳಿ – 8 ಮಂದಿಗೆ ಗಾಯ, ಇಬ್ಬರ ಅಂತ್ಯನಂದಿಧ್ವಜ ಪೂಜೆಗೆ ಸಚಿವರಿಗೆ ಅವಕಾಶ ನಿರಾಕರಿಸಿದ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶ: ಮುಖ್ಯಮಂತ್ರಿ ಡಿ ಕೆ ಶಿವಕುಮಾರ್‌300 ವರ್ಷಗಳಷ್ಟು ಹಳೆಯ ಐತಿಹಾಸಿಕ ರೇಸ್‌ಕೋರ್ಸ್ ಮಸೀದಿಯ ವಿದ್ಯುತ್ ಹಾಗೂ ನೀರು ಸಂಪರ್ಕ ಕಡಿತ: ತುರ್ತು ರಕ್ಷಣೆ ಕೋರಿದ ದೆಹಲಿ ವಕ್ಫ್ ಮಂಡಳಿತಿಹಾರ್ ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಸೌರವ್ ದಾಸ್ ಹಾಗೂ ಅಶೋತ್ ರಾಂಕಾಗೆ ದೆಹಲಿ ಅಪರಾಧ ವಿಭಾಗದಿಂದ ಸಮನ್ಸ್

ಮುಂದಿನ ಹಾಡು ನಿಮಗಾಗಿ ಆಕಾಶವಾಣಿ ಮೈಸೂರು ಕೇಂದ್ರದಿಂದ

PPeepal Media

Peepal Media ಸಿನಿಮಾ

• 1 ನಿಮಿಷದ ಓದು

ಮುಂದಿನ ಹಾಡು ನಿಮಗಾಗಿ ಆಕಾಶವಾಣಿ ಮೈಸೂರು ಕೇಂದ್ರದಿಂದ

ಸತೀಶ್​ ಬತ್ತುಲ ನಿರ್ದೇಶನದ ‘ಆಕಾಶವಾಣಿ ಮೈಸೂರು ಕೇಂದ್ರ’ ಚಿತ್ರದಿಂದ ಇನ್ನೊಂದು ಹೊಸ ಹಾಡು ಹೊರಬಿದ್ದಿದೆ. ‘ನಮ್​ ಕನಸ ಕನ್ನಡ’ ಎಂದು ಶುರುವಾಗುವ ಈ ಹಾಡಿಗೆ ಎಲ್.ಎನ್.ಸೂರ್ಯ ಸಾಹಿತ್ಯ ರಚಿಸಿದ್ದು, ಜನಾರ್ದನ್​ ಮತ್ತು ಸಿ.ಎಚ್.ಶ್ರೀಕೃತಿ ಧ್ವನಿಯಾಗಿದ್ದಾರೆ. ಕಾರ್ತಿಕ್ ಕೊಡಕಂಡ್ಲ ಸಂಗೀತ ಸಂಯೋಜಿಸಿದ್ದಾರೆ. ಈ ಹಾಡು ಇದೀಗ ಯೂಟ್ಯೂಬ್​ನ ಮಿಥುನ ಮ್ಯೂಸಿಕ್​ ಚಾನಲ್​ನಲ್ಲಿ ಇತ್ತೀಚೆಗೆ ಬಿಡುಗಡೆಯಾಗಿ ಕೇಳುಗರಿಂದ ಮೆಚ್ಚುಗೆ ಪಡೆಯುತ್ತಿದೆ.

‘ಆಕಾಶವಾಣಿ ಮೈಸೂರು ಕೇಂದ್ರ’ ಚಿತ್ರವನ್ನು ‘ಜಬರ್ದಸ್ತ್’ ಖ್ಯಾತಿಯ ಸತೀಶ್ ಬತ್ತುಲ ನಿರ್ದೇಶಿಸಿದ್ದಾರೆ. ಶಿವಕುಮಾರ್, ಅಕ್ಷತಾ ಶ್ರೀಧರ್ ಮತ್ತು ಅರ್ಚನಾ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಚಿತ್ರವನ್ನು ಮಿಥುನಾ ಎಂಟರ್‌ಟೈನ್‌ಮೆಂಟ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಸೈನ್ಸ್ ಸ್ಟುಡಿಯೋಸ್​ನಡಿ ಎಂ.ಎಂ. ಅರ್ಜುನ್ ಮತ್ತು ಕಮಲ್ ಮೇಡಗೋಣಿ ನಿರ್ಮಿಸುತ್ತಿದ್ದಾರೆ. ಇದೊಂದು ರೊಮ್ಯಾಂಟಿಕ್​ ಥ್ರಿಲ್ಲರ್​ ಚಿತ್ರವಾಗಿದ್ದು, ಏಕಕಾಲದಲ್ಲಿ ತೆಲುಗು, ತಮಿಳು, ಕನ್ನಡ, ಹಿಂದಿ ಮತ್ತು ಮಲಯಾಳಂನಲನಲ್ಲಿ ಸದ್ಯದಲ್ಲೇ ಬಿಡುಗಡೆಯಾಗುತ್ತಿದೆ.

ಈ ಪ್ಯಾನ್​ ಇಂಡಿಯಾ ಚಿತ್ರದ ಬಗ್ಗೆ ಕುರಿತು ಮಾತನಾಡುವ ನಿರ್ಮಾಪಕರಾದ ಎಂ.ಎಂ.ಅರ್ಜುನ್ ಮತ್ತು ಕಮಲ್ ಮೇಡಗೋಣಿ, ‘ನಿರ್ದೇಶಕ ಸತೀಶ್ ಅವರ ನಿರೂಪಣೆ ನಮಗೆ ಇಷ್ಟವಾಯಿತು. ಚಿತ್ರವನ್ನು ಬಹಳ ಚೆನ್ನಾಗಿ ರೂಪಿಸಿದ್ದಾರೆ ಅವರು. ನಿರ್ಮಾಪಕನಾಗಿ ನಾನು ನನ್ನ ಜವಾಬ್ದಾರಿಯನ್ನು ಸಮರ್ಥವಾಗಿ ನಿರ್ವಹಿಸಿದ್ದೇನೆ ಎಂಬ ನಂಬಿಕೆ ಇದೆ. ಇದೊಂದು ಯೂನಿವರ್ಸಲ್ ಕಥೆಯಾದ್ದರಿಂದ ಪ್ಯಾನ್​-ಇಂಡಿಯಾ ಚಿತ್ರವನ್ನಾಗಿ ಬಿಡುಗಡೆ ಮಾಡುತ್ತಿದ್ದೇವೆ. ಇದು ಚಿತ್ರದ ಎರಡನೇ ಹಾಡಾಗಿದ್ದು, ಇದಕ್ಕೂ ಮುನ್ನ ‘ನಿನ್ನ ನೋಡಿದ’ ಎಂಬ ಹಾಡು ಬಿಡುಗಡೆಯಾಗಿದೆ. ಶೀಘ್ರದಲ್ಲೇ ನಮ್ಮ ಸಿನಿಮಾದ ಬಿಡುಗಡೆ ದಿನಾಂಕವನ್ನು ಪ್ರಕಟಿಸುತ್ತೇವೆ’ ಎನ್ನುತ್ತಾರೆ.

ಇದೊಂದು ವಿಭಿನ್ನ ಲವ್ ಎಂಟರ್‌ಟೈನರ್ ಎನ್ನುವ ನಿರ್ದೇಶಕ ಸತೀಶ್ ಬತ್ತುಲ, ‘ಇದೊಂದು ವಿಭಿನ್ನ ಕಥೆ ಇರುವ ಚಿತ್ರ. ನಿರ್ಮಾಪಕರ ಬೆಂಬಲವು ನಮ್ಮನ್ನು ಇಲ್ಲಿಯವರೆಗೆ ಕರೆದೊಯ್ದಿದೆ. ಈ ಪ್ಯಾನ್ ಇಂಡಿಯಾ ಚಿತ್ರವನ್ನು ಎಲ್ಲೂ ರಾಜಿ ಮಾಡಿಕೊಳ್ಳದೆ ನಿರ್ಮಿಸಲಾಗಿದೆ. ನಮ್ಮ ಸಿನಿಮಾದಲ್ಲಿ ಅನುಭವಿ ತಂತ್ರಜ್ಞರು ಕೆಲಸ ಮಾಡಿದ್ದು, ಸಂಗೀತ, ಹಿನ್ನೆಲೆ ಸಂಗೀತ ಮತ್ತು ಛಾಯಾಗ್ರಹಣ ಅದ್ಭುತವಾಗಿ ಮೂಡಿಬಂದಿದೆ’ ಎನ್ನುತ್ತಾರೆ.

‘ಆಕಾಶವಾಣಿ ಮೈಸೂರು ಕೇಂದ್ರ’ ಚಿತ್ರದಲ್ಲಿ ಶಿವಕುಮಾರ್, ಹುಮೇ ಚಂದ್, ಅಕ್ಷತಾ ಶ್ರೀಧರ್, ಅರ್ಚನಾ, ಮಾಧವಿ ಲತಾ ಮುಂತಾದವರು ನಟಿಸಿದ್ದು, ಆರೀಫ್​​ ಲಲಾನಿ ಅವರ ಛಾಯಾಗ್ರಹಣ ಮತ್ತು ಕಾರ್ತಿಕ್ ಕೊಡಕಂಡ್ಲ ಅವರ ಸಂಗೀತ ಈ ಚಿತ್ರಕ್ಕಿದೆ.

PPeepal Media

Peepal Media

Peepal Media · ಸಿನಿಮಾ ವಿಭಾಗ

ಸಂಬಂಧಿತ ಸುದ್ದಿಗಳು