ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮಾತ್ರವಲ್ಲ, ನಾನು ಯಾರ ಮನೆ ಬಾಗಿಲು ಕಾದಿಲ್ಲ. ಅರ್ಹನಿದ್ದೇನೆಂದು ಪಕ್ಷ ನನ್ನನ್ನು ಗುರುತಿಸಿ ಜಿಲ್ಲಾಧ್ಯಕ್ಷ ಸ್ಥಾನ ಕೊಟ್ಟಿದ್ದಕ್ಕೆ ನನಗೆ ತೃಪ್ತಿ ತಂದಿದೆ. ಸಂಸದ ಡಾ.ಕೆ.ಸುಧಾಕರ್‌ಗೆ ನನ್ನ ಕಂಡರೆ ಭಯವೋ, ಅಥವಾ ಅಸೂಯೆ ಕಾರಣಕ್ಕೆ ನನ್ನ ಆಯ್ಕೆಗೆ ತಡೆ ಮಾಡಿಸಿದ್ದಾರೆಂದು ಬಿಜೆಪಿ ಜಿಲ್ಲಾಧ್ಯಕ್ಷರಾಗಿ ನೇಮಕಗೊಂಡಿದ್ದ ಸಂದೀಪ ರೆಡ್ಡಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಸುಧಾಕರ್ ಇಡೀ ಚಿಕ್ಕಬಳ್ಳಾಪುರ ಕ್ಷೇತ್ರ ಜಿಲ್ಲೆಗ ಶಾಪ. ಕೋವಿಡ್ ಹಗರಣಕ್ಕೆ ಸಂಬಂಧಿಸಿ ನನ್ನ ಬಳಿ ನೈಜ ದಾಖಲೆಗಳಿದ್ದು, ಕೋವಿಡ್ ಅಕ್ರಮಗಳ ಬಗ್ಗೆ ವಿಚಾರಣೆ ನಡೆಸುತ್ತಿರುವ ನ್ಯಾಯಾಧೀಶರು ಸಮಯ ಕೊಟ್ಟಾಗ ದಾಖಲೆ ಸಲ್ಲಿಸುವೆ ಎಂದರು.
ಪಕ್ಷದ ನಿರ್ಧಾರಕ್ಕೆ ಬದ್ಧ:
ಹಲವು ಗೊಂದಲಗಳ ಕಾರಣಕ್ಕೆ ಜಿಲ್ಲಾಧ್ಯಕ್ಷರ ನೇಮಕವನ್ನು ತಾತ್ಕಲಿಕವಾಗಿ ತಡೆ ಹಿಡಿಯಲಾಗಿದೆ. ಪಕ್ಷ ಯಾವುದೇ ನಿರ್ಧಾರ ತೆಗೆದುಕೊಂಡರೂ ಬದ್ಧನಾಗಿರುವೆ. ಜಿಲ್ಲಾಧ್ಯಕ್ಷನಾಗಿ ಕೆಲಸ ಮಾಡಲು ಸಿದ್ಧನಿದ್ದೇನೆ ಅಥವಾ ಪಕ್ಷದ ಸಾಮಾನ್ಯ ಕಾರ್ಯಕರ್ತನಾಗಿ ಕೆಲಸ ಮಾಡಲು ಬದ್ಧ ಎಂದು ಬಿಜೆಪಿ ಯುವ ಮುಖಂಡ ಸಂದೀಪ ರೆಡ್ಡಿ ಹೇಳಿದರು.