Friday, October 18, 2024

ಸತ್ಯ | ನ್ಯಾಯ |ಧರ್ಮ

ಸಂಡೂರು ವಿಧಾನಸಭಾ ಉಪಚುನಾವಣೆ: ಸಂಸದ ತುಕಾರಾಂ ಪುತ್ರಿ ಸೌಪರ್ಣಿಕಾಗೆ ಕಾಂಗ್ರೆಸ್ ಟಿಕೆಟ್ ಫೈನಲ್

ಕೇಂದ್ರ ಚುನಾವಣಾ ಆಯೋಗ ಕರ್ನಾಟಕದ ಮೂರು ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ದಿನಾಂಕ ಘೋಷಣೆ ಮಾಡುತ್ತಿದ್ದಂತೆಯೇ ಸಂಡೂರು, ಶಿಗ್ಗಾವಿ ಮತ್ತು ಚನ್ನಪಟ್ಟಣ ಕ್ಷೇತ್ರಗಳ ರಾಜಕೀಯ ಚಟುವಟಿಕೆ ಜೋರಾಗಿದೆ. ಇತ್ತ ವಿಧಾನಸಭಾ ಕ್ಷೇತ್ರಕ್ಕೆ ಸಂಸದ ತುಕಾರಾಂ ಅವರ ಪುತ್ರಿಯ ಹೆಸರನ್ನು ಫೈನಲ್ ಮಾಡಿರುವುದಾಗಿ ಕಾಂಗ್ರೆಸ್ ಮೂಲಗಳಿಂದ ತಿಳಿದು ಬಂದಿದೆ.

ಸಂಡೂರಿನಲ್ಲಿ ಸಂಸದ ಇ ತುಕಾರಾಂ ಪತ್ನಿ ಅನ್ನಪೂರ್ಣ ಇಲ್ಲ ಅಥವಾ ಪುತ್ರಿ ಸೌಪರ್ಣಿಕಾಗೆ ಟಿಕೆಟ್‌‌ ಸಿಗಬಹುದು ಎಂಬ ಮಾತುಗಳು ಬಳ್ಳಾರಿ ರಾಜಕಾರಣದಲ್ಲಿ ಕೇಳಿ ಬಂದಿತ್ತು. ಆದರೆ ಕೊನೆಯ ಕ್ಷಣದಲ್ಲಿ ಸೌಪರ್ಣಿಕಾ ಅವರಿಗೇ ಟಿಕೆಟ್ ಅಂತಿಮಗೊಳಿಸಿರುವುದಾಗಿ ಕಾಂಗ್ರೆಸ್ ಮೂಲಗಳು ತಿಳಿಸಿವೆ.

ಕಾಂಗ್ರೆಸ್ ಮುಂದಿನ ದಿನಗಳಿಗೆ ಯುವ ನಾಯಕತ್ವದ ಬಗ್ಗೆ ರಾಹುಲ್ ಗಾಂಧಿ ಹೆಚ್ಚಿನ ಒತ್ತು ಕೊಡುತ್ತಿರುವ ಹಿನ್ನೆಲೆಯಲ್ಲಿ, ಯುವ ಸಮುದಾಯದವರಿಗೇ ಟಿಕೆಟ್ ನೀಡುವ ಬಗ್ಗೆ ಮಾತುಗಳು ಕೇಳಿ ಬಂದಿವೆ. ಅಷ್ಟೇ ಅಲ್ಲದೆ ಬಳ್ಳಾರಿ ಲೋಕಸಭಾ ಚುನಾವಣೆ ಸ್ಪರ್ಧೆ ಸಂದರ್ಭದಲ್ಲೂ ಇ ತುಕಾರಾಂ, ವಿಧಾನಸಭಾ ಉಪಚುನಾವಣೆಗೆ ತನ್ನ ಕುಟುಂಬ ಸದಸ್ಯರಿಗೇ ಟಿಕೆಟ್ ನೀಡಬೇಕೆಂದು ಮಾತು ತಗೆದುಕೊಂಡ ಹಿನ್ನೆಲೆಯಲ್ಲಿ ಈ ಬೆಳವಣಿಗೆ ನಡೆದಿದೆ ಎನ್ನಲಾಗಿದೆ.

ಬಿಜೆಪಿಯಿಂದ ಬಿ. ಶ್ರೀರಾಮುಲು ಹೆಸರನ್ನು ಜೋರಾಗಿಯೇ ಪ್ರಸ್ತಾಪ ಮಾಡಲಾಗ್ತಿದೆ. ಆದರೆ ಸತತ ಎರಡು ಸೋಲಿನ ನಂತರ ಶ್ರೀರಾಮುಲು ಮತ್ತೊಂದು ಚುನಾವಣಾ ಕಣಕ್ಕೆ ಧುಮುಕುತ್ತಾರಾ ಎಂಬ ಪ್ರಶ್ನೆಯೂ ಇದ್ದೇ ಇದೆ.

ಇದರ ನಡುವೆ ವಾಲ್ಮೀಕಿ ಹಗರಣದಲ್ಲಿ ಜೈಲುಪಾಲಾಗಿದ್ದ ಮಾಜಿ ಸಚಿವ ನಾಗೇಂದ್ರ ರಿಲೀಸ್‌‌ ಆಗಿದ್ದಾರೆ. ಜೈಲಿಂದ ಹೊರಬರುತ್ತಿದ್ದಂತೆ, ಸಿಎಂ ಸಿದ್ದರಾಮಯ್ಯರನ್ನ ಇಡಿಯವರು ಟಾರ್ಗೆಟ್‌ ಮಾಡಿದ್ದು ಅವರ ಹೆಸರು ಹೇಳುವಂತೆ ತನಿಖೆಯ ವೇಳೆ ಒತ್ತಡ ಹೇರಿದ್ರು ಅಂತ ಇಡಿ ವಿರುದ್ಧ ಆರೋಪಿಸಿದ್ದಾರೆ. ಸಂಡೂರಿನಲ್ಲಿ ನಾಗೇಂದ್ರ ನೇತೃತ್ವದಲ್ಲೇ ಚುನಾವಣೆ ಎದುರಿಸುತ್ತೇವೆ ಎಂದು ಘೋಷಿಸಿ ಜಮೀರ್‌, ಟೈಗರ್‌‌ ಈಸ್‌ ಬ್ಯಾಕ್‌ ಎಂದಿದ್ದಾರೆ. ಹೀಗಾಗಿ ಬಿಜೆಪಿ ಪಕ್ಷದ ದ್ವೇಷ ರಾಜಕಾರಣವನ್ನು ಈ ಚುನಾವಣೆಗೆ ಕಾಂಗ್ರೆಸ್ ಅಸ್ತ್ರ ಮಾಡಿಕೊಳ್ಳಲಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page