Wednesday, June 26, 2024

ಸತ್ಯ | ನ್ಯಾಯ |ಧರ್ಮ

“ಎಂಫಿಲ್ ಯುಜಿಸಿ ಕಡೆಯಿಂದ ಮಾನ್ಯತೆ ಪಡೆದ ಪದವಿ ಅಲ್ಲ” : ವಾರ್ತಾ ಇಲಾಖೆ

ಎಲ್ಲಾ ವಿಶ್ವವಿದ್ಯಾನಿಲಯಗಳಲ್ಲಿ ನೀಡಲಾಗುವ ಎಂಫಿಲ್ ಕೋರ್ಸಿಗೆ ಪದವಿಯ ಮಾನ್ಯತೆ ಇರುವುದಿಲ್ಲ ಎಂದು ಯುಜಿಸಿ ಸ್ಪಷ್ಟಪಡಿಸಿದೆ. ಈ ಬಗ್ಗೆ ವಾರ್ತಾ ಮತ್ತು ಸಂಪರ್ಕ ಇಲಾಖೆ ಕೂಡಾ ಮಾಹಿತಿ ನೀಡಿದ್ದು, “2022 ರಲ್ಲೇ ಎಂಫಿಲ್ ಕೋರ್ಸಿಗೆ ಪದವಿ ಮಾನ್ಯತೆ ರದ್ದು ಮಾಡಲಾಗಿದೆ ಎಂದು ಹೇಳಿದೆ‌.

ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ತಿಳಿಸಿದಂತೆ ಆಯೋಗದ ಕಲಂ 14ರ ಪ್ರಕಾರ ಎಂಫಿಲ್‌ನಲ್ಲಿ ಪ್ರವೇಶ ನೀಡುವುದನ್ನು ನಿಲ್ಲಿಸುವಂತೆ ವಿಶ್ವವಿದ್ಯಾನಿಲಯ ಧನಸಹಾಯ ಆಯೋಗ (ಯುಜಿಸಿ) ವಿಶ್ವವಿದ್ಯಾನಿಲಯಗಳಿಗೆ ಎಚ್ಚರಿಕೆ ನೀಡಿದ್ದರೂ ಹಲವು ವಿವಿ ಗಳು ಎಂಫಿಲ್ ಪದವಿಗೆ ಆಹ್ವಾನಿಸಲಾಗಿದೆ.

ಎಲ್ಲಾ ವಿಶ್ವವಿದ್ಯಾನಿಲಯಗಳಲ್ಲಿ ನೀಡಲಾಗುವ ಎಂಫಿಲ್ ಪದವಿ ಕೋರ್ಸ್ ಇನ್ನು ಮುಂದೆ ಮಾನ್ಯವಾಗಿರುವುದಿಲ್ಲ ಎಂದು ಆಯೋಗವು ಈ ಹಿಂದೆ ಘೋಷಿಸಿತ್ತು ಮತ್ತು ಉನ್ನತ ಶಿಕ್ಷಣ ಸಂಸ್ಥೆಗಳಿಗೆ ಎಂಪಿಲ್ ಕಾರ್ಯಕ್ರಮಗಳನ್ನು ನೀಡದಂತೆ ನಿರ್ದೇಶಿಸಲಾಗಿದೆ.

2023-24ನೇ ಶೈಕ್ಷಣಿಕ ವರ್ಷಕ್ಕೆ ಎಂಫಿಲ್ ಕಾರ್ಯಕ್ರಮಕ್ಕೆ ಪ್ರವೇಶವನ್ನು ನಿಲ್ಲಿಸಲು ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಎಲ್ಲಾ ರಾಜ್ಯಗಳು ಮತ್ತು ಯುಟಿಗಳಲ್ಲಿನ ವಿಶ್ವವಿದ್ಯಾಲಯದ ಅಧಿಕಾರಿಗಳನ್ನು ಕೇಳಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು