Thursday, June 27, 2024

ಸತ್ಯ | ನ್ಯಾಯ |ಧರ್ಮ

ʼಮುಗ್ಗರಿಸಿದʼ ವಿಂಡೀಸ್‌ – ಮಿಂಚಿದ ʼಸೂರ್ಯʼ

ಸೇಂಟ್‌ ಕಿಟ್ಸ್‌: ಮಂಗಳವಾರ ವಾರ್ನರ್‌ ಪಾರ್ಕ್‌ನಲ್ಲಿ ನಡೆದ  ಭಾರತ ಮತ್ತು ವೆಸ್ಟ್‌ ಇಂಡೀಸ್‌ 3ನೇ ಟಿ20 ಪಂದ್ಯದಲ್ಲಿ ಭಾರತ ತಂಡ ಭರ್ಜರಿ ಗೆಲುವು ಸಾಧಿಸಿದೆ.

ಮೊದಲು ಬ್ಯಾಟ್‌ ಮಾಡಿದ ಆತಿಥೇಯ ತಂಡ ವೆಸ್ಟ್‌ ಇಂಡೀಸ್‌ ಮೊದಲು ಬಿರುಸಿನ ಆಟವಾಡಿ ಹೆಚ್ಚು ರನ್‌ ಗಳಿಸುವ ಭರವಸೆ ಹೊಂದಿತ್ತು ನಂತರ ಭಾರತದ ವೇಗಿ ಬೌಲರ್ ಗಳಾದ ಭುವನೇಶ್ವರ್‌ ಕುಮಾರ್‌, ಹಾರ್ದಿಕ್‌ ಪಾಂಡ್ಯ, ಅರ್ಷದೀಪ್‌ ಸಿಂಗ್‌, ಬ್ಯಾಟ್ಸ್ಮನ್‌ಗಳನ್ನ ಕಟ್ಟಿಹಾಕುವುದರಲ್ಲಿ ಯಶಸ್ವಿಯಾದರು.  ಕಳೆದ ಪಂದ್ಯದಲ್ಲಿ ಮಿಂಚಿದ್ದ ಬ್ರಾಂಡನ್ ಕಿಂಗ್ 20 ಎಸೆತಗಳಲ್ಲಿ 20 ರನ್‌ಗಳಿಸಿ ಹಾರ್ದಿಕ್  ಪಾಂಡ್ಯ ಬೌಲಿಂಗ್‌ ದಾಳಿಗೆ ಶರಣಾದರು. ಕೈಲ್ ಮೇಯರ್ಸ್ 50 ಎಸೆತಗಳಲ್ಲಿ 73 ರನ್‌ ಗಳಿಸುವುದರ ಮೂಲಕ  ತಂಡಕ್ಕೆ ಆಸರೆಯಾದರು. ಹಾಗೆಯೆ ಪೊವೆಲ್ 23, ಹೆಟ್ಮೆಯರ್ 20 ರನ್‌ ಗಳಿಸುವುದರ ಮೂಲಕ ತಂಡ 5 ವಿಕೆಟ್‌ಗಳಿಗೆ 164 ರನ್‌ ಕಲೆಹಾಕಿತು.

165 ರನ್‌ಗಳ ಗುರಿ ಬೆನ್ನಟ್ಟಿದ ಭಾರತ ತಂಡ ಒಟ್ಟು 19 ಆಗಿದ್ದಾಗ 11 ರನ್‌ಗಳಿಸಿದ್ದ  ನಾಯಕ ರೋಹಿತ್‌ ಶರ್ಮಾ ಬೆನ್ನಿನ ಸ್ನಾಯು ಸೆಳೆತಕ್ಕೆ ಒಳಗಾಗಿ ಪೆವಿಲಿಯನ್‌ಗೆ ಮರಳಿದರು. ನಂತರ ಬಿರುಸಿನ ಆಟವಾಡಿದ ಸೂರ್ಯಕುಮಾರ್‌ ಯಾದವ್‌  44 ಎಸತೆಗಳಲ್ಲಿ 76 ರನ್‌ ಗಳಿಸಿದರು. ಶ್ರೇಯಸ್‌ ಅಯ್ಯರ್‌  27 ಎಸೆತಗಳಲ್ಲಿ 24 ರನ್‌ಗಳಿಸುವುದರ ಮೂಲಕ  86 ರನ್‌ ಜತೆಯಾಟ ನೀಡಿ ಯಾದವ್‌ಗೆ ಸಾಥ್‌ ನೀಡಿದರು. ನಂತರ ಬಂದ ರಿಷಭ್‌ ಪಂತ್‌ 26 ಎಸೆತಗಳಲ್ಲಿ 33 ರನ್‌ ಗಳಿಸಿ ಅಜೇಯರಾಗಿ ಉಳಿದರು. ಹಾಗೆಯೇ ದೀಪಕ್‌ ಹೂಡಾ 10 ರನ್‌ ಅಜೇಯರಾಗಿ ಉಳಿದಿದ್ದು. ಇನ್ನು 6 ಎಸೆತಗಳು ಬಾಕಿ ಉಳಿದಿರುವಾಗಲೇ ಭಾರತ ತಂಡ 165ರನ್ ಗಳನ್ನ ಯಶಸ್ವಿಯಾಗಿ ಕಲೆಹಾಕಿ ವಿಜಯ ಸಾಧಿಸಿತು.

ರೋಹಿತ್ ಶರ್ಮ ಬಳಗ ಈ ಗೆಲುವಿನ ಮೂಲಕ ಐದು ಪಂದ್ಯಗಳ ಸರಣಿಯಲ್ಲಿ 2–1ರ ಮುನ್ನಡೆ ಸಾಧಿಸಿದೆ.   

Related Articles

ಇತ್ತೀಚಿನ ಸುದ್ದಿಗಳು