ಆ ಊರಲ್ಲಿ ಒಂದೇ ಒಂದು ಮುಸ್ಲಿಂ ಕುಟುಂಬವಿಲ್ಲ. ಒಬ್ಬೇ ಒಬ್ಬ ಮುಸಲ್ಮಾನನೂ ಇಲ್ಲ. ಆದರೂ ಆ ಊರಲ್ಲಿ ಪವಿತ್ರ ಮೊಹರಂ ಹಬ್ಬದ ಆಚರಣೆ ಮಾಡಿ ಭಾವೈಕ್ಯತೆ ಮೆರೆಯಲಾಗಿದೆ. ಆ ಊರು ಬೇರಾವ ಊರೂ ಅಲ್ಲ.. ರಾಜ್ಯ ಬಿಜೆಪಿ ಪಕ್ಷದ ರಾಜ್ಯಾಧ್ಯಕ್ಷರೇ ಆಗಿರುವ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರ ತವರು ಕ್ಷೇತ್ರ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಒಂದು ಗ್ರಾಮ.
ಹೌದು. ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲೂಕಿನ ಶೀರಿಹಳ್ಳಿ ತಾಂಡಾದಲ್ಲಿ ಮುಸ್ಲಿಂಮರೇ ಇಲ್ಲದಿದ್ದರೂ ಶ್ರದ್ಧೆ ಭಕ್ತಿಯಿಂದ ಮೊಹರಂ ಹಬ್ಬ ಆಚರಣೆ ಮಾಡಿದ ಬಂಜಾರ ಸಮುದಾಯ ಭಾವೈಕ್ಯತೆ ಮೆರೆದಿದ್ದಾರೆ.
ಒಂದೇ ಒಂದು ಮುಸ್ಲಿಂ ಮನೆ ಇಲ್ಲದಿದ್ದರೂ ಬಂಜಾರ ಸಮುದಾಯದವರು ಅದ್ದೂರಿಯಾಗಿ ಮೊಹರಂ ಆಚರಿಸಿ ಭಾವೈಕ್ಯತೆ ಮೆರೆದಿದ್ದಾರೆ. ಶೀರಿಹಳ್ಳಿ ತಾಂಡಾದಲ್ಲಿ ಶ್ರದ್ಧಾಭಕ್ತಿಯಿಂದ ಮೊಹರಂ ಆಚರಿಸಲಾಗಿದೆ.
ಮೂರು ದಿನಗಳ ಕಾಲ ಅಲೈದೇವರನ್ನ ಇಟ್ಟು ಪೂಜೆ ಮಾಡುವ ಬಂಜಾರರು ಮೂರನೇ ದಿನದಂದು ಅದ್ದೂರಿಯಾಗಿ ಮೆರವಣಿಗೆ ಮಾಡಿ ಪೂಜೆ ಸಲ್ಲಿಸಿ ಭಕ್ತಿ ಸಮರ್ಪಿಸಿದ್ದಾರೆ. ಮೆರವಣಿಗೆ ವೇಳೆ ಬಂಜಾರ ಸಂಪ್ರದಾಯದಂತೆ ಹಾಡು, ಭಜನೆ ಮೂಲಕ ಮೊಹರಂ ಆಚರಿಸುವ ಮೂಲಕ ಭಾವೈಕತೆ ಸಾರಿದ್ದಾರೆ.