ಮುಂಬೈ | ಮಳೆಗೆ ಕುಸಿದ ಗುಡ್ಡ: ಇಬ್ಬರ ಸಾವು, ಹಲವರಿಗೆ ಗಾಯ

ಮುಂಬೈ: ಮುಂಬೈ ನಗರದಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ನಗರದ ಘಾಟ್‌ಕೋಪರ್ ಸಮೀಪದ ಕುರ್ಲಾ ಪ್ರದೇಶದಲ್ಲಿ ಭೀಕರ ಗುಡ್ಡ ಕುಸಿತ ಸಂಭವಿಸಿದ್ದು, ಇಬ್ಬರು ಮೃತಪಟ್ಟು, ಹಲವರು ಗಾಯಗೊಂಡಿದ್ದಾರೆ.

ಬೃಹನ್ಮುಂಬೈ ಮಹಾನಗರ ಪಾಲಿಕೆ (BMC) ಅಧಿಕಾರಿಗಳ ಪ್ರಕಾರ, ಕುರ್ಲಾದ ಚಿ ರಾಗ್ ನಗರದಲ್ಲಿರುವ ‘ಗೌಸಿಯಾ ಚಾಲ್’ ಬಳಿ ಬುಧವಾರ ಮುಂಜಾನೆ 3:48 ರ ಸುಮಾರಿಗೆ ಈ ದುರಂತ ಸಂಭವಿಸಿದೆ. ಪ್ರದೇಶದಲ್ಲಿ ಮುಂಜಾನೆಯಿಂದ ಸುರಿದ ಧಾರಾಕಾರ ಮಳೆಯೇ ಗುಡ್ಡ ಕುಸಿತಕ್ಕೆ ಪ್ರಮುಖ ಕಾರಣ ಎಂದು ಡಿಸಿಪಿ ಗಣೇಶ್ ಶಿಂಧೆ ತಿಳಿಸಿದ್ದಾರೆ.

ದುರಂತದ ಸ್ಥಳದಿಂದ ಇದುವರೆಗೆ ಇಬ್ಬರ ಮೃತದೇಹಗಳನ್ನು ಹೊರತೆಗೆಯಲಾಗಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಮುಂಜಾಗ್ರತಾ ಕ್ರಮವಾಗಿ ಸ್ಥಳದಲ್ಲಿ ಪೊಲೀಸರನ್ನು ನಿಯೋಜಿಸಲಾಗಿದೆ. ಬಿಎಂಸಿ, ಎನ್‌ಡಿಆರ್‌ಎಫ್ (NDRF) ಹಾಗೂ ಇತರ ವಿಪತ್ತು ನಿರ್ವಹಣಾ ಪಡೆಗಳು ಜಂಟಿಯಾಗಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ.

ಘಟನೆಯಲ್ಲಿ ಸೋಹೇಲ್ ಅನ್ಸಾರಿ ಮತ್ತು ಮೊಹಮ್ಮದ್ ಅನ್ಸಾರಿ ಎಂಬುವರು ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮುಂಬೈ ಮೇಯರ್ ರೀತು ತಾವಡೆ ಹಾಗೂ ಹೆಚ್ಚುವರಿ ಪಾಲಿಕೆ ಆಯುಕ್ತ ಅವಿನಾಶ್ ದಾಕನೆ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು