Tuesday, January 27, 2026

ಸತ್ಯ | ನ್ಯಾಯ |ಧರ್ಮ

ಮುಂಬರುವ ಚುನಾವಣೆಯ ನಂತರ ಬಿಜೆಪಿ ವಿರೋಧ ಪಕ್ಷವಾಗಬೇಕು : ಶಶಿ ತರೂರ್

ದೆಹಲಿ : ಮುಂಬರುವ 2024 ರ ಚುನಾವಣೆಯಲ್ಲಿ ಕಾಂಗ್ರೆಸ್‌ ಅಧಿಕಾರಕ್ಕೆ ಬರಬೇಕು ನಮ್ಮಲ್ಲಿ ದೇಶವನ್ನು ಅಚ್ಚುಕಟ್ಟಾಗಿ ನಡೆಸುವ ಅನುಭವಿ ಜನರಿದ್ದಾರೆ ಎಂದು ಶಶಿ ತರೂರ್‌ ಮಾಧ್ಯಮಗಳ ಮುಂದೆ ಮಾತನಾಡಿದ್ದಾರೆ.

ಕಾಂಗ್ರೆಸ್‌ ಅಧ್ಯಕ್ಷ ಸ್ಥಾನದ ಅಭ್ಯರ್ಥಿ ಶಶಿ ತರೂರ್ 2024 ರ ಚುನಾವಣಾ ಬಗ್ಗೆ ಮಾತನಾಡಿದ್ದು ʼ ಕಾಂಗ್ರೆಸ್‌ ದೇಶವನ್ನು ಅಚ್ಚುಕಟ್ಟಾಗಿ ನಡೆಸಿದೆ. ಯಾಕಂದ್ರೆ ನಮ್ಮ ಪಕ್ಷದಲ್ಲಿ ಅನುಭವಿ ಜನರಿದ್ದಾರೆ. ಮತದಾರರಿಗೆ ನಮ್ಮ ನಿಜವಾದ ಶಕ್ತಿಯನ್ನು ತೋರಿಸುವ ಅಗತ್ಯ ಇದೆ. ಕಾಂಗ್ರೆಸ್‌ ಪಕ್ಷದ ಬಗ್ಗೆ ಮತದಾರರಿಗೆ ಭರವಸೆ ಮೂಡಿಸಬೇಕಾಗಿದೆ ಎಂದು ಹೇಳಿದರು.

ಕಾಂಗ್ರೆಸ್‌ ಪಕ್ಷವು ಮತದಾರರಿಗೆ ಭರವಸೆ ಮೂಡಿಸಲು ಕೆಲವೊಂದಿಷ್ಟು ಬದಲಾವಣೆ ಅವಶ್ಯಕತೆ ಇದೆ. ಇದು ಆದಷ್ಟು ಬೇಗ ನನ್ನಿಂದಲೇ ಎಂದು ಭಾವಿಸುತ್ತೇನೆ . ಬಿಜೆಪಿ ಮುಂದಿನ ಚುನಾವಣೆಯ ನಂತರ ವಿರೋಧ  ಪಕ್ಷದ ಭಾಗವಾಗಲು ಎಲ್ಲಾ ತಯಾರಿ ನಡೆಸಬೇಕು ಎಂದು ಮಾಧ್ಯಮಗಳ ಮುಂದೆ ಶಶಿ ತರೂರ್ ತಮ್ಮಅಭಿಪ್ರಾಯ ವ್ಯಕ್ತ ಪಡಿಸಿದರು.

ಇದನ್ನೂ ನೋಡಿ : ಪುನಿತ್ ರಾಜ್‌ ಕುಮಾರ್ ರವರ ಕೊನೆಯ ಚಿತ್ರ ʼಗಂಧದ ಗುಡಿʼ ಟ್ರೈಲರ್‌ ಬಿಡುಗಡೆ

ಈ ವೀಡಿಯೋ ನೋಡಿ ಅಪ್ಪು ಅವ್ರ ಮೇಲೆ ನಿಮ್ಮದೂ ಇದೇ ಅಭಿಪ್ರಾಯ ಎಂದೆನಿಸದೆ ಇರುವುದಿಲ್ಲ

Related Articles

ಇತ್ತೀಚಿನ ಸುದ್ದಿಗಳು

You cannot copy content of this page