Home ಅಂಕಣ ಬೊಗಸೆಗೆ ದಕ್ಕಿದ್ದು – 73 : ಭಾರತದ ಹಿತ್ತಿಲಲ್ಲಿ ​ಅತಿಥಿಯ ಕೊಲೆ: ವಿಶ್ವಗುರು ಗಪ್ಚುಪ್!

ಬೊಗಸೆಗೆ ದಕ್ಕಿದ್ದು – 73 : ಭಾರತದ ಹಿತ್ತಿಲಲ್ಲಿ ​ಅತಿಥಿಯ ಕೊಲೆ: ವಿಶ್ವಗುರು ಗಪ್ಚುಪ್!

0

“..ಇರಾನಿನಲ್ಲಿ ಖಾಮಿನೈ ಹತ್ಯೆಗೆ ಸಂಭ್ರಮಾಚರಣೆ ಮಾಡಿದಂತೆ ವಿಶ್ವದಾದ್ಯಂತ ಬೇರೆಯವರು ಸಂಭ್ರಮಾಚರಣೆ ಮಾಡಿದ್ದರೆ? “ವಿಶ್ವಗುರು” ಮೌನ; ಯಾಕೆ ಗೊತ್ತಾ?..” ನಿಖಿಲ್ ಕೋಲ್ಪೆಯವರ ಬರಹದಲ್ಲಿ

ವಿಶ್ವಗುರು ನರೇಂದ್ರ ಮೋದಿ ಆಡಳಿತದ ಪುಕ್ಕಲು ಮೌನವು ಶ್ರೀಲಂಕಾದ ಕರಾವಳಿಯಲ್ಲಿ ನಡೆಯುತ್ತಿರುವ ಭಾರತ ದುರಂತದಂತೆಯೇ ಭಾಸವಾಗುತ್ತಿದೆ. ಬುಧವಾರ, ಯುಎಸ್ಎ ವೇಗದ ದಾಳಿ ಜಲಾಂತರ್ಗಾಮಿ ಇರಾನಿನ ಯುದ್ಧನೌಕೆ ಐಆರ್ಐಎಸ್ “ದೇನಾ”ಗೆ  (IRIS-DENA) ಮಾರ್ಕ್ 48 ಟಾರ್ಪಿಡೊವನ್ನು ಹಾರಿಸಿತು, ಕನಿಷ್ಠ 87 ನಾವಿಕರು ಸಾವನ್ನಪ್ಪಿದರು (ನಮಗೆ ಚಿಂತೆಯಿಲ್ಲ… ವೀರ ಸೈನಿಕರು ವೀರ ಮರಣವನ್ನು ಅಪ್ಪಲೆಂದೇ ಇರುವ ನಮ್ಮ ನಿಮ್ಮ ಮಕ್ಕಳು). ಭೌತಿಕ ಅವಶೇಷಗಳು ಗಾಲೆಯಿಂದ 44 ನಾಟಿಕಲ್ ಮೈಲುಗಳಷ್ಟು ದೂರದಲ್ಲಿದ್ದರೂ, ರಾಜಕೀಯ ಅವಶೇಷಗಳು ನಮ್ಮದೇ, ಅಂದರೆ ಮೋದಿಯಲ್ಲದ ಭಾರತದ ವಿಶಾಖಪಟ್ಟಣದ ಹಡಗುಕಟ್ಟೆಗಳಲ್ಲಿ ಹರಡಿಕೊಂಡಿವೆ.

ಧಣಿಯ ಮಿತ್ರನಿಂದ ಭಾರತದ ​ಅತಿಥಿಯ ಕೊಲೆ
​ಈ ಘಟನೆಯ ಅತ್ಯಂತ ಆತಂಕಕಾರಿ ಅಂಶವೆಂದರೆ ಅದರ ಸಮಯ. ಟ್ರಂಪ್ ಮೋದಿಗೆ ಸಂದೇಶ ನೀಡುತ್ತಿದ್ದಾನೆಯೆ- ಮಗನೇ ಅಡಗಿ ಕುಳಿತಕೋ ಎಂದು? ಹತ್ತು ದಿನಗಳ ಹಿಂದೆ, ಐಆರ್ಐಎಸ್ “ದೇನಾ” ಭಾರತೀಯ ನೌಕಾಪಡೆಯ ಪ್ರಮುಖ ಬಹುರಾಷ್ಟ್ರೀಯ ಜಂಟಿ ಸಮರಾಭ್ಯಾಸ “ಮಿಲನ್ 2026”ರಲ್ಲಿ ಒಂದು ದೇಶದ ಗೌರವಾನ್ವಿತ ಅತಿಥಿ. ಇರಾನಿನ ಈ ಹಡಗನ್ನು ಭಾರತವು “ಸ್ನೇಹಪರ ವಿದೇಶಿ ದೇಶ”ದ ಪ್ರತಿನಿಧಿ ಎಂದು 74 ರಾಷ್ಟ್ರಗಳ ಈ ಅಭ್ಯಾಸಕ್ಕೆ ಸೇರಲು ಆಹ್ವಾನಿಸಿತ್ತು.

“ಪೆದ್ದ” (ತೆಲುಗಿನ) ಮೋದಿಯ ಬುದ್ಧಿವಂತ “ಉಣ್ಣಿ” ಸಲಹೆಗಾರರು ಆತನ ಯೋಜನೆಗಳಿಗೆ ಬಣ್ಣದ ಕಣ್ಕಟ್ಟಿನ ಹೆಸರಿಡುವಂತೆ ಈ ಸಮರಾಭ್ಯಾಸಕ್ಕೆ “ಸೌಹಾರ್ದತೆ, ಸಹಕಾರ ಮತ್ತು ಸಹಯೋಗ” ಶಬ್ದಗಳ ಸರ್ಕಸ್ ಮಾಡಿ “ಮಿಲನ್” (MILAN) ಎಂದು ಹೆಸರಿಟ್ಟಿದ್ದರು. ಇದರಲ್ಲಿ ಭಾಗವಹಿಸುತ್ತಿದ್ದ ಅತಿಥಿ ಹಡಗನ್ನು ಹಿಂದಿರುಗುವ ಪ್ರಯಾಣದಲ್ಲಿ ನೆರೆಮನೆ ಶ್ರೀಲಂಕಾದ ನೀರಿನಲ್ಲಿ ಉಡಾಯಿಸಿದ್ದು ಇರಾನಿನ ಖಾಮಿನೈಗೆ ನೀಡಿದಂತೆ ಮೋದಿಗೆ ನೀಡಿದ ಸಂದೇಶವಾಗಿದೆ.  ಇದು ಆಳವಾದ ಸಂಚು. ಮೋದಿಗೆ ಇದು ರಾಜತಾಂತ್ರಿಕ ಮುಜುಗರವಲ್ಲ; ತಪರಾಕಿ, ಎಚ್ಚರಿಕೆ. ಭಾರತದ ಆಹ್ವಾನವು “ಸುರಕ್ಷಿತ ಮಾರ್ಗ”ವನ್ನು ಖಾತರಿಪಡಿಸುವುದಿಲ್ಲ. “ನೆರೆಮನೆಯ ಮಕ್ಕಳನ್ನು ನಮ್ಮ ಮಕ್ಕಳ ಜೊತೆ ಕಲಿಯಲು ಬನ್ನಿ” ಎಂದು ಆಹ್ವಾನಿಸಿ, ಆ ಮಕ್ಕಳನ್ನು ದಾರಿಯಲ್ಲಿ ಅತ್ಯಾಚಾರ ಆದಾಗ ವಿಶ್ವ ಪೊಲೀಸರಿಗೂ ಹೇಳದೆ ತಲೆಮರೆಸುವ ಪುಕ್ಕಲು ಕೆಲಸವನ್ನು ಮೋದಿ ಮಾಡಿದ್ದಾರೆ. ಬೇಗಡೆ ವಿಶ್ವಗುರು ಮೋದಿ ತನ್ನ ಸ್ವಂತ ಅಂಗಳ ಎಂದು ಪರಿಗಣಿಸುವ ಹಿಂದೂ ಮಹಾಸಾಗರವನ್ನು ಬಾಹ್ಯ ಶಕ್ತಿಗಳು- ಯಾರನ್ನಾದರೂ ಹೇಗೆ ಬೇಕಾದರೂ ಕೊಲ್ಲುವ ಮಾಫಿಯಾ ಅಡ್ಡೆ ಮಾಡಬಹುದು ಎಂದಾದರೆ, ಈತ ಖಾಮಿನೈಗಿಂತ ಪುಕ್ಕಲ ನಾಯಕ ಎಂದು ಸಾರಿ ಹೇಳಿದಂತಾಗುತ್ತದೆ. ಈತನಿಗೆ ಮಾಡಿದ್ದನ್ನೇ “ಮೈ ಫ್ರಾಂಡ್ ದೋ ಲಂಡ್ ಟ್ರಂಪ್” ನಿಮಗ್ಯಾಕೆ ಮಾಡಬಾರದು ಎಂಬುದಕ್ಕೆ ಕಾರಣ ಕೊಡಿ ವಿಷಗುರುಗಳೇ!

ಪದನಿಮಿತ್ತ ರಾಷ್ಟ್ರಪತಿಯವರ ಪದನಿಮಿತ್ತ ಉಪಸ್ಥಿತಿಯೇ ಇದು?
​ಇರಾನಿನ ಈ ಯುದ್ಧ ನೌಕೆ ಭಾಗವಹಿಸಿದ್ದ- ಈ ನಮ್ಮದೇ ನೌಕಾಪಡೆಯ ಸಮರಾಭ್ಯಾಸದಲ್ಲಿ ಯುದ್ಧ ವಿಮಾನಗಳಲ್ಲಿ, ಜಲಾಂತರ್ಗಾಮಿಗಳಲ್ಲಿ ಓಡಾಡುವ ವೀರ ವನಿತೆ  ರಾಷ್ಟ್ರಪತಿ ದ್ರೌಪದಿ ಮುರ್ಮು ಸ್ವತಃ ಭಾಗವಹಿಸಿದ್ದರು ಎಂಬುದು ಈ ಘಟನೆಯ ಗಂಭೀರತೆಯನ್ನು  ಇನ್ನಷ್ಟು ಹೆಚ್ಚಿಸುತ್ತದೆ. ಫೆಬ್ರವರಿ 18, 2026ರಂದು, ಮೋದಿಯ ಅಲ್ಲ; ನಮ್ಮ ಭಾರತದ ರಾಷ್ಟ್ರಪತಿಯವರು ಈ ಅಂತರರಾಷ್ಟ್ರೀಯ ಫ್ಲೀಟ್ ರಿವ್ಯೂ (ನೌಕಾ ಪಡೆಗಳ ಪರಿವೀಕ್ಷಣೆ) ನಡೆಸಿದರು, ಅಲ್ಲಿ ಅವರು ಇರಾನಿ ಯುದ್ಧ ನೌಕೆ IRIS ದೇನಾ ಸೇರಿದಂತೆ ಇತರ ಯುದ್ಧನೌಕೆಗಳನ್ನು ಪರಿಶೀಲಿಸಿದ್ದರು. ಅವರು ಸುಮ್ಮನೇ ಈ ಹಡಗಿನಲ್ಲಿ ಶ್ರೀಲಂಕಾಕ್ಕೆ ವಿಹಾರ ಹೋಗಿದ್ದರೆ?! ಭಾರತದ ರಾಷ್ಟ್ರಪತಿಯವರು ಸಶಸ್ತ್ರ ಪಡೆಗಳ ಸರ್ವೋಚ್ಚ ಕಮಾಂಡರ್ ಆಗಿದ್ದಾರೆ. ಪರಿಶೀಲನೆಯಲ್ಲಿ ಅವರ ಉಪಸ್ಥಿತಿಯು ಭಾರತದ ಸಮುದ್ರ ಭದ್ರತೆ ಮತ್ತು ಭಾಗವಹಿಸುವ ನೌಕಾಪಡೆಗಳಲ್ಲಿ ಪರಸ್ಪರ ಗೌರವಕ್ಕೆ, ರಕ್ಷಣೆಗೆ “ಸಾರ್ವಭೌಮ” ಬದ್ಧತೆಯ ಸಂಕೇತವಾಗಿತ್ತು.  ನಮ್ಮ ರಾಷ್ಟ್ರದ ಮುಖ್ಯಸ್ಥರು ಪರಿಶೀಲಿಸಿದ ಹಡಗನ್ನು, ಆ ಸಮರಾಭ್ಯಾಸದಲ್ಲಿ ಹಾಜರಿದ್ದ ಮತ್ತೊಂದು “ಪಾಲುದಾರ” ರಾಷ್ಟ್ರ (ಯುಎಸ್ಎ) ಒಂದೆರೆಡು ದಿನಗಳ ನಂತರ ಮುಳುಗಿಸುವುದು ಭಾರತ ಆಯೋಜಿಸಿದ್ದ ಕಾರ್ಯಕ್ರಮದ ಪಾವಿತ್ರ್ಯಕ್ಕೆ, ವಿಶ್ವಾಸಾರ್ಹತೆಗೆ ನೇರ ಅವಮಾನವಾಗಿದೆ. ಮೋದಿ ಎಂತಾ ನಾಲಾಯಕ್ ಎಂದು ತೋರಿಸಿಕೊಟ್ಟಿದೆ.

ಯೋಚಿಸಿ ನೋಡಿ: ಅದರಲ್ಲಿ ನಮ್ಮ ಮರ್ಮು, ವಿಶ್ವಗುರು ಇದ್ದಿದ್ದರೆ? ಇರಾನಿನಲ್ಲಿ ಖಾಮಿನೈ ಹತ್ಯೆಗೆ ಸಂಭ್ರಮಾಚರಣೆ ಮಾಡಿದಂತೆ ವಿಶ್ವದಾದ್ಯಂತ ಬೇರೆಯವರು ಸಂಭ್ರಮಾಚರಣೆ ಮಾಡಿದ್ದರೆ? “ವಿಶ್ವಗುರು” ಮೌನ; ಯಾಕೆಂದರೆ, ಹಿಂದೆಯೇ ತನ್ನೊಳಗೆ ಸತ್ತಿದ್ದ ವ್ಯಕ್ತಿ ಮರ್ಯಾದೆ ಕಳಕೊಂಡು ಮತ್ತೆ ಮತ್ತೆ ಸಾಯುತ್ತಿದ್ದಾನೆ. ಯುಎಸ್ಎ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ಎಂಬ ಮಾಫಿಯಾ ದೊರೆ ಈ ದಾಳಿಯನ್ನು “ಸ್ತಬ್ಧ ಸಾವು” ಮತ್ತು “ಐತಿಹಾಸಿಕ ಮೈಲಿಗಲ್ಲು” ಎಂದು ವಿವರಿಸಿದ್ದರೂ, ಅದು ಮೋದಿಗೆ ನೇರವಾಗಿ ಕೊಟ್ಟ ಬೆದರಿಕೆ ಎಂದು ಈ ದಪ್ಪ ಚರ್ಮಗಳಿಗೆ ಹೊಳೆದಿಲ್ಲ. ಭಾರತದ (ಮೋದಿ ಭಾರತವಲ್ಲ!) ಮೇಲಿನ ದಾಳಿ ಟ್ರಂಪಿಗೆ ಮಾರಕವಾಗಬಹುದು ಹುಚ್ಚು ನಾಯಿಗಳನ್ನು ಎಲ್ಲರೂ ಸೇರಿ ಕೊಲ್ಲುತ್ತಾರೆ. ದೋಲಂಡ್ ಟ್ರಂಪ್ ಕಡಿದವರಿಗೆ ಚಿಕಿತ್ಸೆ ಇಲ್ಲ!

ಇಷ್ಟೆಲ್ಲಾ ಹೇಳಿ, ನಾನು ಈ ವಿಶ್ವ ಗುರುವನ್ನು ಕೇಳುವುದು ಇಷ್ಟೇ: ಯುಎಸ್ಎ ಸಬ್ಮೆರೀನ್ ಭಾರತದ ಅಂಗಳದಲ್ಲಿ, ಅಂದರೆ, ಶ್ರೀಲಂಕಾ ರಾಜಧಾನಿಗೆ ಹತ್ತಿರದಲ್ಲೇ ಏನು ಮಾಡುತ್ತಿತ್ತು ವಿಶ್ವಗುರು? ನಿನಗೆ ಗೊತ್ತಿರಲಿಲ್ಲವೆ?

ನಿನ್ನ ಮನೆಗೆ ಬಂದ ಅತಿಥಿಯನ್ನು ಮರಳಿ ಸುರಕ್ಷಿತವಾಗಿ ಮನೆಗೆ ಕಳಿಸುವ, ಕನಿಷ್ಟ ಪಕ್ಷ ನನ್ನ ನೆರೆಮನೆಯಲ್ಲಿ ಮಾಡಬೇಡ ಎಂದು ಹೇಳುವ ಒಂದು ಧೈರ್ಯ ನಿನಗೆ ಇಲ್ಲವೇ? ಇಂದಿರಾ ಗಾಂಧಿಯವರಷ್ಟಾದರೂ?

ನಿನ್ನ ಅತಿಥಿಯನ್ನು ನಿನ್ನ ನೆರೆಮನೆಯಲ್ಲಿ ನಿನ್ನ ಗೆಳೆಯ ಕೊಲ್ಲಬಹುದಾದರೆ, ನಿನ್ನ “ಪ್ರಾದೇಶಿಕ ಶಕ್ತಿ” ಎಂಬುದಕ್ಕೆ ಯಾವ ಗ್ಯಾರಂಟಿ ಇದೆ? ಅದಾನಿ ಗ್ಯಾರೆಂಟಿಯೋ? ಅಂಬಾನಿ ಗ್ಯಾರಂಟಿಯೋ?!

You cannot copy content of this page

Exit mobile version