Thursday, July 10, 2025

ಸತ್ಯ | ನ್ಯಾಯ |ಧರ್ಮ

ರೌಡಿ ಶೀಟರ್ ಗುಂಡನ ಕೊಲೆ

ಹಾಸನ: ಮಾರಕಾಸ್ತ್ರಗಳಿಂದ ಕೊಚ್ಚಿ ರೌಡಿಶೀಟರ್ ಓರ್ವನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಗರದ ಚನ್ನಪಟ್ಟಣದಲ್ಲಿ ಇಂದು ಸಂಜೆ ನಡೆದಿದೆ.

೩೦೭ ಕೇಸಿನ ಆರೋಪಿ ರಖಿತಾ ಆಲಿಯಾಸ್ ಗುಂಡ (೩೫) ಕೊಲೆಯಾದ. ರಾತ್ರಿ ಆಟೋದಲ್ಲಿ ಕುಳಿತು ಸ್ನೇಹಿತರೊಂದಿಗೆ ಕಂಠಪೂರ್ತಿ ಕುಡಿದಿದ್ದು, ರೌಡಿ ಶೀಟರ್ ರಖಿತಾ ಕುಡಿದ ಅಮಲಿನಲ್ಲಿ ತನ್ನ ಸ್ನೇಹಿತರೊಂದಿಗೆ ಜಗಳವಾಡಿಕೊಂಡಿದ್ದನು.

ಇದಾದ ಸಲ್ಪ ಸಮಯದಲ್ಲೇ ಸ್ನೇಹಿತರು ರಖಿತಾನನ್ನು ಮಾರಕಾಸ್ತ್ರಗಳಿಂದ ಕೊಲೆಗೈದು ಅಲ್ಲಿಂದ ಪರಾರಿಯಾಗಿದ್ದರು. ಈ ಹಿಂದೆ ಆತನ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸರು ಆತನನ್ನು ರೌಡಿ ಪಟ್ಟಿಗೆ ಸೇರಿಸಿದ್ದರು.

ಹಳೇವೈಷಮ್ಯದ ಹಿನ್ನೆಲೆಯಲ್ಲಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದ್ದು, ನಗರ ಪೊಲೀಸ್ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದರು. ಆರೋಪಿಗಳ ಪತ್ತೆಗೆ ತನಿಖೆ ಆರಂಭಿಸಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page