Friday, June 14, 2024

ಸತ್ಯ | ನ್ಯಾಯ |ಧರ್ಮ

ಮುರುಘಾ ಮಠಕ್ಕೆ ನೂತನ ಪೀಠಾಧಿಕಾರಿ ನೇಮಕ ಮಾಡಲು ಆಗ್ರಹ

ಚಿತ್ರದುರ್ಗ : ಚಿತ್ರದುರ್ಗದ ಮುರುಘಾ  ಮಠದಲ್ಲಿ ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ  ನಡೆಸಿದ  ಆರೋಪದಡಿ ಶಿವಮೂರ್ತಿ ಮುರುಘಾ ಶರಣರನ್ನು ಸೆಪ್ಟಂಬರ್‌ 1 ರಂದು ಬಂಧಿಸಲಾಗಿದ್ದು, ಮಠದ ಜವಬ್ದಾರಿ ನಿರ್ವಹಿಸಲು ನೂತನ ಪೀಠಾಧಿಕಾರಿ ನೇಮಕ ಆಗಬೇಕು, ಶಿವಮೂರ್ತಿ ಸ್ವಾಮೀಜಿಗಳನ್ನು ವಜಾ ಮಾಡಬೇಕೆಂದು ವೀರಶೈವ ಲಿಂಗಾಯುತ ಸಮಾಜದ ಮುಖಂಡರು ಸೇರಿ ಸಭೆಯಲ್ಲಿ ನಿರ್ಣಯ ತೆಗೆದುಕೊಂಡಿದ್ದಾರೆ.

ಈ ಹಿನ್ನಲೆ ಗುರುವಾರದಂದು ಚಿತ್ರದುರ್ಗ ತಾಲ್ಲೂಕಿನ ಸೀಬಾರದ ನಿಜಲಿಂಗಪ್ಪ ಸ್ಮಾರಕ ಬಳಿ ಮಾಜಿ ಸಚಿವ ಎಚ್ ಏಕಾಂತಯ್ಯ ನೇತೃತ್ವದಲ್ಲಿ ವೀರಶೈವ ಲಿಂಗಾಯುತ ಸಮಾಜದ ಮುಖಂಡರೆಲ್ಲಾ ಸೇರಿ ಮುರುಘಾರಾಜೇಂದ್ರ ಪೀಠದ ಉಳಿವಿಗಾಗಿ ಸಭೆಯನ್ನು ಏರ್ಪಡಿಸಿಕೊಂಡಿದ್ದರು.

ಸಭೆಯಲ್ಲಿ ಮಾತನಾಡಿದ ಮಾಜಿ ಸಚಿವ ಎಚ್‌ ಏಕಾಂತಯ್ಯ ಅವರು ʼಇದೊಂದು ಸಂದಿಗ್ಧ ಸ್ಥಿತಿಯಾಗಿದೆ. ಮುರುಘಾ ಶರಣರು ಬಂಧಿತವಾದ ನಂತರ ಮಠದ ದೈನಂದಿನ ಕಾರ್ಯ ಚಟುವಟಿಕೆಗಳು ಸರಿಯಾಗಿ ನಡೆಯುತ್ತಿಲ್ಲ. ಮಠದ ಕಾರ್ಯಗಳಿಗೆ ತೊಂದರೆ ಉಂಟಾಗುತ್ತಿವೆ. ಮುರುಘಾ ಪೀಠಾಧ್ಯಕ್ಷರ ಪರಂಪರೆ ಉಳಿಯಬೇಕಾದ್ದರಿಂದ ಕೂಡಲೇ ರಾಜ್ಯ ಸರ್ಕಾರ ಈ ಸಮಸ್ಯೆಯಲ್ಲಿ ಭಾಗಿಯಾಗಿ ಶಿವಮೂರ್ತಿ ಸ್ವಾಮೀಜಿಗಳನ್ನು ವಜಾಗೊಳಿಸಬೇಕು ಹಾಗೆಯೇ ನೂತನ ಪೀಠಾಧಿಕಾರಿಯ ನೇಮಕ ಆಗಬೇಕು ʼ ಎಂದು ಲಿಂಗಾಯುತ ಸಮಾಜದ ಸಭೆಯಲ್ಲಿ ಹೇಳಿದ್ದಾರೆ.

🔸 ಪೀಪಲ್‌ ಗ್ರೂಪ್‌ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
https://chat.whatsapp.com/G94DLKaJrsBH07M7DvkqRo

ಇದನ್ನು ನೋಡಿ: ಮೈಸೂರು ಮಹಿಷಾಸುರನಿಗೆ ಬಂಗಾಳದಲ್ಲಿ ದೈವಪೂಜೆ

🔸 ಇಡೀ ಬಂಗಾಳ ದಸರಾ ಸಂಭ್ರಮದಲ್ಲಿದ್ದರೆ ಪೂರ್ವ ಭಾರತದ ಬುಡಕಟ್ಟು ಸಮುದಾಯಗಳು ಮಹಿಷಾಸುರನಿಗಾದ ಅನ್ಯಾಯಕ್ಕೆ ಶೋಕಿಸುತ್ತಿರುತ್ತವೆ.
https://peepalmedia.com/deity-worship-in-bengal-to-mysore-mahishasura/

Related Articles

ಇತ್ತೀಚಿನ ಸುದ್ದಿಗಳು