Home ದೇಶ ವಂದೇ ಮಾತರಂ ಕಡ್ಡಾಯ ಗಾಯನ, ರಾಷ್ಟ್ರಗೀತೆಗೆ ಸಮಾನ ಸ್ಥಾನಮಾನ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಗಾಯಕ...

ವಂದೇ ಮಾತರಂ ಕಡ್ಡಾಯ ಗಾಯನ, ರಾಷ್ಟ್ರಗೀತೆಗೆ ಸಮಾನ ಸ್ಥಾನಮಾನ ಪ್ರಶ್ನಿಸಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಗಾಯಕ ಟಿ.ಎಂ. ಕೃಷ್ಣ

0

ದೆಹಲಿ: ರಾಷ್ಟ್ರಗೀತೆಯಾದ ‘ವಂದೇ ಮಾತರಂ’ನ ಎಲ್ಲಾ ಆರು ಚರಣಗಳನ್ನು ಕಡ್ಡಾಯವಾಗಿ ಹಾಡಬೇಕೆಂಬ ಕೇಂದ್ರ ಸರ್ಕಾರದ ಸುತ್ತೋಲೆ ಹಾಗೂ ವಂದೇ ಮಾತರಂಗೆ ರಾಷ್ಟ್ರಗೀತೆಯಷ್ಟೇ (ಜನಗಣಮನ) ಸಮಾನ ಸ್ಥಾನಮಾನ ನೀಡಿ ತರಲಾದ ಇತ್ತೀಚಿನ ಕಾನೂನು ತಿದ್ದುಪಡಿಯನ್ನು ಪ್ರಶ್ನಿಸಿ ಖ್ಯಾತ ಕರ್ನಾಟಕ ಶಾಸ್ತ್ರೀಯ ಸಂಗೀತ ಗಾಯಕ ಟಿ.ಎಂ. ಕೃಷ್ಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದಾರೆ.

ವಂದೇ ಮಾತರಂ ಗೀತೆಯ ಕೊನೆಯ ನಾಲ್ಕು ಚರಣಗಳು ನಿರ್ದಿಷ್ಟವಾಗಿ ಹಿಂದೂ ದೇವತೆಗಳ ಭಕ್ತಿಯನ್ನು ಬಿಂಬಿಸುತ್ತವೆ. ಆದ್ದರಿಂದ ಆ ಚರಣಗಳನ್ನು ಹಾಡುವುದನ್ನು ಕಡ್ಡಾಯಗೊಳಿಸುವುದು ಭಾರತದ ಜಾತ್ಯತೀತ ಚೌಕಟ್ಟನ್ನು ಹಾಗೂ ಸಂವಿಧಾನದ ಆಶಯವನ್ನು ಸ್ಪಷ್ಟವಾಗಿ ಉಲ್ಲಂಘಿಸುತ್ತದೆ ಎಂದು ಅವರು ತಮ್ಮ ಅರ್ಜಿಯಲ್ಲಿ ವಾದಿಸಿದ್ದಾರೆ.

‘ರಾಷ್ಟ್ರೀಯ ಗೌರವಕ್ಕೆ ಅಪಮಾನ ತಡೆ ಕಾಯ್ದೆ’ಯ (Prevention of Insults to National Honour Act) ವ್ಯಾಪ್ತಿಗೆ ವಂದೇ ಮಾತರಂ ಅನ್ನೂ ಸೇರಿಸಿ ತರಲಾಗಿರುವ ತಿದ್ದುಪಡಿಯು ಸಂಪೂರ್ಣ ಅನಿಯಂತ್ರಿತವಾಗಿದ್ದು, ವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುತ್ತದೆ. ಅಲ್ಲದೆ ಇದು ಕೇವಲ ಬಹುಸಂಖ್ಯಾತ ಧಾರ್ಮಿಕ ಸಂದೇಶವನ್ನು ದೇಶದ ಮೇಲೆ ಹೇರುವ ಪ್ರಯತ್ನವಾಗಿದೆ ಎಂದು ಟಿ.ಎಂ. ಕೃಷ್ಣ ತಮ್ಮ ಅರ್ಜಿಯಲ್ಲಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

You cannot copy content of this page

Exit mobile version