ಮೈಸೂರು: ನಾಲ್ವಡಿ ಕೃಷ್ಣರಾಜ ಒಡೆಯರ್ ಅವರನ್ನು ಅವಮಾನಿಸುವ ಉದ್ದೇಶದಿಂದ ನಾನು ಹೇಳಿಕೆ ನೀಡಿಲ್ಲ ಎಂದು ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ ಸ್ಪಷ್ಟಪಡಿಸಿದ್ದಾರೆ.
“ನನ್ನ ಹೇಳಿಕೆಯನ್ನು ತಪ್ಪಾಗಿ ಅರ್ಥೈಸಲಾಗಿದೆ” ಎಂದು ಅವರು ಹೇಳಿದರು.
ತಮ್ಮ ತಂದೆ ಸಿದ್ದರಾಮಯ್ಯ ಅವರನ್ನು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರಿಗೆ ಹೋಲಿಸಿ ಯತೀಂದ್ರ ಇತ್ತೀಚೆಗೆ ನೀಡಿದ ಹೇಳಿಕೆಗೆ ಹಲವಾರು ಕಡೆಯಿಂದ ಟೀಕೆ ವ್ಯಕ್ತವಾಗಿತ್ತು.
ಮೈಸೂರು ಮತ್ತು ರಾಜ್ಯಕ್ಕೆ ನಲ್ವಡಿ ಒಡೆಯರ್ ಅವರ ಕೊಡುಗೆಗಳು ಅಪಾರ. ನಮ್ಮ ಸರ್ಕಾರದ ಕೊಡುಗೆಗಳು ಅವರಿಗಿಂತ ಹೆಚ್ಚಿನವು ಎಂದು ನಾನು ಹೇಳಿಲ್ಲ. ಆದರೆ, ಸ್ವಾತಂತ್ರ್ಯದ ನಂತರ, ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಮೈಸೂರಿಗೆ ಹೆಚ್ಚಿನ ಅನುದಾನ ನೀಡಿದೆ. ನನ್ನ ತಂದೆಯಷ್ಟು ಹಣವನ್ನು ಬೇರೆ ಯಾವ ಮುಖ್ಯಮಂತ್ರಿಯೂ ನೀಡಿಲ್ಲ ಹೇಳಿದ್ದೆ. ಕ್ಷಮೆಯಾಚಿಸುವುದರಲ್ಲಿ ಅರ್ಥವಿಲ್ಲ” ಎಂದು ಅವರು ಹೇಳಿದರು.
ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಯತೀಂದ್ರ ಅವರ ಹೇಳಿಕೆಗೆ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು. “ಸಿದ್ದರಾಮಯ್ಯನವರು ಸವಲತ್ತುಗಳನ್ನು ನೀಡಿದ್ದರೆ, ಅದು ಅವರ ಸ್ವಂತ ಹಣದಿಂದಲ್ಲ” ಎಂದು ಅಶೋಕ ಹೇಳಿದರು.