ಮೈಸೂರು : ಮೈಸೂರಿನಲ್ಲಿ ಕಳೆದ ಮೂರು ದಿನಗಳಿಂದ ಧಾರಕಾರ ಮಳೆ ಸುರಿಯುತ್ತಿದ್ದು, ಚಾಮುಂಡಿ ಬೆಟ್ಟದಲ್ಲಿ ರಸ್ತೆಯ ಬಳಿ ಮತ್ತೆ ಭೂಕುಸಿತವಾಗಿರುವ ಘಟನೆ ನಡೆದಿದೆ.
ಮೈಸೂರಿನಲ್ಲಿ ಕಳೆದ ಮೂರು ದಿನಗಳಿಂದ ಧಾರಾಕಾರ ಮಳೆ ಬರುತ್ತಿದೆ. ಈ ಕಾರಣ ಜಿಲ್ಲೆಯ ಹಲವಾರು ಕಡೆಗಳಲ್ಲಿ ಮರಗಳು ನೆಲಕ್ಕುರುಳುತ್ತಿದ್ದು, ಚಾಮುಂಡಿ ಬೆಟ್ಟದ ನಂದಿ ಮಾರ್ಗದಲ್ಲಿ ಭೂ ಕುಸಿತವಾಗಿರುವ ಘಟನೆ ನಡೆದಿದೆ.
ಈ ಹಿಂದೆಯೂ ಮಳೆಯಿಂದಾಗಿ ರಸ್ತೆ ಕುಸಿದಿತ್ತು. ಇದೀಗ ವೀಕ್ಷಣಾ ಗೋಪುರ ಪಕ್ಕದ ರಸ್ತೆ ಕುಸಿದಿದೆ. ಒಂದೆಡೆ ರಸ್ತೆ ಕಾಮಗಾರಿ ನಡೆಯುತ್ತಿದ್ದರೆ ಮತ್ತೊಂದೆಡೆ ರಸ್ತೆ ಕುಸಿಯುತ್ತಿದ್ದು, ರಸ್ತೆಗಳು ಬಿರುಕು ಬಿಟ್ಟಿರುವ ಕಾರಣ ಮಳೆಯಿಂದ ಮತ್ತಷ್ಟು ರಸ್ತೆಗಳು ಕುಸಿಯುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಲಾಗುತ್ತಿದೆ.