Wednesday, June 19, 2024

ಸತ್ಯ | ನ್ಯಾಯ |ಧರ್ಮ

ಮೈಸೂರಿನಲ್ಲಿ ತಾತ್ಕಾಲಿಕವಾಗಿ ಮುಂದೂಡಿದ ʼಯೋಗಥಾನ್‌ʼ

ಮೈಸೂರು : ಸೆಪ್ಟಂಬರ್‌ 17ರಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯವರು ಸೇರಿ ಹಮ್ಮಿಕೊಂಡಿದ್ದ ʼಯೋಗಥಾನ್‌ʼ ಕಾರ್ಯಕ್ರಮವನ್ನು ಮೈಸೂರು ಜಿಲ್ಲೆಯಲ್ಲಿ ತಾತ್ಕಾಲಿಕವಾಗಿ ಮುಂದೂಡಿಕೆ ಮಾಡಿದ್ದಾರೆ.

ಕೇಂದ್ರ ಸರ್ಕಾರದ ಆಯುಷ್‌ ಮಂತ್ರಾಲಯದ ಸಹಯೋಗದೊಂದಿಗೆ ಕರ್ನಾಟಕದ 21 ಜಿಲ್ಲೆಗಳ ಒಟ್ಟು 5 ಲಕ್ಷ ಜನರು ಏಕಕಾಲದಲ್ಲಿ ಯೋಗದ ಅಭ್ಯಾಸವನ್ನು ಮಾಡುವ ʼಯೋಗಥಾನ್‌ʼ ಕಾರ್ಯಕ್ರಮವನ್ನು ಸೆಪ್ಟಂಬರ್‌ 17ರಂದು ಹಮ್ಮಿಕೊಳ್ಳಲಾಗಿದೆ. ಆದರೆ ರಾಜ್ಯದ ಮೈಸೂರಿನಲ್ಲಿ ಈ ಕಾರ್ಯಕ್ರಮವನ್ನು ಮುಂದೂಡಿದ್ದಾರೆ.

ವಿಶ್ವವಿದ್ಯಾಲಯ ಮತ್ತು ಕಾಲೇಜುಗಳಲ್ಲಿ ನಡೆಯುತ್ತಿರುವ ಪರೀಕ್ಷೆಗಳು, ವಿಧಾನ ಮಂಡಲ ಅಧಿವೇಶನ,  ಭಾರೀ ಮಳೆಯಾಗುವ ಸಾಧ್ಯತೆ ಹೆಚ್ಚು ಇರುವುದರಿದ ಈ ಎಲ್ಲದರ ಕುರಿತು ಯೋಚಿಸಿ ನಾಳೆ ನಡೆಯಬೇಕಿರುವ ಯೋಗನಾಥ್ ಬಗ್ಗೆ ಈ ನಿರ್ಧಾರವನ್ನು ಕೈಗೊಂಡಿದ್ದಾರೆ.

ಈ ಹಿನ್ನಲೆಯಲ್ಲಿ 2022ರ ಯೋಗಥಾನ್‌ ಕಾರ್ಯಕ್ರಮಕ್ಕೆ ನೋಂದಣಿ ಮಾಡಿಕೊಂಡಿದ್ದ ಎಲ್ಲಾ ಶಾಲಾ- ಕಾಲೇಜುಗಳ ವಿದ್ಯಾರ್ಥಿಗಳು, ತರಬೇತುದಾರರು, ಯೋಗ ಸಂಸ್ಥೆಗಳು ಯೋಗಭ್ಯಾಸವನ್ನು ಮುಂದುವರೆಸಿಕೊಂಡು ಮುಂದೂಡಿಕೆಯಾದ ದಿನಕ್ಕೆ ಎಲ್ಲರೂ ಬಂದು ಗಿನ್ನಿಸ್‌ ವಿಶ್ವದಾಖಲೆಯಾಗುವ ಯೋಗಥಾನ್‌ ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Related Articles

ಇತ್ತೀಚಿನ ಸುದ್ದಿಗಳು