Wednesday, June 26, 2024

ಸತ್ಯ | ನ್ಯಾಯ |ಧರ್ಮ

ಮೈಸೂರು ದಸರಾಗೆ 5,485 ಪೊಲೀಸರ ನಿಯೋಜನೆ

ಮೈಸೂರು: ವಿಶ್ವವಿಕ್ಯಾತ ಮೈಸೂರು ದಸರಾದ ಜಂಬುಸವಾರಿಯಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದೇ ಇರುವಂತೆ ಎಚ್ಚರವಹಿಸಲು 5,485 ಪೊಲೀಸರನ್ನು ನಿಯೋಜಿಸಲಾಗಿದೆ.

ಪೊಲೀಸರ ಜೊತೆಗೆ ಹೆಚ್ಚಿನ ಕಣ್ಗಾವಲಿಗೆ ನಗರದ ವಿವಿಧೆಡೆ ಸಾರ್ವಜನಿಕರು ಅಳವಡಿಸಿಕೊಂಡಿರುವ 13,140 ಸಿಸಿ ಟಿವಿ ಕ್ಯಾಮೆರಾಗಳಿವೆ. ಅವುಗಳೊಂದಿಗೆ ಹೆಚ್ಚುವರಿಯಾಗಿ ಮೈಸೂರು ಅರಮನೆ, ಬನ್ನಿಮಂಟಪದ ಮೈದಾನವರೆಗಿನ ಮೆರವಣಿಗೆ ಮಾರ್ಗ ಮತ್ತು ಇತರ ಪ್ರಮುಖ ಸ್ಥಳಗಳಲ್ಲಿ 110 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಇವುಗಳು ದಿನದ 24 ಗಂಟೆಯೂ ರೆಕಾರ್ಡ್ ಮಾಡುವ ವ್ಯವಸ್ಥೆಯನ್ನು ಮಾಡಲಾಗಿದೆ.

ಅರಮನೆ ಸುತ್ತಮುತ್ತ ಮತ್ತು ಪೊಲೀಸ್ ಸರ್ಪಗಾವಲು ಇರಲಿದೆ. ಮೊಬೈಲ್ ಕಮಾಂಡ್ ಸೆಂಟರ್ ವಾಹನವನ್ನೂ ಸಹ ಬಳಸಲಾಗುತ್ತಿದೆ.

ಅರಮನೆ ಮತ್ತು ಬನ್ನಿಮಂಟಪದ ಎಲ್ಲ ಪ್ರವೇಶ ದ್ವಾರಗಳಲ್ಲಿ ಕರ್ತವ್ಯ ನಿರ್ವಹಿಸುವ ಅಧಿಕಾರಿಗಳಿಗೆ ಬಾಡಿವೋರ್ನ್ ಕ್ಯಾಮೆರಾ ನೀಡಲಾಗಿದೆ. ಅವು, ದೂರದಿಂದ ವಿಡಿಯೊ ಆಗುವ ಮತ್ತು ಫೋಟೊ ತೆಗೆಯುವ ವ್ಯವಸ್ಥೆ ಹೊಂದಿವೆ.

‘ಕಾನೂನು-ಸುವ್ಯವಸ್ಥೆ ಕಾಪಾಡಲು ಅಗತ್ಯವಾದ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಸಾರ್ವಜನಿಕರಿಗೆ ನೆರವಾಗಲು ಅಲ್ಲಲ್ಲಿ ಪೊಲೀಸ್ ಸಹಾಯ ಕೇಂದ್ರಗಳನ್ನು ಸ್ಥಾಪಿಸಲಾಗಿದೆ’ ಎಂದು ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ತಿಳಿಸಿದ್ದಾರೆ.

🔸 ಪೀಪಲ್‌ ಗ್ರೂಪ್‌ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
https://chat.whatsapp.com/G94DLKaJrsBH07M7DvkqRo

ಇದನ್ನೂ ಓದಿ: ‘ಐಶ್ವರ್ಯ ರೈ’ ಹೋಲುವ 6 ಸುಂದರಿಯರು

ಪ್ರಪಂಚದಲ್ಲಿ ಒಬ್ಬರನ್ನು ಹೋಲುವ ಏಳು ವ್ಯಕ್ತಿಗಳು ಇರುತ್ತಾರೆ ಎಂದು ಹೇಳುವ ಮಾತನ್ನು ನೀವೆಲ್ಲರೂ ಕೇಳಿಯೇ ಇರುತ್ತೀರಿ. ಇದು ಖ್ಯಾತ ಸೆಲೆಬ್ರಿಟಿಗಳ ವಿಷಯದಲ್ಲೂ ಸಾಧ್ಯ ಆಗಬಹುದು ಅನ್ನಿಸಿದ್ದು ಈ ಸುಂದರಿಯರನ್ನು ನೋಡಿದಾಗ. ಬಾಲಿವುಡ್‌ನ ಅಪ್ರತಿಮ ನಟಿ, ಸೌಂದರ್ಯದ ಗಣಿ, 1994ರ ವಿಶ್ವ ಸುಂದರಿ, ಐಶ್ವರ್ಯಾ ರೈ ಬಚ್ಚನ್ ಅವರನ್ನೇ ಹೋಲುವ ಕೆಲವು ಚೆಲುವೆಯರ ಪರಿಚಯ ನಿಮಗಾಗಿ ನಿಮ್ಮ ಪೀಪಲ್ ಮೀಡಿಯಾದಲ್ಲಿ…

ಪೀಪಲ್‌ ಮೀಡಿಯಾ ವಿಶೇಷ
https://peepalmedia.com/aishvaryarai-holuva-6-sundariyaru/

🔸 ಪೀಪಲ್‌ ಗ್ರೂಪ್‌ ಸೇರಲು ಈ ಲಿಂಕ್ ಕ್ಲಿಕ್ ಮಾಡಿ
https://chat.whatsapp.com/G94DLKaJrsBH07M7DvkqRo

Related Articles

ಇತ್ತೀಚಿನ ಸುದ್ದಿಗಳು