Tuesday, July 29, 2025

ಸತ್ಯ | ನ್ಯಾಯ |ಧರ್ಮ

ನಾಗರ ಪಂಚಮಿಯನ್ನು ಮೌಢ್ಯಮುಕ್ತವಾಗಿಸಿ ಬಸವ ಪಂಚಮಿಯನ್ನಾಗಿ ವಿಶಿಷ್ಟವಾಗಿ ಆಚರಿಸಿದ ಮಾನವ ಬಂಧುತ್ವ ವೇದಿಕೆ

ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿ ಹೊಳಿಯವರ ಪ್ರೇರಣೆಯಿಂದ ಮಾನವ ಬಂಧುತ್ವ ವೇದಿಕೆಯವರು ಮುನ್ನಡೆಸಿಕೊಂಡು ಬರುತ್ತಿದ್ದು ಈ ಬಾರಿ ನಾಗರ ಪಂಚಮಿಯನ್ನು ಬಸವ ಪಂಚಮಿಯನ್ನಾಗಿ ಆಚರಿಸಿದ್ದಾರೆ. ಸಚಿವ ಸತೀಶ್ ಜಾರಕಿಹೊಳಿ ಅಭಿಮಾನಿಗಳಾದ ಶೀನಿಧಿ ಶ್ರೀನಿವಾಸ್ ಮತ್ತು ಅವರ ಸ್ನೇಹಿತರು ಪ್ರತಿ ವರ್ಷದಂತೆ ಈ ವರ್ಷವೂ ವಿಶಿಷ್ಟವಾಗಿ ಆಚರಿಸಿದ್ದಾರೆ.

ಹಾಲನ್ನು ಕುಡಿಯದ ಹಾವಿನ ಹುತ್ತಕ್ಕೆ ಹಾಲು ಹಾಕಿ ವ್ಯರ್ಥ ಮಾಡುವುದಕ್ಕಿಂತ ಅದನ್ನು ಅನಾಥ ಮಕ್ಕಳಿಗೆ ಕೊಟ್ಟು ಅವರ ಹಸಿವು ನೀಗಿಸಬಹುದು ಎಂಬ ಹಿನ್ನೆಲೆಯಲ್ಲಿ ಇಂದು ನಂದಾದೀಪ ಬುದ್ಧಿಮಾಂದ್ಯ ಆಶ್ರಮದಲ್ಲಿ ಮಕ್ಕಳಿಗೆ ಹಾಲು ಮತ್ತು ಬಿಸ್ಕತ್ತು ನೀಡುವುದರ ಮೂಲಕ ನಡೆಸಲಾಯಿತು.

ಹಾವಿನ ಹುತ್ತಕ್ಕೆ ಹಾಲೆರೆಯುವಂತಹ ಹಿಂದು ಧರ್ಮದ ಮೌಢ್ಯ ಆಚರಣೆಯನ್ನು ಧಿಕ್ಕರಿಸಿ ವೈಚಾರಿಕವಾಗಿ, ಪ್ರಜ್ಞಾಪೂರ್ವಕವಾಗಿ ಜನಗಳಿಗೆ ವಿಚಾರವಂತಿಕೆ ಕೊಡಲು ನಾಗರ ಪಂಚಮಿಯನ್ನು ಬಸವ ಪಂಚಮಿಯನ್ನಾಗಿ ಆಚರಿಸಲಾಗುತ್ತಿದೆ ಎಂದು ಶ್ರೀನಿಧಿ ಶ್ರೀನಿವಾಸ ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ  ಮಾಜಿ ಪುರಸಭಾ ಸದಸ್ಯರಾದ ಎ. ಅಶ್ವತ್ಥರೆಡ್ಡಿ, ದಸಂಸ ಕಲಾಮಂಡಳಿಯ ಸಂಚಾಲಕರಾದ ಶ್ರೀನಿವಾಸ್ ಮತ್ತು ಭಾರತಿ ಎನ್ ಹಾಗೂ ಕೋಕಿಲ, ಕವನ ಮುಂತಾದವರು ಭಾಗವಹಿಸಿ ಯಶಸ್ವಿ ಮಾಡಿದರು.

Related Articles

ಇತ್ತೀಚಿನ ಸುದ್ದಿಗಳು

You cannot copy content of this page