Wednesday, July 30, 2025

ಸತ್ಯ | ನ್ಯಾಯ |ಧರ್ಮ

ಶಾಸಕರುಗಳಿಗೆ ನಾಗ್ತಿಹಳ್ಳಿ ಮೇಷ್ಟ್ರ ಪಾಠ!

ಮೊನ್ನೆ ಮೊನ್ನೆಯಷ್ಟೇ ರಾಜ್ಯ ಸಭಾ ಸದಸ್ಯ ಹಾಗೂ ಚಿತ್ರ ನಟ ಜಗ್ಗೇಶ್‌ ಅವರಿಗೆ ಕನ್ನಡ ಪಾಠ ಮಾಡಿ ಸುದ್ದಿಯಾಗಿದ್ದ ನಾಗತಿಹಳ್ಳಿ ಚಂದ್ರಶೇಖರ್‌ ಅವರು ಈಗ ಶಾಸಕ, ಮಂತ್ರಿಗಳಿಗೆ ಪಾಠ ಹೇಳುವ ಮೂಲಕ ಸುದ್ದಿಯಾಗಿದ್ದಾರೆ.

ಮೊನ್ನೆ ಸಿದ್ಧರಾಮಯ್ಯನವರು ಕಳೆದ ಐದು ವರ್ಷಗಳಿಂದ ಮುಚ್ಚಲ್ಪಟ್ಟಿದ್ದ ವಿಧಾನಸೌಧದ ಮುಖ್ಯಮಂತ್ರಿ ಕಚೇರಿ ಬಾಗಿಲು ತೆರೆಯಿಸಿ ಅದರ ಮೂಲಕ ಹೋಗಿ ಬಂದು ತಮ್ಮ ವೈಚಾರಿಕತೆಯನ್ನು ಕಾರ್ಯದಲ್ಲೂ ತೋರಿಸಿದ್ದರು (ವಿಧಾನಸೌಧ: ವೈಚಾರಿಕತೆಯ ಬಾಗಿಲು ತೆರೆದ ಸಿದ್ಧರಾಮಯ್ಯ)

ಅವರ ನಡೆ ಈಗ ನಾಗತಿಹಳ್ಳಿಯವರ ಮೆಚ್ಚುಗೆಗೂ ಪಾತ್ರವಾಗಿದ್ದು ಅವರು ಮುಖ್ಯಮಂತ್ರಿಗಳ ಈ ನಡೆಯನ್ನು ಮೆಚ್ಚಿ ಟ್ವೀಟ್‌ ಮಾಡಿದ್ದಾರೆ

ಅವರು ತಮ್ಮ ಟ್ವೀಟಿನಲ್ಲಿ “ಇದೊಂದು ಸಣ್ಣಘಟನೆ ಎಂದು ಪರಿಗಣಿಸಬಾರದು.ಜನ ತಮ್ಮ ಖಾಸಗಿ ನಂಬಿಕೆಗಳನ್ನು ಅವರ ಮನೆಯೊಳಗೆ ಹೇಗಾದರೂ ಆಚರಿಸಿಕೊಳ್ಳಲಿ.ವಿಧಾನಸೌಧದಲ್ಲಿ ಮುಖ್ಯಮಂತ್ರಿಗಳ ವಾಸ್ತು ವಿರೋಧಿ ನಡೆ ಅವರೆಲ್ಲ ಮಂತ್ರಿಗಳಿಗೂ ಅಧಿಕಾರಿಗಳಿಗೂ & ಸರ್ಕಾರೀ ಕಛೇರಿಗಳಿಗೂ ಮಾದರಿಯಾಗಲಿ. ಒಳ್ಳೆಯ ಗಾಳಿ,ಬೆಳಕು & ಹೃದಯ ನಿಜವಾದ ವಾಸ್ತು. ವಿಜ್ಞಾನದ ಎಲ್ಲ ಬಾಗಿಲುಗಳೂ ತೆರೆಯಲಿ.” ಎಂದಿದ್ದಾರೆ.

https://twitter.com/NomadChandru/status/1672800577112375296?t=gURckYzO6MWFeCPcxbfSJg&s=19

Related Articles

ಇತ್ತೀಚಿನ ಸುದ್ದಿಗಳು

You cannot copy content of this page