Sunday, June 16, 2024

ಸತ್ಯ | ನ್ಯಾಯ |ಧರ್ಮ

ನಂಬಿ ನಾರಾಯಣನ್‌ ಬೇಹುಗಾರಿಗೆ ಪ್ರಕರಣ : ನಾಲ್ವರು ಆರೋಪಿಗಳಿಗೆ ಜಾಮೀನು ರದ್ದು

ಕೇರಳ: ವಿಜ್ಞಾನಿ ನಂಬಿ ನಾರಾಯಣನ್‌  ಅವರನ್ನು ದೇಶದ್ರೋಹಿ ಎಂಬ ಆರೋಪದಡಿ ಸಿಲುಕಿಸಿದ್ದ ನಾಲ್ವರು ಆರೋಪಿಗಳಿಗೆ ಸುಪ್ರೀಂ ಕೋರ್ಟ್‌ ಬಂಧನ ಪೂರ್ವ ಜಾಮೀನು ರದ್ದು ಮಾಡಿದೆ.

1994 ರ ಇಸ್ರೋ ಬೇಹುಗಾರಿಗೆ ಪ್ರಕರಣದಲ್ಲಿ ವಿಜ್ಞಾನಿ ನಂಬಿ ನಾರಾಯಣನ್ ಅವರ ಕೈವಾಡವಿದೆ ಎಂಬ ಆರೋಪದ ಪ್ರಕರಣದಲ್ಲಿ ಅರೋಪಿಗಳಾಗಿದ್ದ ಮಾಜಿ ಪೊಲೀಸ್‌ ಮಹಾನಿರ್ದೇಶಕ(ಡಿಜಿಪಿ) ಸೇರಿದಂತೆ ನಾಲ್ವರು ಪೊಲೀಸ್‌ ಅಧಿಕಾರಿಗಳಿಗೆ ನೀಡಲಾಗಿದ್ದ ನಿರೀಕ್ಷಣಾ ಜಾಮೀನನ್ನು ಸುಪ್ರೀಂ ಕೋರ್ಟ್‌ ಶುಕ್ರವಾರದಂದು ರದ್ದುಗೊಳಿಸಿದೆ.

ಇಸ್ರೋದ ಕ್ರಯೋಜನಿಕ್‌ ಎಂಜಿನ್‌ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತಿದ್ದ ನಂಬಿ ನಾರಾಯಣ್‌ ಅವರು 1994ರಲ್ಲಿ ರಕ್ಷಣಾ ವಲಯದ ರಹಸ್ಯಗಳನ್ನು ಮಾಲ್ಡೀವ್ಸ್‌ನ ಮರಿಯಂ ರಶೀದಾ ಮತ್ತು ಫೌಜಿಯಾ ಹಸನ್‌ ಅವರಿಗೆ ಮಾರಟ ಮಾಡಿದ ಆರೋಪದಡಿ ಅವರನ್ನು ಬಂಧಿಸಲಾಗಿತ್ತು. ಕ್ರಯೋಜೆನಿಕ್‌ ಎಂಜಿನ್‌ ಯೋಜನೆಯ ಉಪನಿರ್ದೇಶಕರಾಗಿದ್ದ ಶಶಿಕುಮಾರ್‌ ಅವರ ಹೆಸರು ಮರಿಯಂ ಅವರ ಡೈರಿಯಲ್ಲಿ ಕಾಣಿಸಿಕೊಂಡಿತ್ತು ಎಂದು ತನಿಖೆಯ ವೇಳೆ ಪೊಲೀಸರು ಹೇಳಿದ್ದರು, ಆದರೆ ನಾರಾಯಣ್‌ ಅವರನ್ನು ಯಾವುದೇ ಆಧಾರವಿಲ್ಲದೆ ಆರೋಪಿಯಾಗಿ ಬಂಧಿಸಲಾಗಿದೆ ಎಂದು 1996ರಲ್ಲಿ ಸಿಬಿಐ ಪೊಲೀಸರು ಹೇಳಿದ್ದರು. ಕೊನೆಗೆ 1998 ರಲ್ಲಿ ಸುಪ್ರೀಂ ಕೋರ್ಟ್‌ ಈ ಪ್ರಕರಣವನ್ನೇ ವಜಾ ಮಾಡಿತ್ತು.

ನಂತರ ಧ್ವನಿ ಎತ್ತಿದ  ನಂಬಿ ನಾರಾಯಣನ್ ತಮ್ಮ ಮೇಲೆ ಸುಳ್ಳು ಆರೋಪ ಮಾಡಿದ್ದಕ್ಕಾಗಿ ತಮಗಾದ ಮಾನನಷ್ಟಕ್ಕೆ ಪರಿಹಾರ ಕೋರಿ ಕಾನೂನಿನ ಮೊರೆ ಹೋಗಿದ್ದಲ್ಲದೆ ಯಾವುದೇ ಆಧಾರವಿಲ್ಲದೆ ಸುಳ್ಳು ಆರೋಪ ವಹಿಸಿ ಬಂಧಿಸಿದ ನಾಲ್ವರು ಪೊಲೀಸರಿಗೆ ಶಿಕ್ಷೆ ವಿಧಿಸುವಂತೆ ಮನವಿ ಮಾಡಿದ್ದರು.

ನಂತರ ಸುಪ್ರೀಂ ಕೋರ್ಟ್‌ ಆದೇಶದಂತೆ 2018 ರಲ್ಲಿ ನಾರಾಯಣನ್‌ ಅವರಿಗೆ 50 ಲಕ್ಷ.ರೂ ಮತ್ತು ರಾಷ್ಟೀಯ ಮಾನವ ಹಕ್ಕುಗಳ ಆಯೋಗದ ಶಿಫಾರಸ್ಸಿನಂತೆ ಅವರಿಗೆ 10 ಲಕ್ಷ.ರೂ ನೀಡಲಾಗಿತ್ತು.

ಇಸ್ರೊ ವಿಜ್ಞಾನಿ ನಂಬಿ ನಾರಾಯಣ್‌ ಅವರನ್ನು ಒಳಗೊಂಡ ಪಿತೂರಿ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡುವಂತೆ  ಕೇರಳ ಹೈಕೋರ್ಟ್‌ ಆದೇಶಿಸಿದ್ದು. ಈ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿದ್ದ ಮೇಲ್ಮನವಿಗೆ ಸಂಬಂಧಿಸಿದ ತೀರ್ಪನ್ನು ಸುಪ್ರಿಂ ಕೋರ್ಟ್‌ ಇಂದು ಪ್ರಕಟಿಸಿದ್ದು, ಆರೋಪಿಗಳಿಗೆ ಬಂಧನ ಪೂರ್ವ ಜಾಮೀನು ರದ್ದು ಮಾಡಿದೆ.

ಆರೋಪಿಗಳ ನಿರೀಕ್ಷಣಾ ಜಾಮೀನು ಅರ್ಜಿಗಳನ್ನು ಪ್ರತ್ಯೇಕವಾಗಿ ಪರಿಗಣಿಸಲು ನ್ಯಾಯಾಲಯವು ಈ ಪ್ರಕರಣವನ್ನು ಕೇರಳ ಹೈಕೋರ್ಟ್‌ಗೆ ಹಿಂತಿರುಗಿಸಿದೆ.

ನ್ಯಾ.ಎಂ. ಆರ್‌ ಷಾ ಮತ್ತು ಸಿ.ಟಿ ರವಿಕುಮಾರ್‌ ಅವರಿದ್ದ ಪೀಠವು ಇಂದು ತೀರ್ಪು ನೀಡಿದ್ದು, ನಾಲ್ವರು ಆರೋಪಿಗಳನ್ನು ಐದು ವಾರಗಳವರೆಗೆ ಬಂಧಿಸದಂತೆ ಸಿಬಿಐಗೆ ಸೂಚಿಸಿದೆ.

Related Articles

ಇತ್ತೀಚಿನ ಸುದ್ದಿಗಳು