ಮುಂಬೈ: ಬಿಜೆಪಿ ಆಡಳಿತವಿರುವ ರಾಜ್ಯಗಳಲ್ಲಿ ರೈತರ ಸ್ಥಿತಿ ಹದಗೆಟ್ಟಿದೆ. ಮಹಾರಾಷ್ಟ್ರದಲ್ಲಿ ಡಬಲ್ ಇಂಜಿನ್ ಸರ್ಕಾರದ ಅಡಿಯಲ್ಲಿ ರೈತರು ತಮ್ಮ ಸಾಲವನ್ನು ತೀರಿಸಲಾಗದೆ ತಮ್ಮ ಮೂತ್ರಪಿಂಡಗಳನ್ನು ಮಾರಾಟ ಮಾಡಲು ತಯಾರಿ ನಡೆಸುತ್ತಿದ್ದಾರೆ.
ನಾಂದೇಡ್ ಜಿಲ್ಲೆಯ ಕಲೆಕ್ಟರ್ ಕಚೇರಿಯ ಮುಖ್ಯ ಗೇಟಿನಲ್ಲಿ ಕಿಡ್ನಿ ಮಾರಾಟದ ಪೋಸ್ಟರುಗಳು ಈಗ ಚರ್ಚೆಯ ವಿಷಯವಾಗಿದೆ. ಒಂದೇ ಕುಟುಂಬದ ಐವರು ಕಿಡ್ನಿ ಮಾರಲು ಮುಂದಾಗಿರುವುದು ಆ ರಾಜ್ಯದ ರೈತರ ದಯನೀಯ ಸ್ಥಿತಿಯನ್ನು ಬಿಂಬಿಸುತ್ತದೆ.
ಜಿಲ್ಲೆಯ ರೈತ ಕುಟುಂಬವೊಂದು ಸಾಲದ ಸುಳಿಯಲ್ಲಿ ಸಿಲುಕಿದೆ. ಇದರಿಂದ ಒಂದೇ ಕುಟುಂಬದ ತಂದೆ, ಹಿರಿಯ ಮಗ ಹಾಗೂ ಎರಡನೇ ಮಗ ಕೂಡ ಆತ್ಮಹತ್ಯೆಯ ದಾರಿ ಹಿಡಿಯುವಲ್ಲಿದ್ದಾರೆ. ಲೇವಾದೇವಿಗಾರರಿಂದ ಪಡೆದ ಎರಡು ಲಕ್ಷ ರೂಪಾಯಿ ಸಾಲ ತೀರಿಸಲು ಸಾಧ್ಯವಾಗದೆ ಸಂತ್ರಸ್ತ ಕುಟುಂಬಸ್ಥರು ಕಿಡ್ನಿ ಮಾರಲು ಸಿದ್ಧರಾಗಿದ್ದಾರೆ.
ಲೇವಾದೇವಿಗಾರರ ಬೆದರಿಕೆ…
ನಾಂದೇಡ್ ಜಿಲ್ಲೆಯ ಸಿಲ್ಲೋಡ್ ತಾಲೂಕಿನ ಪಿಂಪಲಗಾಂವ್ ಪೇಟೆಯ ಸೋಮನಾಥ ಪಂಡಿತ್ ಭೋಸಲೆ (30) ಎಂಬ ಯುವ ರೈತ ಸಾಲಬಾಧೆಯಿಂದ ಗುರುವಾರ ರಾತ್ರಿ ತನ್ನ ಜಮೀನಿನಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
15 ವರ್ಷಗಳ ಹಿಂದೆ ಸೋಮನಾಥ್ ಅವರ ತಂದೆ ಪಂಡಿತ್ ಮಾಣಿಕ್ ರಾವ್ ಬೋಸ್ ಮತ್ತು 20119ರಲ್ಲಿ ಸೋಮನಾಥ್ ಅವರ ಅಣ್ಣ ಗಜಾನನ್ ಮಾಣಿಕ್ ರಾವ್ ಬೋಸ್ ಆತ್ಮಹತ್ಯೆ ಮಾಡಿಕೊಂಡಿದ್ದರು. ತಂದೆ ಮತ್ತು ಅಣ್ಣಂದಿರ ಆತ್ಮಹತ್ಯೆಯ ನಂತರ ಕುಟುಂಬದ ಹೊರೆ ಸೋಮನಾಥ ಅವರ ಮೇಲೆ ಬಿದ್ದು ಸಾಲಗಳು ಬೆಟ್ಟದಷ್ಟು ಏರಿದ ಕಾರಣ ಸೋಮನಾಥ ಪಂಡಿತ ಭೋಸಲೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈಗ ಸಂತ್ರಸ್ತ ಕುಟುಂಬಸ್ಥರು ಕಿಡ್ನಿ ಮಾರಲು ಮುಂದಾಗಿದ್ದಾರೆ.