Monday, July 28, 2025

ಸತ್ಯ | ನ್ಯಾಯ |ಧರ್ಮ

ನರಬಲಿ ಪ್ರಕರಣ : ಜಾಮೀನು ಕೋರಿ ಹೈಕೋರ್ಟ್‌ ಮೆಟ್ಟಿಲೇರಿದ ಆರೋಪಿಗಳು

ಕೇರಳ : ಕೇರಳದಲ್ಲಿ ನಡೆದಿರುವ ನರ ಬಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್‌ ಅವರು 12 ದಿನ ಪೊಲೀಸ್‌ ಕಸ್ಟಡಿಗೆ ನೀಡಿರುವುದನ್ನು ಪ್ರಶ್ನಿಸಿ ಮೂವರು ಆರೋಪಿಗಳು ಕೇರಳ ಹೈಕೋರ್ಟ್‌ ಕದ ತಟ್ಟಿದ್ದಾರೆ.

ಕೇರಳದಲ್ಲಿ ದಂಪತಿಗಳು ತಮ್ಮ ಕುಟುಂಬದ ಸಂಪತ್ತು ಅಭಿವೃದ್ಧಿ ಮಾಡಿಕೊಳ್ಳಲು ʼನರಬಲಿʼ ನೀಡುವ ಧಾರ್ಮಿಕ ಕ್ರಿಯೆ ನಡೆಸಿರುವ ಘಟನೆ ರಾಜ್ಯದ ಪತ್ತನಂತಿಟ್ಟದ ಎಳಂತೂರು ಗ್ರಾಮದಲ್ಲಿ ನಡೆದಿತ್ತು. ಅಮಾಯಕ ಮಹಿಳೆಯರನ್ನು ವಂಚಿಸಿ ಬಲಿ ನೀಡುತ್ತಿದ್ದ ಮೂವರು ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿತ್ತು. ಇದೀಗ ಎರ್ನಾಕುಲಂ ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವು ನರಬಲಿ ಪಡೆದ ಮೂರೂ ಜನರನ್ನು ಅಕ್ಟೋಬರ್‌ 24 ರವರೆಗೆ 12 ದಿನಗಳ ಕಾಲ ಪೊಲೀಸ್‌ ಕಸ್ಟಡಿಗೆ ಕಳುಹಿಸಿದೆ.

ಅಕ್ಟೋಬರ್‌ 13ರಂದು ಮೊಹಮ್ಮದ್‌ ಶಫಿ, ಭಗವಾಲ್‌ ಸಿಂಗ್‌ ಮತ್ತು ಲೈಲಾ ಭಗವಾಲ್‌ ಸಿಂಗ್‌ ಅವರನ್ನು ಪ್ರಥಮ ದರ್ಜೆ ಮ್ಯಾಜಿಸ್ಟ್ರೇಟ್‌ ಅವರು 12 ದಿನ ಪೊಲೀಸ್‌ ಕಸ್ಟಡಿಗೆ ನೀಡಿದ್ದರು. ಇದಕ್ಕೂ ಮುನ್ನ, ಅದೇ ನ್ಯಾಯಾಲಯವು ಆರೋಪಿಗಳನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ನೀಡಿತ್ತು. ಆರೋಪಿಗಳ ಪೊಲೀಸ್‌ ಕಸ್ಟಡಿಯು ಅಕ್ಟೋಬರ್‌ 24ರಂದು ಅಂತ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ಜಾಮೀನು ಕೋರಿ ಆರೋಪಿಗಳು ಕೇರಳದ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page