Monday, October 13, 2025

ಸತ್ಯ | ನ್ಯಾಯ |ಧರ್ಮ

ಪ್ರಧಾನಿ ಮೋದಿಗೆ ಡೊಮಿನಿಕಾ ದೇಶದ ಅತ್ಯುನ್ನತ ಪ್ರಶಸ್ತಿ

ಸ್ಯಾಂಟೊ ಡೊಮಿಂಗೊ: ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಮತ್ತೊಂದು ಗೌರವ ಲಭಿಸಿದೆ. ಕೆರಿಬಿಯನ್ ರಾಷ್ಟ್ರವಾದ ಕಾಮನ್‌ವೆಲ್ತ್ ಆಫ್ ಡೊಮಿನಿಕಾ ಅವರಿಗೆ ತಮ್ಮ ದೇಶದ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿತು.

ವಿದೇಶ ಪ್ರವಾಸದಲ್ಲಿರುವ ಪ್ರಧಾನಿ ಮೋದಿ ಗಯಾನಾಗೆ ಆಗಮಿಸಿದ್ದಾರೆ. ಅಲ್ಲಿ ಅವರನ್ನು ಡೊಮಿನಿಕಾ ಅಧ್ಯಕ್ಷ ಸಿಲ್ವಾನಿ ಬರ್ಟನ್ ಭೇಟಿಯಾದರು.

ಈ ಸಂದರ್ಭದಲ್ಲಿ ಡೊಮಿನಿಕಾ ಅಧ್ಯಕ್ಷೆ ಸಿಲ್ವಾನಿ ಬರ್ಟನ್ ಅವರು ಮೋದಿಯವರಿಗೆ ‘ಡೊಮಿನಿಕಾ ಅವಾರ್ಡ್ ಆಫ್ ಆನರ್’ ನೀಡಿ ಗೌರವಿಸಿದರು. ಈ ಸಂದರ್ಭದಲ್ಲಿ, ಕರೋನಾ ಸಮಯದಲ್ಲಿ ತಮ್ಮ ದೇಶಕ್ಕೆ ಮೋದಿ ನೇತೃತ್ವದ ಭಾರತ ನೀಡಿದ ಕೊಡುಗೆಯನ್ನು ಬರ್ಟನ್ ಶ್ಲಾಘಿಸಿದರು.

ಈ ಪ್ರಶಸ್ತಿಯನ್ನು ಭಾರತೀಯ ಸಹೋದರ ಸಹೋದರಿಯರಿಗೆ ಅರ್ಪಿಸುತ್ತಿದ್ದೇನೆ ಎಂದು ಮೋದಿ ಹೇಳಿದ್ದಾರೆ. ಮತ್ತೊಂದೆಡೆ, ಮೋದಿ ಜಾರ್ಜ್‌ಟೌನ್‌ನಲ್ಲಿ ಡೊಮಿನಿಕಾ ಪ್ರಧಾನಿ ರೋಜ್ವೆ ಸ್ಕೆರಿಟ್ ಅವರೊಂದಿಗೆ ವಿಶೇಷ ಸಭೆ ನಡೆಸಿದರು ಮತ್ತು ದ್ವಿಪಕ್ಷೀಯ ಒಪ್ಪಂದಗಳ ಕುರಿತು ಚರ್ಚಿಸಿದರು. 1981ರಿಂದ, ಈ ಎರಡು ದೇಶಗಳ ನಡುವೆ ಉತ್ತಮ ಬಾಂಧವ್ಯ ಮುಂದುವರೆದಿದೆ. 2019ರಲ್ಲಿ ಮೋದಿ-ಸ್ಕೆರಿಟ್ ನ್ಯೂಯಾರ್ಕ್‌ನಲ್ಲಿ ಇಂಡಿ-ಕ್ಯಾರಿಕಾಮ್‌ನ ಭಾಗವಾಗಿ ಭೇಟಿಯಾಗಿದ್ದರು. ಕರೋನಾ ಸಮಯದಲ್ಲಿ ಭಾರತವೂ ಈ ದೇಶಕ್ಕೆ ಲಸಿಕೆಯನ್ನು ನೀಡಿದೆ.

Related Articles

ಇತ್ತೀಚಿನ ಸುದ್ದಿಗಳು

You cannot copy content of this page