Home ದೇಶ ನರೇಂದ್ರ ಮೋದಿ ಕ್ರೀಡಾಂಗಣಕ್ಕೆ ಇ-ಮೇಲ್ ಬೆದರಿಕೆ: ಆರೋಪಿ ಬಂಧನ

ನರೇಂದ್ರ ಮೋದಿ ಕ್ರೀಡಾಂಗಣಕ್ಕೆ ಇ-ಮೇಲ್ ಬೆದರಿಕೆ: ಆರೋಪಿ ಬಂಧನ

0

ಅಹಮದಾಬಾದ್: ಭಾರತದಲ್ಲಿ ಕೆಲವು ದಿನಗಳಿಂದ ಏಕದಿನ ಕ್ರಿಕೆಟ್ ವಿಶ್ವಕಪ್ ನಡೆಯುತ್ತಿದೆ. ಇದರ ಭಾಗವಾಗಿ ಅಹಮದಾಬಾದ್ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಹಲವು ಮಹತ್ವದ ಪಂದ್ಯಗಳು ನಡೆಯುತ್ತಿವೆ.

ಈ ನಡುವೆ ಕ್ರೀಡಾಂಗಣದ ಮೇಲೆ ದಾಳಿ ನಡೆಸುವುದಾಗಿ ಬೆದರಿಕೆ ಇ-ಮೇಲ್ ಬಂದಿತ್ತು. ಈ ಬಗ್ಗೆ ತನಿಖೆ ನಡೆಸಿದ ಅಧಿಕಾರಿಗಳು ಓರ್ವನನ್ನು ಬಂಧಿಸಿದ್ದಾರೆ.

ದೇಶದ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂ ಅಹಮದಾಬಾದ್ ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಅಕ್ಟೋಬರ್ 14ರಂದು ಬ ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ನಡೆಯಲಿದೆ. ಇದರಿಂದಾಗಿ ಅಲ್ಲಿ ದೊಡ್ಡ ಮಟ್ಟದಲ್ಲಿ ಭದ್ರತೆ ಏರ್ಪಡಿಸಲಾಗುತ್ತಿದೆ.

ಇದೆಲ್ಲದರ ಮಧ್ಯೆ ಕ್ರೀಡಾಂಗಣವನ್ನು ಸ್ಫೋಟಿಸುವುದಾಗಿ ವ್ಯಕ್ತಿಯೊಬ್ಬ ಅಧಿಕಾರಿಗಳಿಗೆ ಇ-ಮೇಲ್ ಕಳುಹಿಸಿದ್ದ. ಇದರಿಂದ ಎಚ್ಚೆತ್ತ ಅಧಿಕಾರಿಗಳು ಆತನನ್ನು ಗುರುತಿಸಿ ಬಂಧಿಸಿದ್ದಾರೆ. ಆರೋಪಿ ಮಧ್ಯಪ್ರದೇಶಕ್ಕೆ ಸೇರಿದವನೆಂದು ಪೊಲೀಸರು ಹೇಳಿದ್ದಾರೆ. ಪ್ರಸ್ತುತ ಆತ ರಾಜ್‌ಕೋಟ್‌ನ ಉಪನಗರದ ನಿವಾಸಿ. ಆತನ ಫೋನ್‌ನಿಂದ ಬೆದರಿಕೆ ಮೇಲ್ ಕಳುಹಿಸಿರುವುದು ಪತ್ತೆಯಾಗಿದೆ. ಆದರೆ, ಈತನಿಗೆ ಯಾವುದೇ ಕ್ರಿಮಿನಲ್ ಇತಿಹಾಸ ಇಲ್ಲ ಎಂದು ಅಹಮದಾಬಾದ್ ಪೊಲೀಸರು ಬಹಿರಂಗಪಡಿಸಿದ್ದಾರೆ. ಆದರೆ ಆರೋಪಿಯ ಹೆಸರು ಬಹಿರಂಗಗೊಂಡಿಲ್ಲ.

ಇದೇ ವೇಳೆ, ಅಕ್ಟೋಬರ್ 14ರಂದು ಭಾರತ-ಪಾಕ್ ಪಂದ್ಯ ನಡೆಯಲಿರುವ ಹಿನ್ನೆಲೆಯಲ್ಲಿ 11 ಸಾವಿರ ಮಂದಿಯೊಂದಿಗೆ ಭದ್ರತಾ ವ್ಯವಸ್ಥೆ ಮಾಡಿರುವುದಾಗಿ ಗುಜರಾತ್ ಪೊಲೀಸರು ಹೇಳಿದ್ದಾರೆ. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಎನ್ ಎಸ್ ಜಿ, ಆರ್ ಎಎಫ್, ಗೃಹ ರಕ್ಷಕ ದಳ ಹಾಗೂ ಇತರೆ ಇಲಾಖೆಗಳ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲಾಗುವುದು ಎಂದು ಪೊಲೀಸ್‌ ಪ್ರಕಟಣೆ ತಿಳಿಸಿದೆ.

You cannot copy content of this page

Exit mobile version