Wednesday, June 26, 2024

ಸತ್ಯ | ನ್ಯಾಯ |ಧರ್ಮ

ನಟಿ ಆಶಾ ಪಾರೇಖ್ ಅವರಿಗೆ  ʼದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿʼ : ಅನುರಾಗ್‌ ಠಾಕೂರ್‌

ದೆಹಲಿ : ಜ್ಯುಬಿಲಿ ಹಿರೋಯಿನ್ ಎಂದೇ ಕರೆಸಿಕೊಳ್ಳುವ ನಟಿ ಆಶಾ ಪಾರೇಖ್‌ಗೆ ʼದಾದಾ ಸಾಹೇಬ್‌ ಫಾಲ್ಕೆ ಪ್ರಶಸ್ತಿʼ ನೀಡಲಾಗುತ್ತಿದೆ ಎಂದು ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ಹೇಳಿದ್ದಾರೆ.

ಹಿಂದಿ ಚಿತ್ರರಂಗದ 60ರಿಂದ70 ದಶಕದ ಜನಪ್ರಿಯ ನಾಯಕನಟಿ ಆಶಾ ಪಾರೇಖ್, ಕನ್ನಡದ ‘ಶರವೇಗದ ಸರದಾರ’ ಎಂಬ ಚಲನಚಿತ್ರ ಸೇರಿದಂತೆ ನೂರಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದು 1995 ರಲ್ಲಿ ನಟನೆಯಿಂದ ದೂರ ಉಳಿದು ಟೆಲಿವಿಷನ್‌ ಧಾರಾವಾಹಿಗಳ ನಿರ್ದೇಶನ ಮತ್ತು ನಿರ್ಮಾಣಕ್ಕೆ ಕೈ ಹಾಕಿದರು. ಪ್ರಸ್ತುತ ನೃತ್ಯ ಅಕಾಡೆಮಿ ʼಕಲಾ ಭವನ್‌ʼ ಸ್ಥಾಪಿಸಿ ನೃತ್ಯದೊಂದಿಗೆ ಸಮಾಜ ಸೇವೆ ಮಾಡುವುದರಲ್ಲಿ ತಮ್ಮನ್ನ ತಾವು ತೊಡಗಿಸಿಕೊಂಡಿದ್ದಾರೆ.

ಪದ್ಮಶ್ರೀ ಪ್ರಶಸ್ತಿ ಗೌರವಕ್ಕೆ ಪಾತ್ರರಾದ ಆಶಾ ಪಾರೇಖ್‌, ಫಿಲ್ಮ್‌ಫೇರ್ ಜೀವಮಾನ ಸಾಧನೆ ಪ್ರಶಸ್ತಿ, ಕಲಾಕರ್ ಪ್ರಶಸ್ತಿ, ಅಂತರರಾಷ್ಟ್ರೀಯ ಭಾರತೀಯ ಚಲನಚಿತ್ರ ಅಕಾಡೆಮಿ ಪ್ರಶಸ್ತಿಗಳು, ಮತ್ತು ಲಿವಿಂಗ್ ಲೆಜೆಂಡ್ ಪ್ರಶಸ್ತಿ ಹೀಗೆ ಇನ್ನೂ ಹಲವಾರು ಪ್ರಶಸ್ತಿಗಳನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ.

ಆಶಾ ಪಾರೇಖ್‌ ಚಿತ್ರರಂಗಕ್ಕೆ ಮಾಡಿರುವ ಜೀವಮಾನದ ಸಾಧನೆಗಾಗಿ ಇವರಿಗೆ ಭಾರತ ಸರ್ಕಾರದಿಂಧ  ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿಯನ್ನು ನೀಡಲಾಗುತ್ತಿದೆ ಎಂದು ಕೇಂದ್ರ ಸಚಿವ ಅನುರಾಗ್‌ ಠಾಕೂರ್‌ ಮಾಹಿತಿ ನೀಡಿದ್ದಾರೆ.

Related Articles

ಇತ್ತೀಚಿನ ಸುದ್ದಿಗಳು