Friday, June 14, 2024

ಸತ್ಯ | ನ್ಯಾಯ |ಧರ್ಮ

ಪಕೃತಿ ಸಂರಕ್ಷಕ ಕಲ್ಮನೆ ಕಾಮೇಗೌಡ ನಿಧನ

ಮಂಡ್ಯ: ಪಕೃತಿ ಸಂರಕ್ಷಕ ಎಂದೇ ಹೆಸರಾಗಿದ್ದ ದಾಸನದೊಡ್ಡಿ ಗ್ರಾಮದ ಕಲ್ಮನೆ ಕಾಮೇಗೌಡ ಅವರು ಇಂದು ಬೆಳಗ್ಗೆ ನಿಧನರಾಗಿದ್ದಾರೆ.

ಕುಟುಂದ ಮೂಲಗಳ ಪ್ರಕಾರ ಕಲ್ಮನೆ ಕಾಮೇಗೌಡರವರ ಅಂತ್ಯಕ್ರಿಯೆಯು ಇಂದು(ಸೋಮವಾರ) ಮಧ್ಯಾಹ್ನ 2 ಗಂಟೆಗೆ ನಡೆಯಲಿದೆ ಎಂದು ತಿಳಿದುಬಂದಿದೆ.

ಕುರಿಗಾಯಿಯಾಗಿದ್ದ ಕಲ್ಮನೆ ಕಾಮೇಗೌಡ ಅವರು, ಕುರಿ ಮಾರಿ ಸಂಪಾದಿಸದ ಹಣದಲ್ಲಿ ಮಂಡ್ಯ ಜಿಲ್ಲೆಯ ಮಳವಲ್ಲಿ ತಾಲ್ಲೂಕಿನ ದಾಸನದೊಡ್ಡಿ ಗ್ರಾಮದ ಕುಂದನಿ ಬೆಟ್ಟದ ಮೇಲೆ 15 ಕಟ್ಟೆ ಕಟ್ಟಿ ಪಕೃತಿ ಸಂರಕ್ಷಕ ಎಂದು ಪ್ರಸಿದ್ಧಿ ಪಡೆದಿದ್ದರು.

ತಾವು ಕಟ್ಟಿದ ಪ್ರತಿ ಕಟ್ಟೆಗೂ ದೇವರು ಮತ್ತು ತಮ್ಮ ಮೊಮ್ಮಕ್ಕಳ ಹೆಸರು ಇಟ್ಟು, ಹಲವಾರು ವರ್ಷಗಳಿಂದ ಅವುಗಳನ್ನು ಸಂರಕ್ಷಣೆ ಮಾಡಿ ಬೆಟ್ಟದ ಮೇಲೆ ನೂರಾರು ಮರಗಳನ್ನು ನೆಟ್ಟು ಅವುಗಳನ್ನು ತಮ್ಮ ಮಕ್ಕಳಂತೆ ಬೆಳಸಿ ಹಸಿರು ಪರಿಸರ ಇರುವಂತೆ ಮಾಡಿದ್ದರು.

2020 ರʼಮನ್‌ ಕಿ ಬಾತ್‌ʼ ಸರಣಿಯಲ್ಲಿ ಕಾಮೇಗೌಡರ ಪಕೃತಿ ಸೇವೆಯನ್ನು ಪ್ರಧಾನ ನರೇಂದ್ರ ಮೋದಿಯವರು ಕೊಂಡಾಡಿದ್ದರು. ಅಲ್ಲದೇ ಅನೇಕ ರಾಜಕೀಯ ನಾಯಕರುಗಳು, ಕ್ರೀಡಾಪಟುಗಳು ಕೂಡ ಅವರ ಸೇವೆಯನ್ನು ಮೆಚ್ಚಿದ್ದರು.

ಅವರ ಪಕೃತಿ ಸೇವೆಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ರಮಾಗೋವಿಂದ ಪ್ರಶಸ್ತಿ ಸೇರಿದಂತೆ ಇನ್ನು ಹಲವು ಪ್ರತಿಷ್ಠಿತ ಪ್ರಶಸ್ತಿಗಳು ಕೂಡ ದೊರಕಿದ್ದವು.

ಈ ಕುರಿತು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಟ್ವೀಟ್‌ ಮಾಡಿದ್ದು, ಜಲ ಸಂರಕ್ಷಣೆ ಕಾರ್ಯದಲ್ಲಿ ತೊಡಗಿಕೊಂಡು ಸುಮಾರು15 ಕ್ಕೂ ಹೆಚ್ಚು ಕೆರೆಗಳನ್ನು ನಿರ್ಮಿಸಿ ಆಧುನಿಕ ಭಗೀರಥ ಎಂದೇ ಖ್ಯಾತಿ ಗಳಿಸಿದ್ದ ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ದಾಸನದೊಡ್ಡಿಯ ಜಲಋಷಿ ಶ್ರೀ ಕಾಮೇಗೌಡರು ಇನ್ನಿಲ್ಲ ಎಂಬ ಸುದ್ದಿ ತಿಳಿದು ಅತ್ಯಂತ ದುಃಖವಾಯಿತು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ತಮ್ಮ ಮನ್ ಕೀ ಬಾತ್ ಕಾರ್ಯಕ್ರಮದಲ್ಲಿ ಸಹ ಕಾಮೇಗೌಡರ ಕಾರ್ಯವನ್ನು ಶ್ಲಾಘಿಸಿದ್ದರು. ಅವರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಸಂತಾಪ ಸೂಚಿಸಿದ್ದಾರೆ .

Related Articles

ಇತ್ತೀಚಿನ ಸುದ್ದಿಗಳು